ಸೋಮವಾರಪೇಟೆಯಲ್ಲಿ ಕಾರ್ಮಿಕರ ಬೃಹತ್ ಜಾಥಾ
ಕೊಡಗು

ಸೋಮವಾರಪೇಟೆಯಲ್ಲಿ ಕಾರ್ಮಿಕರ ಬೃಹತ್ ಜಾಥಾ

January 9, 2019

ಸೋಮವಾರಪೇಟೆ: ಕೇಂದ್ರ ಸರ್ಕಾರದ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋ ಧಿಸಿ ಪಟ್ಟಣದಲ್ಲಿ ಐಎನ್‍ಟಿಯುಸಿ, ಎಐಟಿಯುಸಿ, ಎಚ್.ಎಂ.ಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಐಸಿ ಸಿಟಿಯು, ಎಸ್‍ಇಡಬ್ಲ್ಯೂಎ, ಎಲ್‍ಪಿಎಫ್ ಹಾಗೂ ಯುಟಿಯುಸಿ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಾಥಾ ಮತ್ತು ಸಾರ್ವಜನಿಕ ಸಭೆ ನಡೆಯಿತು.
ಕಾರ್ಮಿಕರು ಪೌಷ್ಠಿಕಾಂಷ ಆಹಾರ ಬಳಕೆ ಮಾಡಲು, ಅವರು ಕೊಂಡು ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬೇಕಿದೆ. ಚುನಾವಣೆಗೂ ಮುನ್ನ ಬಿಜೆಪಿ ಪ್ರಮುಖರು ಬೆಲೆ ನಿಯಂತ್ರಿಸುವ ಹೇಳಿಕೆ ನೀಡಿದ್ದರೂ, ಅಧಿಕಾರಕ್ಕೇರಿದ ಬಳಿಕೆ ಅದು ಸಾಧ್ಯವಾ ಗಿಲ್ಲ. ಅಂತರರಾಷ್ಟ್ರದಲ್ಲಿ ಕಚ್ಛಾ ತೈಲದ ಬಳಕೆ ಕಡಿಮೆ ಇದ್ದರೂ, ವಿವಿಧ ತೆರಿಗೆಗ ಳನ್ನು ವಿಧಿಸುವ ಮೂಲಕ ಬೆಲೆ ಏರಿಸಲಾ ಗುತ್ತಿದೆ. ವಾರ್ಷಿಕ 2ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ ಕೇವಲ ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡಲು ಮಾತ್ರ ಸಾಧ್ಯವಾಗಿದೆ. ಯುವಕರು ಉದ್ಯೋಗ ಕೇಳಿದರೆ ಪಕ್ಕೊಡ ಮಾರಲು ಪ್ರಧಾನಿಗಳು ಹೇಳುತ್ತಿರುವುದು ಹಾಸ್ಯಾಸ್ಪದ ವಾಗಿದೆ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಭರತ್ ಹೇಳಿದರು.

ಅಂಗನವಾಡಿ ಪ್ರಮುಖರಾದ ಭಾಗೀರಥಿ ಮಾತನಾಡಿ, ದುಡಿಯುವ ವರ್ಗ ನಿರಂತರ ದುಡಿಯುತ್ತಿದ್ದು, ಸಾಕಷ್ಟು ಸಮಸ್ಯೆಗಳ ನಡುವೆ ಜೀವನ ನಡೆಸುತ್ತಿದ್ದಾರೆ. ಆದರೆ, ಮಹಿಳಾ ಅಧಿಕಾರಿಗಳು, ಮಂತ್ರಿಗಳು ಸೇರಿ ದಂತೆ ಯಾರೇ ಬಂದರೂ ಇವರ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಹಲವು ಗುತ್ತಿಗೆ ನೌಕರರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಕೆ ಮಾಡಿಕೊಳ್ಳು ತ್ತಿದ್ದಾರೆ ಎಂದು ದೂರಿದರು. ಸಮಾನವಾದ ಕೆಲಸಕ್ಕೆ ಸಮಾನ ವಾದ ವೇತನ ನೀಡುವಂತೆ ಆಗ್ರಹಿಸಿದರು.
ಅಂಗನವಾಡಿ ನೌಕರರ ರಾಜ್ಯ ಸಮಿತಿ ಸದಸ್ಯೆ ಶಾರದ ಹಾಗೂ ವಿವಿಧ ಸಂಘ ಟನೆಗಳ ಕಾವೇರಮ್ಮ, ಎಚ್.ಎಂ. ನವೀನ್, ನಾಗಮ್ಮ, ಚೇತನ್, ಜಮುನ, ಸಾವಿತ್ರಿ, ಚಂದ್ರಲೇಖ, ಫಿಲೋಮಿನ, ವಿ. ಕೃಷ್ಣ, ಅಣ್ಣಪ್ಪಶೆಟ್ಟಿ, ಪ್ರಕಾಶ್, ಉಮೇಶ್ ಸೇರಿ ದಂತೆ ಹಲವರು ಹಾಜರಿದ್ದರು.

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಲಾಯಿತು. ಕೇಂದ್ರ ಸರಕಾರÀ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿ ಸುತ್ತಿದೆ ಎಂದು ಆರೋಪಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳ ವಾರದಂದು ವಿವಿಧ ಕಾರ್ಮಿಕ ಸಂಘಟನೆ ಗಳು ಕರೆದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಸೋಮ ವಾರಪೇಟೆಯಲ್ಲಿ ಬೆಂಬಲ ವ್ಯಕ್ತವಾಗಲಿಲ್ಲ.

Translate »