ವಾರದೊಳಗೆ ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸುವಂತೆ ಡಿಸಿ ಸೂಚನೆ
ಮಂಡ್ಯ

ವಾರದೊಳಗೆ ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸುವಂತೆ ಡಿಸಿ ಸೂಚನೆ

April 24, 2020

ಜೂನ್‍ಗೆ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಲು ಕ್ರಮ
ಮಂಡ್ಯ, ಏ.23(ನಾಗಯ್ಯ)- ಕಬ್ಬು ಸರಬರಾಜು ಮಾಡಿರುವ ರೈತರಿಗೆ ನೀಡ ಬೇಕಾಗಿರುವ ಬಾಕಿ ಹಣವನ್ನು ವಾರದೊಳಗೆ ಪಾವತಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲೆಡೆ ಹರಡಿರುವ ಕೋವಿಡ್-19 ವೈರಸ್ ಸಮಸ್ಯೆಯಿಂದಾಗಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಪರಿ ಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿಯೂ ರೈತರಿಗೆ ನೀಡಬೇಕಿರುವ ಕಬ್ಬಿನ ಬಾಕಿ ಹಣ ಉಳಿಸಿ ಕೊಂಡಿರುವುದು ಸರಿಯಲ್ಲ. ಸಂಕಷ್ಟದ ಕಾಲ ದಲ್ಲಿ ರೈತರಿಗೆ ಸ್ಪಂದಿಸುವುದು ಧರ್ಮ ಎಂದರು.

ಇನ್ನೊಂದು ವಾರದೊಳಗೆ ಜಿಲ್ಲೆಯೊಳ ಗಿನ ಎಲ್ಲಾ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ ಕಬ್ಬಿನ ಬಾಕಿ ಹಣ ಪಾವತಿ ಸಲು ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜೂನ್‍ಗೆ ಕಾರ್ಖಾನೆಗಳನ್ನು ಪ್ರಾರಂಭಿಸಿ: ಬರುವ ಜೂನ್ ಮಾಹೆ ಮೊದಲನೇ ಅಥವಾ ಎರಡನೇ ವಾರದಿಂದಲೇ 2020-21ನೇ ಹಂಗಾಮಿನ ಕಬ್ಬನ್ನು ನುರಿಸಲು ಅನು ವಾಗುವಂತೆ ಕಾರ್ಯ ಯೋಜನೆ ರೂಪಿಸ ಬೇಕು. ಎನ್‍ಎಸ್‍ಎಲ್ ಕಾರ್ಖಾನೆ 5 ಸಾವಿರ ಟನ್‍ಗೆ ಬದಲಾಗಿ 6 ಸಾವಿರಕ್ಕೆ ಹೆಚ್ಚಿಸಲು ಯೋಜಿಸಿದೆ. ಈ ಸಾಲಿನಲ್ಲಿ ಕನಿಷ್ಠ 6500 ಟನ್ ಕಬ್ಬನ್ನು ನುರಿಸಲು ಕ್ರಮಕೈಗೊಳ್ಳಬೇಕು ಎಂದರು.

ಆಲೆಮನೆ ಮತ್ತು ಕಬ್ಬಿನ ಜ್ಯೂಸ್ ಮಾಡು ವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗು ವುದು, ಬನ್ನಾರಿ ಕಾರ್ಖಾನೆಗೂ ಸಹ ಬಾಕಿ ಇರುವ ಕಬ್ಬನ್ನು ಸರಬರಾಜು ಮಾಡಲು ಅನುವು ಮಾಡಲಾಗಿದೆ. ಜೂನ್ ಮಾಹೆಯ ಮೊದಲ ವಾರದಲ್ಲಿ ಕಬ್ಬನ್ನು ಕಡಿಯಲು ಕ್ರಮ ಕೈಗೊಂಡಲ್ಲಿ ತಮಿಳುನಾಡಿನ ಕಾರ್ಖಾನೆಗೆ ಸರಬರಾಜು ಮಾಡಲು ಅನು ಮತಿ ನೀಡುವುದಿಲ್ಲ. ಆದ್ದರಿಂದ ಜೂನ್ ನಲ್ಲೆ ಮಂಡ್ಯ ಜಿಲ್ಲೆಯ ಎಲ್ಲಾ ಕಾರ್ಖಾನೆ ಗಳು ಕಬ್ಬುನುರಿತ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ಕಟಾವು ಮಾಡುವುದು ವೈಜ್ಞಾನಿಕವಾಗಿ ಸರಿಯಲ್ಲ. ಏಕೆಂದರೆ ಮುಂದಿನ ಸೆಪ್ಟೆಂಬರ್-ಅಕ್ಟೋ ಬರ್ ಮಾಹೆಯಲ್ಲಿ ಸೂಲಂಗಿ ಬಂದು ಇಳುವರಿ ಕಡಿಮೆಯಾಗಿ ರೈತರಿಗೆ ನಷ್ಟವಾ ಗುತ್ತದೆ. ಹೀಗಾಗಿ ಸದರಿ ತಿಂಗಳಲ್ಲಿನ ನಡೆ ಯುವ ಕಟಾವಿನಿಂದ ಆಗಬಹುದಾದ ನಷ್ಟದ ಬಗ್ಗೆ ರೈತರಿಗೆ ತಿಳಿ ಹೇಳಬೇಕಾ ಗುತ್ತದೆ. ರೈತರಿಗೆ ಕಬ್ಬಿನ ಜೊತೆಯಲ್ಲಿ ಸೀಬೆಯಂತಹ ತೋಟಗಾರಿಕಾ ಬೆಳೆಗಳನ್ನು ಗದ್ದೆಯ ತೆವರಿ ಬದುಗಳಲ್ಲಿ ಬೆಳೆಸಲು ತಿಳಿಸಬೇಕು. ಇದರಿಂದ ರೈತರ ಅದಾಯ ಮೂಲವೂ ಹೆಚ್ಚಾಗಲಿದೆ ಎಂದರು.

ಇದೇ ವೇಳೆ ಚಾಮುಂಡಿ ಸಕ್ಕರೆ ಕಾರ್ಖಾನೆ ಹಾಗೂ ಎನ್‍ಎಸ್‍ಎಲ್ ಕಾರ್ಖಾನೆಯ ವರಿಗೆ 500 ಲೀಟರ್ ಸ್ಯಾನಿಟೈಜರ್, ಸಿಎಸ್ ಆರ್ ಅಡಿಯಲ್ಲಿ 5000 ಮಾಸ್ಕ್ ಮತ್ತು 2000 ಗ್ಲೌಸ್‍ಗಳನ್ನು ನೀಡಲು ಸೂಚಿಸಿ ದರು. ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಹಯಾಕ ನಿರ್ದೇಶಕಿ ಕುಮುದಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Translate »