ಮಂಡ್ಯ, ಏ.26(ನಾಗಯ್ಯ)- ಆತ್ಮಹತ್ಯೆಗೆ ಯತ್ನಿಸಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಶಾ ಕಾರ್ಯಕರ್ತೆಯನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಸಾಂತ್ವನ ಹೇಳಿ ಸಹಾಯ ಧನದ ಚೆಕ್ ವಿತರಿಸಿದರು. ಕೊರೊನಾ ಪರೀಕ್ಷೆ ನಡೆಸಲು ಹೋಗಿದ್ದ ಶ್ರೀರಂಗಪಟ್ಟಣ ತಾಲೂಕಿನ ಉರುಳಿಕ್ಯಾತನಹಳ್ಳಿಯ ಆಶಾ ಕಾರ್ಯಕರ್ತೆ ಮೀನಾಕ್ಷಿರವರನ್ನು ಗ್ರಾಪಂ ಅವಿನಾಶ್ ಹಾಗೂ ಹಾಗೂ ಆತನ ತಂದೆ ಹೀಯಾಳಿಸಿದ್ದು, ಇದರಿಂದ ಮನನೊಂದ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಅವರನ್ನು ವಿದ್ಯಾರಣ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ…
ಹಾವು ಕಚ್ಚಿ ರೈತ ಸಾವು
April 27, 2020ಕೆ.ಆರ್.ಪೇಟೆ, ಏ.26- ಜಮೀನಲ್ಲಿ ಹಾವು ಕಚ್ಚಿ ರೈತ ನೋರ್ವ ಸಾವನ್ನ ಪ್ಪಿರುವ ಘಟನೆ ತಾಲೂಕಿನ ಕಾಡು ಮೆಣಸ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಕಾಡು ಮೆಣಸ ಗ್ರಾಮದ ನಿವಾಸಿ ದೊಡ್ಡೇಗೌಡ ಉರುಫ್ ಮೊಗಣ್ಣಗೌಡ (79) ಸಾವನ್ನ ಪ್ಪಿದ ರೈತ. ಈತ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಡಿದಿದೆ. ಪರಿಣಾಮ ತೀವ್ರ ಅಸ್ವಸ್ಥಗೊಂಡ ಅವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥ ಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆದಲ್ಲಿ ಸಾವನ್ನಪ್ಪಿದ್ದಾರೆ ಎಂದು…
ವಾರದೊಳಗೆ ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸುವಂತೆ ಡಿಸಿ ಸೂಚನೆ
April 24, 2020ಜೂನ್‍ಗೆ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಲು ಕ್ರಮ ಮಂಡ್ಯ, ಏ.23(ನಾಗಯ್ಯ)- ಕಬ್ಬು ಸರಬರಾಜು ಮಾಡಿರುವ ರೈತರಿಗೆ ನೀಡ ಬೇಕಾಗಿರುವ ಬಾಕಿ ಹಣವನ್ನು ವಾರದೊಳಗೆ ಪಾವತಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲೆಡೆ ಹರಡಿರುವ ಕೋವಿಡ್-19 ವೈರಸ್ ಸಮಸ್ಯೆಯಿಂದಾಗಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಪರಿ ಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿಯೂ ರೈತರಿಗೆ ನೀಡಬೇಕಿರುವ ಕಬ್ಬಿನ…
ನಿಗದಿಗಿಂತ ಹೆಚ್ಚಿನ ದರಕ್ಕೆ ಅಗತ್ಯ ವಸ್ತುಗಳ ಮಾರಾಟ ಮೆಡಿಕಲ್ ಶಾಪ್ ಸೇರಿ 20 ಅಂಗಡಿಗಳ ಮೇಲೆ ಕೇಸ್ ದಾಖಲು
April 24, 2020ಮಂಡ್ಯ, ಏ.23(ನಾಗಯ್ಯ)- ಸ್ಯಾನಿಟೈಸರ್ ಸೇರಿದಂತೆ ಅಗತ್ಯ ವಸ್ತುಗಳನ್ನು ಸರ್ಕಾರ ನಿಗದಿಪಡಿಸಿರುವುದÀಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ಆರೋಪದ ಮೇಲೆ ನಗರದ ವಿವಿಧೆಡೆ ಮೆಡಿಕಲ್ ಶಾಪ್ ಕಿರಾಣಿ ಅಂಗಡಿಗಳು ಸೇರಿದಂತೆ ಸುಮಾರು 20 ಅಂಗಡಿ ಮಂದಿ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸ ಲಾಗಿದ್ದು 55 ಸಾವಿರಕ್ಕೂ ಹೆಚ್ಚು ದಂಡವನ್ನು ವಿಧಿಸಲಾಗಿದೆ. ಅಗತ್ಯ ವಸ್ತುಗಳನ್ನು ಅದರಲ್ಲಿಯೂ ವಿಶೇಷವಾಗಿ ಆಹಾರ ಸಾಮಾಗ್ರಿಗಳನ್ನು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವ ಬಗ್ಗೆ ಕಾನೂನು ಮಾಪನ ಸಹಾಯಕ ನಿಯಂತ್ರಕರು THE PREVENTION OF BLACK…
ಕೊರೊನಾ ಎಫೆಕ್ಟ್; ರಸ್ತೆಯಲ್ಲಿ ಬಿದ್ದಿದ್ದ 500 ರೂ. ನೋಟುಗಳನ್ನು ಮುಟ್ಟದ ಜನತೆ.!
April 23, 2020ಮಂಡ್ಯ, ಏ.22(ನಾಗಯ್ಯ)- ರಸ್ತೆಯಲ್ಲಿ ಬಿದ್ದಿದ್ದ 500 ರೂ. ಮುಖಬೆಲೆಯ ನೋಟುಗಳನ್ನು ಕೊರೊನಾ ಭೀತಿಯಿಂದಾಗಿ ಮುಟ್ಟದೆ ಜನತೆ ಭಯಭೀತರಾದ ಘಟನೆ ಪಾಂಡವಪುರ ಪಟ್ಟಣದಲ್ಲಿಂದು ಜರುಗಿದೆ. ಪಾಂಡವಪುರ ಪಟ್ಟಣದ ಗಾಣಿಗರ ಬೀದಿಯಲ್ಲಿ 500 ರೂಪಾಯಿ ಮುಖಬೆಲೆಯ 6 ನೋಟುಗಳು ಬಿದ್ದಿದ್ದರೂ ಕೂಡಾ ಜನರು ಅದನ್ನು ತೆಗೆದು ಕೊಳ್ಳದೇ ಪೆÇಲೀಸರಿಗೆ ಮಾಹಿತಿ ಮುಟ್ಟಿಸಿದರು. ಸ್ಥಳಕ್ಕಾಗಮಿಸಿದ ಪಟ್ಟಣ ಠಾಣೆಯ ಪಿಎಸ್‍ಐ ಸುಮಾರಾಣಿ ಸೂಕ್ಷ್ಮವಾಗಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಬಳಿಕ ನೋಟಿನ ಮೇಲೆ ಸ್ಯಾನಿಟೈಸರ್ ಸಿಂಪಡಿಸಿ, ಕೈಗೆ ಗ್ಲೌಸ್ ಧರಿಸಿ ನೋಟು ಎತ್ತಿಕೊಂಡ ಬಳಿಕ…
ಕೊರೊನಾ ನಿಯಂತ್ರಣಕ್ಕೆ ಔಷಧಿ ಸಿಂಪಡಿಸುತ್ತಿದ್ದ ಪೌರಕಾರ್ಮಿಕ ಸಾವು
April 23, 2020ಮಂಡ್ಯ, ಏ.22(ನಾಗಯ್ಯ)- ಕೊರೊನಾ ನಿಯಂತ್ರಣಕ್ಕಾಗಿ ಔಷಧಿ ಸಿಂಪಡಣೆ ವೇಳೆ ಪೌರಕಾರ್ಮಿಕ ಕುಸಿದು ಬಿದ್ದು ಸಾವಿಗೀಡಾದ ಘಟನೆ ಮಳವಳ್ಳಿ ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ ನಡೆದಿದೆ. ಕಲ್ಕುಣಿ ಗ್ರಾಮ ಪಂಚಾಯತಿಯ ಡಿ ಗ್ರೂಪ್ ನೌಕರ ಬಸವರಾಜು(46) ಎಂಬಾತನೇ ಮೃತ ಪೌರಕಾರ್ಮಿಕನಾಗಿದ್ದು, ಈತ ಕಳೆದ ಕೆಲವು ದಿನಗಳಿಂದ ಕಲ್ಕುಣಿ ಪಂಚಾಯ್ತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಕರೊನಾ ಸೋಂಕು ಹರಡದಂತೆ ಔಷಧಿ ಸಿಂಪಡಿ ಸುವ ಸಿಬ್ಬಂದಿಗಳ ಜೊತೆ ಕೆಲಸ ಮಾಡುತ್ತಿದ್ದ. ಔಷಧಿ ಸಿಂಪಡಿಸುವ ವೇಳೆ ಬಸವರಾಜು ಅಸ್ವಸ್ಥರಾಗಿ ಕುಸಿದು ಬಿದ್ದ ಪರಿಣಾಮ ಆತನನ್ನು…
ಬೈಕ್ ಡಿಕ್ಕಿ: ಪಾದಚಾರಿ ಸ್ಥಳದಲ್ಲೇ ಸಾವು
April 23, 2020ಮಂಡ್ಯ, ಏ.22(ನಾಗಯ್ಯ)- ಬೈಕ್‍ವೊಂದು ಡಿಕ್ಕಿಯೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ. ಗ್ರಾಮದ ಮಲ್ಲಿಕಾರ್ಜುನಸ್ವಾಮಿ(61) ಮೃತ ವ್ಯಕ್ತಿಯಾಗಿದ್ದು, ಈತ ಇಂದು ಮುಂಜಾನೆ ಹಾಲು ತರಲು ರಸ್ತೆ ದಾಟುತ್ತಿದ್ದಾಗ ಹಿಂಬದಿಯಿಂದ ಬಂದ ಬೈಕ್‍ವೊಂದು ಡಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ತೀವ್ರ ಗಾಯಗೊಂಡು ಮಲ್ಲಿಕಾರ್ಜುನಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಬೈಕ್ ಸವಾರ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಹಲಗೂರು ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಆರ್‍ಎಸ್ ಬಳಿಯ ಬಾರ್‍ನಲ್ಲಿ ಕಳ್ಳತನ
April 23, 2020ಶ್ರೀರಂಗಪಟ್ಟಣ, ಏ.22(ವಿನಯ್ ಕಾರೇಕುರ)- ತಾಲೂಕಿನ ಪಂಪ್ ಹೌಸ್ ಸರ್ಕಲ್ ಬಳಿಯ ಮೈಸೂರು-ಕೆ.ಆರ್.ಸಾಗರ ರಸ್ತೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‍ನ ಬೀಗ ಮತ್ತು ಡೋರ್ ಲಾಕ್ ಒಡೆದು 2. ಲಕ್ಷ ಮೌಲ್ಯದ ವಿವಿಧ ಕಂಪನಿಗಳ ಮದ್ಯಗಳನ್ನು ಮತ್ತು ಸಿಸಿ ಕ್ಯಾಮರಾ ಡಿ.ವಿ.ಆರ್. ಅನ್ನು ಕಳ್ಳತನ ಮಾಡಿರುವ ಘಟನೆ ಬುಧವಾರ ನಡೆದಿದೆ. ಇಂದು ಬೆಳಿಗ್ಗೆ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಪಡೆದ ಕೆ.ಆರ್.ಸಾಗರ ಪೊಲೀಸ್ ಠಾಣೆಯ ಪಿ.ಎಸೈ ನವೀನ್‍ಗೌಡ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು….
ಮಂಡ್ಯದಲ್ಲಿ ಆಹಾರ ಕಿಟ್ ನೀಡದ ಆರೋಪ ಸ್ಲಂ ನಿವಾಸಿಗಳ ಪ್ರತಿಭಟನೆ
April 21, 2020ನಗರಸಭಾ ಆಯುಕ್ತರು, ಪೊಲೀಸರ ಮಧ್ಯಪ್ರವೇಶ: ಸಾಮಗ್ರಿ ಪೂರೈಕೆಗೆ ಭರವಸೆ ಮಂಡ್ಯ, ಏ.20(ನಾಗಯ್ಯ)- ಲಾಕ್‍ಡೌನ್ ನಂತರ ಆಹಾರ ಸಾಮಗ್ರಿ ಸೇರಿದಂತೆ ಯಾವುದೇ ಸೌಲಭ್ಯ ನೀಡದೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ನಗರದ ಹೊಸಹಳ್ಳಿ ಬಡಾವಣೆಯ ಗುರುಮಠ ಸ್ಲಂನ ನಿವಾಸಿಗಳು ಸೋಮವಾರ ಬೆಳಿಗ್ಗೆ ಪ್ರತಿಭಟನೆಗೆ ಮುಂದಾದ ಘಟನೆ ಜರುಗಿದೆ. ಸ್ಲಂನ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಗುಂಪುಗೂಡಿ ಹೊಸಹಳ್ಳಿ ಮುಖ್ಯರಸ್ತೆಗೆ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲು ಮುಂದಾಗುತ್ತಿ ದ್ದಂತೆ ಅಲ್ಲಿಯೇ ಬಂದೋಬಸ್ತ್‍ನಲ್ಲಿದ್ದ ಪೊಲೀಸರು ಅವರನ್ನು ತಡೆದರು. ಈ ಸಂದರ್ಭ…
ವಿದ್ಯುತ್ ಸ್ಪರ್ಶ: ಸ್ಥಳದಲ್ಲೇ ರೈತ ಸಾವು
April 21, 2020ಕೆ.ಆರ್.ಪೇಟೆ, ಏ.20- ವಿದ್ಯುತ್ ಸ್ಪರ್ಶಿಸಿ ರೈತನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿ ರುವ ಘಟನೆ ತಾಲೂಕಿನ ಬಿಕ್ಕಸಂದ್ರ ಗ್ರಾಮದಲ್ಲಿ ಸೋಮವಾರ ಸಂಜೆ ನಡೆ ದಿದೆ. ತಾಲೂಕಿನ ಸಂತೆಬಾಚಹಳ್ಳಿ ಹೋಬಳಿ ಬಿಕ್ಕಸಂದ್ರ ಗ್ರಾಮದ ನಿವಾಸಿ ನಿಂಗಯ್ಯ (64) ಮೃತ ರೈತ. ವಿವರ: ರೈತ ನಿಂಗಯ್ಯ ಮೇಕೆಗೆ ಮೇವು ತರಲೆಂದು ತಮ್ಮ ಜಮೀನಿಗೆ ಹೋದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದಿದ್ದಾರೆ. ಪರಿಣಾಮ ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮರದ ಕೆಳಗೆ ಬಿದ್ದಿದ್ದ ನಿಂಗಯ್ಯ ಅವರನ್ನು ಗ್ರಾಮಸ್ಥರು ನೋಡಿ ಪಟ್ಟಣ ಪೆÇಲೀಸ್…