ತಿ.ನರಸೀಪುರ, ಏ.23- ಕೊರೊನಾ ಲಾಕ್‍ಡೌನ್ ನಡುವೆಯೂ ಮಾನಸಿಕ ಅಸ್ವಸ್ಥನನ್ನು ರಕ್ಷಿಸುವ ಮೂಲಕ ಬನ್ನೂರು ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಈತನನ್ನು ಕೇರಳ ಮೂಲದ ಸಾಜಿ(50) ಎಂದು ಗುರುತಿಸ ಲಾಗಿದೆ. ಕಳೆದ ಒಂದು ವರ್ಷದಿಂದ ಬನ್ನೂರು ಪಟ್ಟಣದ ಬೀದಿ ಬೀದಿ ಅಲೆಯುತ್ತಿದ್ದ ಎನ್ನಲಾಗಿದೆ. ಸಾರ್ವಜನಿಕರು ನೀಡಿದ ಆಹಾರ ತಿಂದು ಬದುಕುತ್ತಿದ್ದ ಸಾಜಿಯನ್ನು ಪಟ್ಟಣ ಪೊಲೀಸ್ ಠಾಣೆಯ ಎಸ್‍ಐ ಪುನೀತ್ ನೇತೃತ್ವದಲ್ಲಿ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ಕ್ಷೌರ ಮಾಡಿಸಿ, ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ರಕ್ಷಿಸಿದ್ದಾರೆ.
ಈ ವೇಳೆ ಪ್ರೊಬೆಷನರಿ ಎಸ್‍ಐ ಬಸವರಾಜು ಚಿಂಚೋಳಿ, ಸಿಬ್ಬಂದಿಗಳಾದ ಎಂ.ನಾರಾಯಣ್, ಡ್ರೈವರ್ ಪುಟ್ಟರಾಜಿ ಸೇರಿದಂತೆ ಇತರರಿದ್ದರು. ಬನ್ನೂರು ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.