ಕಾರ್ಮಿಕ ಸಂಘಟನೆಗಳ ಮುಂದುವರೆದ ಮುಷ್ಕರ
ಕೊಡಗು

ಕಾರ್ಮಿಕ ಸಂಘಟನೆಗಳ ಮುಂದುವರೆದ ಮುಷ್ಕರ

January 10, 2019

ಮಡಿಕೇರಿ: ಕೇಂದ್ರ ಸರಕಾರ ಬೆಲೆ ಏರಿಕೆ ಮತ್ತು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ನಗರದ ಇಂದಿರಾಗಾಂಧಿ ವೃತ್ತದಿಂದ ಸಹಸ್ರ ಸಂಖ್ಯೆಯಲ್ಲಿದ್ದ ವಿವಿಧ ಸಂಘಟನೆ ಗಳ ಕಾರ್ಯಕರ್ತರು ಗಾಂಧಿ ಮೈದಾನದ ವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಕೇಂದ್ರ ಸರಕಾರದ ಬೆಲೆ ಏರಿಕೆ, ಕಾರ್ಮಿಕ ಮಸೂದೆ ಅಂಗೀಕಾರಕ್ಕೆ ಒತ್ತಡ ಮತ್ತು ಪ್ರತಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿ ರುವ ಕಾರ್ಮಿಕರಿಗೆ ಕನಿಷ್ಠ 18 ಸಾವಿರ ರೂ.ವೇತನ ನೀಡುವಂತೆ ಪ್ರತಿಭಟ ನಾಕಾರರು ಆಗ್ರಹಿಸಿದರು.

ದೇಶದ ಆರ್ಥಿಕತೆಯ ಬೆನ್ನೆಲುಬಾಗಿ ರುವ ಉದ್ದಿಮೆಗಳ ಖಾಸಗೀಕರಣವನ್ನು ಕೈ ಬಿಡಬೇಕು. ನಿರುದ್ಯೋಗ ಸಮಸ್ಯೆಯ ನಿವಾರಣೆಗೆ ಮೊದಲ ಆದ್ಯತೆ ನೀಡು ವಂತೆ ಆಗ್ರಹಿಸಿದ ಕಾರ್ಮಿಕ ಸಂಘಟನೆ ಗಳ ಕಾರ್ಯಕರ್ತರು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಒತ್ತಾಯಿಸಿದರು.

ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಗೆ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಕಾರ್ಮಿಕರ ಮೇಲೆ ಗುಲಾ ಮಗಿರಿ ನೀತಿ ಹೇರುವುದುದನ್ನು ಕೈಬಿಡ ಬೇಕೆಂದು ಒತ್ತಾಯಿಸಿದರು. ನೋಟು ಅಮಾ ನ್ಯೀಕರಣ, ಜಿಎಸ್‍ಟಿ, ವಿದೇಶಿ ನೇರ ಬಂಡ ವಾಳ ಹೂಡಿಕೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು. ನಗರದ ಸ್ಕ್ಟಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಸಾಗಿ ಬಂದ ಪ್ರತಿಭಟನಾಕಾ ರರು ಗಾಂಧಿ ಮೈದಾನದಲ್ಲಿ ಸಮಾವೇಶ ಗೊಂಡರು. ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸಂಚಾಲಕ ಟಿ.ಪಿ.ರಮೇಶ್ ಮಾತನಾಡಿ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ರಾಷ್ಟ್ರವ್ಯಾಪ್ತಿ 2 ದಿನಗಳ ಕಾಲ ಮುಷ್ಕರಕ್ಕೆ ಮಾತ್ರ ಕರೆ ನೀಡಿತ್ತು ಎಂದು ಹೇಳಿದರಲ್ಲದೇ, ಕೊಡಗಿನ 3 ತಾಲೂಕುಗಳಲ್ಲಿ ಯಶಸ್ವಿ ಪ್ರತಿಭಟನೆ ನಡೆ ಸಲಾಗಿದ್ದು, ವಿವಿಧ ಬೇಡಿಕೆಗಳನ್ನು ಈಡೇ ರಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗಿದೆ ಎಂದು ತಿಳಿಸಿದರು. ಅಸಂಘಟಿತ ಕಾರ್ಮಿಕರಿಗೆ ಕಾನೂನು ಬದ್ಧ ಸೌಲಭ್ಯ ದೊರೆಯಬೇಕು. ಅದು ಸಂವಿ ಧಾನದ ಆಶಯವೂ ಆಗಿದ್ದು, ಕೇಂದ್ರ ಸರಕಾರ ಕಾರ್ಮಿಕ ಮಸೂದೆ ಮೂಲಕ ಅದನ್ನು ಜಾರಿ ಮಾಡಲೇಬೇಕೆಂದು ಟಿ.ಪಿ. ರಮೇಶ್ ಆಗ್ರಹಿಸಿದರು.

ಕಾರ್ಮಿಕ ಸಂಘಟನೆಗಳ ಮುಖಂಡ ಪಿ.ಆರ್. ಭರತ್ ಮಾತನಾಡಿ, ಕಾರ್ಮಿ ಕರು ಮತ್ತು ಕೃಷಿಕರು ದೇಶದ ಬೆನ್ನಲುಬು ಎಂಬುದನ್ನು ಕೇಂದ್ರ ಸರಕಾರ ಮನೆಗಾ ಣಬೇಕು. ಪ್ರತಿ ಕಾರ್ಮಿಕನಿಗೂ ಕನಿಷ್ಠ 18 ಸಾವಿರ ರೂ. ವೇತನ ಪಾವತಿಸ ಬೇಕು. ವಿವಿಧ ಇಲಾಖೆಗಳಲ್ಲಿ ಸ್ಕೀಂ ಆಧಾ ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿ ಕರನ್ನು ಖಾಯಂಗೊಳಿಸಿ ಕಾರ್ಮಿಕ ಕಾನೂ ನುಗಳನ್ನು ದೇಶದಲ್ಲಿ ವ್ಯವಸ್ಥಿತವಾಗಿ ಜಾರಿ ಗೊಳಿಸಬೇಕೆಂದು ಆಗ್ರಹಿಸಿದರು. ನಿರು ದ್ಯೋಗ ಸಮಸ್ಯೆ ದೇಶಕ್ಕೆ ಒಂದು ಪಿಡು ಗಾಗಿ ಪರಿಣಮಿಸಿದ್ದು, ಯುವ ಜನರಿಗೆ ಉದ್ಯೋಗ ಕಲ್ಪಿಸಬೇಕೆಂದು ಒತ್ತಾಯಿ ಸಿದರು. ಕಾರ್ಮಿಕರ ಬೇಡಿಕೆಗಳನ್ನು ಈಡೇ ರಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಭರತ್ ಎಚ್ಚರಿಸಿದರು.

ಬಳಿಕ ಪ್ರತಿಭಟನೆಯ ಮನವಿ ಪತ್ರ ವನ್ನು ಜಿಲ್ಲಾಡಳಿತ ಮೂಲಕ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಯಿತು. ಪ್ರತಿಭಟ ನೆಯಲ್ಲಿ ಅಂಗನವಾಡಿ ಕಾರ್ಯಕರ್ತರ ಸಂಘ, ತಲೆಹೊರೆ ಕಾರ್ಮಿಕರ ಸಂಘ, ಪ್ಲಾಂಟೇಷನ್, ಕಟ್ಟಡ, ಹಮಾಲಿ, ರಸ್ತೆ ಬದಿ ವ್ಯಾಪಾರಿಗಳು, ಆಶಾ ಕಾರ್ಯ ಕರ್ತರು, ಬಿಎಸ್‍ಎನ್‍ಎಲ್, ಗ್ರಾಪಂ ನೌಕ ರರ ಸಂಘಟನೆ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

Translate »