ರೈತರು ಕೃಷಿ ಇಲಾಖೆಯೊಂದಿಗೆ ಸಂಪರ್ಕ ಹೊಂದಲು ಸಲಹೆ
ಚಾಮರಾಜನಗರ

ರೈತರು ಕೃಷಿ ಇಲಾಖೆಯೊಂದಿಗೆ ಸಂಪರ್ಕ ಹೊಂದಲು ಸಲಹೆ

January 10, 2019

ಗುಂಡ್ಲುಪೇಟೆ: ಕೃಷಿ ಇಲಾಖೆಯು ರೈತಾಪಿ ವರ್ಗಕ್ಕೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಇದನ್ನು ಪಡೆದುಕೊಳ್ಳಲು ಕೃಷಿ ಇಲಾಖೆಯ ಜೊತೆ ರೈತರು ನಿರಂತರವಾಗಿ ಸಂಪರ್ಕ ಹೊಂದ ಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಘವಾಪುರ ದೇವಯ್ಯ ಕಿವಿ ಮಾತು ಹೇಳಿದರು.

ತಾಲೂಕಿನ ರಾಘವಾಪುರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಬೇಸಾಯ ಚಟುವಟಿಕೆಗಳು ಹಾಗೂ ಬೀಜೋಪ ಚಾರ ಆಂದೋಲನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಳೆಯಾಶ್ರಿತ ಪ್ರದೇಶವಾದ ಇಲ್ಲಿ ರೈತರು ಹವಾಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆ ಯುವ ಪದ್ಧತಿ ಮತ್ತು ಹನಿ ನೀರಾವರಿ, ತುಂತುರು ನೀರಾವರಿ ಸೇರಿದಂತೆ ಹತ್ತು ಹಲವು ವಿಧಾನಗಳನ್ನು ಅನುಸರಿಸುತ್ತಿ ದ್ದಾರೆ. ಇದರೊಂದಿಗೆ ಕೃಷಿ ಇಲಾಖೆಯ ನಿರಂತರ ಸಂಪರ್ಕ ಹೊಂದಿದಾಗ ಮಾತ್ರ ಸರ್ಕಾರದ ಸವಲತ್ತುಗಳು ಮತ್ತು ಅದರ ಉಪಯೋಗವೇನು ಎಂಬುದು ಗೊತ್ತಾ ಗುತ್ತದೆ. ಈ ನಿಟ್ಟಿನಲ್ಲಿ ರೈತರು ನಿರಂ ತರವಾಗಿ ಕೃಷಿ ಇಲಾಖೆಯ ಸಂಪರ್ಕ ದಲ್ಲಿರಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಪಂಚಾಯತಿ ಸದಸ್ಯ ಕೆ.ಪ್ರಭಾಕರ್ ಮಾತನಾಡಿ, ಕೃಷಿ ಇಲಾಖೆಯು ಕೃಷಿಗೆ ಸಂಬಂಧಿಸಿದ ಪರಿಕರಗಳನ್ನು ನೀಡುವುದರ ಜೊತೆಗೆ ತರಬೇತಿಯನ್ನು ನೀಡುತ್ತಿದೆ. ಇದರ ಸದುಪಯೋಗ ಪಡೆದು ಉತ್ತಮ ಗುಣಮ ಟ್ಟದ ಫÀಸಲು ಬೆಳೆಯಬೇಕು ಎಂದರು.

ಕೃಷಿ ತಜ್ಞ ಡಾ.ಅರಸು ಮಲ್ಲಯ್ಯ ನೈಸ ರ್ಗಿಕ ಕೃಷಿಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಬಳಿಕ, ನಿವೃತ್ತ ಸಹಾಯಕ ನಿರ್ದೇಶಕ ಶ್ರೀನಿವಾಸಶೆಟ್ಟಿ ಬೀಜ ಉಪ ಚಾರ ಬಗ್ಗೆ ಪ್ರತ್ಯಕ್ಷತೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯೆ ಶಾಂತಮ್ಮ, ಕೃಷಿ ಅಧಿಕಾರಿ ವೆಂಕಟಾಚಲ, ಎಟಿಎಂ ದೊರೆರಾಜ್, ರೈತ ಮುಖಂಡ ಪಾಪಣ್ಣ ಇತರರು ಹಾಜರಿದ್ದರು.

Translate »