ವಿಷಪ್ರಾಶನ ಪ್ರಕರಣ: ಮತ್ತೆ 6 ಮಂದಿ ಆಸ್ಪತ್ರೆಗೆ ದಾಖಲು
ಚಾಮರಾಜನಗರ

ವಿಷಪ್ರಾಶನ ಪ್ರಕರಣ: ಮತ್ತೆ 6 ಮಂದಿ ಆಸ್ಪತ್ರೆಗೆ ದಾಖಲು

ಕೊಳ್ಳೇಗಾಲ: ಹನೂರು ತಾಲೂಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ವಸ್ಥಗೊಂಡು ಮೈಸೂರಿನ ಖಾಸಗಿ ಆಸ್ಪ ತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಹಿಂತಿರುಗಿದ್ದವರ ಪೈಕಿ ಮತ್ತೆ 6 ಮಂದಿ ಅಸ್ವಸ್ಥಗೊಂಡು ಪಟ್ಟಣ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಂ.ಜಿ.ದೊಡ್ಡಿ ಗ್ರಾಮದ ರೇಖಾ, ಮಲ್ಲಿಗೆ, ಪಳನಿಯಮ್ಮ, ವೀರಮ್ಮ, ಪಳನಿ ಹಾಗೂ ಕಮಲ ಎಂಬುವವರು ಬುಧವಾರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾದವರು. ಈ 6 ಮಂದಿಗೂ ಮಂಗಳವಾರ ಮಧ್ಯರಾತ್ರಿ ಹೊಟ್ಚೆ ಉರಿ, ಎದೆ ಉರಿ, ತಲೆ ನೋವು, ವಾಂತಿ ಮತ್ತು ಬೇಧಿ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅವರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.

January 10, 2019

Leave a Reply

Your email address will not be published. Required fields are marked *