ಕೊಳ್ಳೇಗಾಲ: ಜಿಲ್ಲೆಯ ಹನೂರು ತಾಲೂಕಿನ ಸುಳವಾಡಿ ಗ್ರಾಮ ದಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂ ಧಿಸಿದಂತೆ ಆರೋಪಿಗಳ ವಿರುದ್ಧ ನಿರ್ದಾ ಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. ಇಂತಹ ಪ್ರಕರಣ ಮರುಕಳಿಸಬಾರದು. ಜ.21 ರಿಂದ ನಡೆಯುವ ಚಿಕ್ಕಲ್ಲೂರು ಜಾತ್ರೆಯ ವೇಳೆ ಪ್ರಸಾದ ವಿತರಣೆ ವೇಳೆ ಎಚ್ಚರ ವಹಿಸಬೇಕು. ಸುಳವಾಡಿಯಂತೆ ಏನಾ ದರೂ ದುರಂತ ಸಂಭವಿಸಿದರೆ ಚಿಕ್ಕಲ್ಲೂರು ಹಳೆ ಮತ್ತು ಹೊಸ ಮಠದ ಸಮಿತಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗು ವುದು ಎಂದು ಜಿಲ್ಲಾ ಪೊಲೀಸ್ ವರಿ ಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಎಚ್ಚರಿಕೆ ನೀಡಿದರು.
ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಜಿಪಂ ಅಧ್ಯಕ್ಷೆ ಶಿವಮ್ಮ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರ ನೇತೃತ್ವದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿ ದರು. ಚಿಕ್ಕಲ್ಲೂರು ಜಾತ್ರೆ ಸುಸೂತ್ರವಾಗಿ ನಡೆಯಲು ಅನುವಾಗುವಂತೆ ಮಠದ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತರು ಸಹಕರಿಸಬೇಕು. ಸುಳವಾಡಿ ಪ್ರಕ ರಣದಂತೆ ಅಹಿತಕರ ಘಟನೆ ಜಾತ್ರೆಯಲ್ಲಿ ಸಂಭವಿಸಿದರೆ ಹೊಸ ಮಠ ಅಧ್ಯಕ್ಷ ಸ್ವಾಮಿ, ಹಳೆ ಮಠದ ವ್ಯವಸ್ಥಾಪಕ ಬಸವ ರಾಜು ಹಾಗೂ ಸಮಿತಿಯವರನ್ನು ನೇರ ಹೊಣೆಗಾರರನ್ನಾಗಿಸಲಾಗುವುದು ಎಂದು ತಿಳಿಸಿದರು.
ಜಾತ್ರೆ ವೇಳೆ ಸುಗಮ ಸಂಚಾರ ವ್ಯವಸ್ಥೆ ಮಾಡಲಾಗುವುದು. ಅಗತ್ಯವಿರುವೆಡೆ ಚೆಕ್ ಪೋಸ್ಟ್‍ಗಳನ್ನು ತೆರೆಯಲಾಗುವುದು. ಜಾತ್ರಾ ಕಾರ್ಯಕ್ಕೆ ನಿಯೋಜಿಸಲಾಗುವ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು. ದೇವಾಲಯದ ಸುತ್ತ ಮುತ್ತಲಿನ ಸ್ಥಳಗಳಲ್ಲಿ ಸಿ.ಸಿ.ಟಿ.ವಿಗಳನ್ನು ಅಳವಡಿಸಬೇಕು. ಪೊಲೀಸ್ ಇಲಾಖೆ ಯಿಂದ ಎಲ್ಲಾ ವ್ಯವಸ್ಥಿತ ಕ್ರಮಗಳನ್ನು ವಹಿ ಸಲಾಗುವುದು ಎಂದರು.
ಪ್ರಾಣಿ ಬಲಿ ನಿಷೇಧಕ್ಕೆ ಕ್ರಮ: ಜಿಲ್ಲಾಧಿ ಕಾರಿ ಬಿ.ಬಿ.ಕಾವೇರಿ ಮಾತನಾಡಿ, ಈ ಬಾರಿಯ ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರಾಣಿ ಬಲಿಯನ್ನು ಕಟ್ಟುನಿಟ್ಟಾಗಿ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಾತ್ರೆಯಲ್ಲಿ ಪ್ರಾಣಿಬಲಿ ನಡೆಯದಂತೆ ಹೈಕೋರ್ಟ್ ನಿರ್ದಿಷ್ಟ ಆದೇಶ ನೀಡಿದೆ. ಅದರಂತೆ ಕಳೆದ ಬಾರಿಯು ಪ್ರಾಣಿ ಬಲಿ ತಡೆಯಲಾಗಿತ್ತು. ಈ ಬಾರಿಯು ಪ್ರಾಣಿ ಬಲಿ ನಡೆಯದಂತೆ 6 ಮಂದಿ ಸೆಕ್ಟರ್ ಮ್ಯಾಜಿಸ್ಟ್ರೇಟರ್‍ಗಳನ್ನು ನೇಮಿಸಿ ಕ್ರಮ ವಹಿಸಲಾಗುವುದು. ಅಧಿಕಾರಿಗಳೊಂದಿಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತರು ಸಹಕಾರ ನೀಡಬೇಕು ಎಂದÀರು.
ಮೂಲಸೌಲಭ್ಯ ಕಲ್ಪಿಸಲು ಸೂಚನೆ: ಶಾಸಕ ಆರ್.ನರೇಂದ್ರ ಮಾತನಾಡಿ, ಜಾತ್ರೆಗೆ ಬರುವ ಭಕ್ತಾದಿಗಳಿಗೆ ಕುಡಿ ಯುವ ನೀರು, ನೈರ್ಮಲ್ಯ ವ್ಯವಸ್ಥೆ ಕಾಪಾ ಡಲು ವಿಶೇಷ ಗಮನ ನೀಡಬೇಕು. ಲಭ್ಯ ವಿರುವ ಕುಡಿಯುವ ನೀರಿನ ಮೂಲ ಗಳನ್ನು ಬಳಕೆ ಮಾಡಿಕೊಂಡು ಶುದ್ಧ ವಾದ ನೀರಿನ ಪೂರೈಕೆ ಮಾಡಬೇಕು. ಕುಡಿಯುವ ನೀರು ಬಳಕೆಗೆ ಯೋಗ್ಯ ವಾಗಿದೆಯೇ ಎಂಬ ಬಗ್ಗೆ ಆರೋಗ್ಯಾ ಧಿಕಾರಿಗಳು ದೃಢೀಕರಿಸಬೇಕು ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗ ಮಿಸುವ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಗಮನ ನೀಡಬೇಕು. ಶೌಚಾಲಯಗಳು ಇನ್ನಿತರ ವ್ಯವಸ್ಥೆಗಳನ್ನು ಸರಿಯಾಗಿ ನಿರ್ವಹಿಸಬೇಕು. ಶೌಚಾಲಯ ಬಳಕೆಗೆ ನೀರು ಪೂರೈಕೆ ವ್ಯವಸ್ಥೆ ಮಾಡಲು ಕ್ರಮ ವಹಿಸಬೇಕು ಎಂದರು.
ಶಾಸಕ ಎನ್.ಮಹೇಶ್ ಮಾತನಾಡಿ, ಸಂಚಾರ ವ್ಯವಸ್ಥೆಗೆ ಹಾಗೂ ಜನರ ಒಡಾ ಟಕ್ಕೆ ತೊಂದರೆಯಾಗದ ರೀತಿಯಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿಕೊಳ್ಳಲು ಅನುಮತಿಸ ಬೇಕು. ಜಾತ್ರಾ ಸಮಯದಲ್ಲಿ ವೈದ್ಯರು 24*7 ಅವಧಿಯಲ್ಲಿಯು ಲಭ್ಯರಿರಬೇಕು. ಅಗತ್ಯ ಔಷಧೋಪಚಾರಗಳೊಂದಿಗೆ ಸನ್ನದ್ಧರಾಗಿರಬೇಕು ಎಂದು ಸೂಚಿಸಿದರು.
ಚಿಕ್ಕಲ್ಲೂರು ಜಾತ್ರಾ ಕ್ಷೇತ್ರ ಸಂಪರ್ಕಿ ಸುವ ರಸ್ತೆಗಳನ್ನು ಸರಿಪಡಿಸುವ ಕಾರ್ಯ ತ್ವರಿತಗತಿಯಲ್ಲಿ ಆಗಬೇಕು. ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ತುರ್ತಾಗಿ ಕ್ರಮ ವಹಿಸಬೇಕು. ರಸ್ತೆ ಕೆಲಸ ಪೂರ್ಣಗೊಂಡ ಬಳಿಕ ರಸ್ತೆಯನ್ನು ಪರಿಶೀಲಿಸಲಾಗುವುದು ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಉಪವಿಭಾಗಾಧಿಕಾರಿ ಬಿ. ಫೌಜಿಯಾ ತರುನ್ನುಮ್, ಡಿವೈಎಸ್‍ಪಿ ಪುಟ್ಟ ಮಾದಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್, ತಹಸೀಲ್ದಾರ್ ರಾಯಪ್ಪ ಹುಣ ಸಗಿ, ತಾಪಂ ಅಧ್ಯಕ್ಷ ರಾಜೇಂದ್ರ, ಚಿಕ್ಕಲ್ಲೂರು ಭಾಗದ ಗ್ರಾಪಂ ಅಧ್ಯಕ್ಷರು, ದೇವಾಲ ಯದ ಆಡಳಿತ ಮಂಡಳಿಯ ಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಾಣಿ ಬಲಿ ತಡೆಗೆ ಸ್ಥಳ ನಿಗದಿಗೊಳಿಸುವಂತೆ ನಿರ್ದೇಶನ
ಭಕ್ತರ ಭಾವನೆಗೆ ಬೆಲೆ ಕೊಡಿ, ಚಿಕ್ಕಲ್ಲೂರಲ್ಲಿ ಬಲಿ ಪೀಠವಿಲ್ಲ, ಮಾಂಸಾಹಾರ ಸೇವನೆ ಆಗುತ್ತೆ, ಪ್ರಾಣಿ ಬಲಿ ನೀಡಲ್ಲ: ಸಭೆಯಲ್ಲಿ ಶಾಸಕರ ಸಮರ್ಥನೆ
ಕೊಳ್ಳೇಗಾಲ, ಜ.9(ನಾಗೇಂದ್ರ)- ಇತಿಹಾಸ ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯ ಸಂದರ್ಭದಲ್ಲಿ ಪ್ರಾಣಿ ಬಲಿ ತಡೆಗೆ ಸ್ಥಳ ನಿಗದಿಗೊಳಿಸುವ (ಬೌಂಡ್ರಿ ಫಿಕ್ಸ್ ಮಾಡಿ) ಮೂಲಕ ಮಾಂಸಾಹಾರಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಮುಂದಾ ಗುವ ಅನಾಹುತಕ್ಕೆ ನಾವು ಹೊಣೆಗಾರರಲ್ಲ. ನೀವೆ ಹೊಣೆ ಹೊರಬೇಕಾಗುತ್ತದೆ. ನಾವು ಬರಲ್ಲ… ಎಂದು ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್ ಹೇಳಿದರು.
ಚಿಕ್ಕಲ್ಲೂರು ಜಾತ್ರೆಯ ಹಿನ್ನೆಲೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕದ್ವಯರು, ಪ್ರಾಣಿ ಬಲಿ ನೀಡಲು ದೇವಾಲಯದ ಆವರಣದಲ್ಲಿ ಬಲಿ ಪೀಠವಿಲ್ಲ. ಇದು ಆಹಾರ ಪದ್ಧತಿ. ಹಾಗಾಗಿ, ಜಾತ್ರೆಯ ಆವರಣದೊಳಗೆ ಪ್ರಾಣಿ ಬಲಿ ನೀಡದಂತೆ ಸ್ಥಳ ನಿಗದಿಪಡಿಸಿ, ಭಕ್ತರ ಭಾವನೆಗೆ ಗೌರವಿಸಿ ಎಂದು ಪಟ್ಟು ಹಿಡಿದರು.
ಭಕ್ತರ ಸಂಪ್ರದಾಯ, ಭಾವನೆಗೆ ಅಧಿಕಾರಿಗಳು ಮನ್ನಣೆ ನೀಡ ಬೇಕು. ಹೈಕೋರ್ಟ್ ಆದೇಶವನ್ನು ಪಾಲಿಸಿ, ಹೊಸ ಮಠ ಹಾಗೂ ಹಳೆ ಮಠದ ಆವರಣದಲ್ಲಿ ಪ್ರಾಣಿ ಬಲಿ ತÀಡೆಗೆ ನಿರ್ದಿಷ್ಟ ಸ್ಥಳ ನಿಗದಿ ಮಾಡಿ. ಜಾತ್ರೆಯಲ್ಲಿ ಪಂಕ್ತಿ ಸೇವೆಗೆ ಯಾವುದೇ ಅಡ್ಡಿಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಮಹೇಶ್ ಮಾತನಾಡಿ, ಇದು ಭಾವನಾತ್ಮಕ ವಿಚಾರ. ನಮ್ಮ ಭಕ್ತಿಯನ್ನು ಯಾರೋ ಬಂದು ಪ್ರಶ್ನಿಸುವ ಕೆಲಸ ಮಾಡಿದ್ದಾರೆ. ಈ ಹಿಂದೆ ನಾನು ಹಾಗೂ ಶಾಸಕ ನರೇಂದ್ರ ಅವರು ಭಕ್ತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇವು. ಈ ಹಿನ್ನೆಲೆ ಅಧಿಕಾರಿಗಳು ಭಕ್ತರ ಭಾವನೆ ಗೌರವಿಸಿ ಮಾಂಸಾ ಹಾರ ಪದ್ಧಗೆ ಅವಕಾಶ ಮಾಡಿಕೊಡಿ. ಸಿದ್ದಪ್ಪಾಜಿ, ಮಂಟೇ ಸ್ವಾಮಿ ಪರಂಪರೆಯಲ್ಲಿ ಪ್ರಾಣಿ ಬಲಿ ಎನ್ನುವುದು ಇಲ್ಲ. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದರು.
ಜ.21ರಿಂದ ಚಿಕ್ಕಲ್ಲೂರು ಜಾತ್ರೆ
ಜಿಲ್ಲೆಯ ಪ್ರಸಿದ್ಧ ಯಾತ್ರಾಕ್ಷೇತ್ರ ಚಿಕ್ಕಲ್ಲೂರಿನಲ್ಲಿ ಜನವರಿ 21ರಿಂದ 26ರವರೆಗೆ ಒಟ್ಟು 5 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಜ.21ರಂದು ಚಂದ್ರಮಂಡಲೋತ್ಸವ, ಜ.22ರಂದು ಹುಲಿವಾಹನೋ ತ್ಸವ, ಜ.23ರಂದು ಮುಡಿಸೇವೆ, ಜ.24ರಂದು ಪಂಕ್ತಿ ಸೇವೆ, ಜ.25 ರಂದು ಮುತ್ತತ್ತಿ ರಾಯನ ಸೇವೆಯೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ.
ಜಾತ್ರೆ ನಡೆಯುವ ದಿನಗ ಳಲ್ಲಿ ಸ್ವಚ್ಛತೆ, ನಿರಂತರ ಕುಡಿ ಯುವ ನೀರು ಸರಬರಾಜು, ವಿದ್ಯುತ್ ಪೂರೈಕೆ, ಆರೋಗ್ಯ ಸೇವೆ, ಸಾರಿಗೆ ವ್ಯವಸ್ಥೆ ಸೇರಿದಂತೆ ಅಗತ್ಯ ಸೇವೆಗ ಳನ್ನು ಕಲ್ಪಿಸಲು ಅಧಿಕಾರಿಗಳು ಸಜ್ಜಾಗ ಬೇಕು. ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ಮೂಲ ಸೌಲಭ್ಯ ಕೊರತೆ ಯಾಗದಂತೆ ಕ್ರಮ ಕೈಗೊಳ್ಳಬೇಕು. -ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ