ತಿ.ನರಸೀಪುರ: ಚರಂಡಿ ಅವ್ಯವಸ್ಥೆ ಪರಿಶೀಲಿಸಿದ ಶಾಸಕ ಅಶ್ವಿನ್‍ಕುಮಾರ್
ಮೈಸೂರು ಗ್ರಾಮಾಂತರ

ತಿ.ನರಸೀಪುರ: ಚರಂಡಿ ಅವ್ಯವಸ್ಥೆ ಪರಿಶೀಲಿಸಿದ ಶಾಸಕ ಅಶ್ವಿನ್‍ಕುಮಾರ್

April 24, 2020

ತಿ. ನರಸೀಪುರ, ಏ. 23 (ಎಸ್‍ಕೆ)- ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಚರಂಡಿಯ ಅವ್ಯವಸ್ಥೆಯನ್ನು ಶಾಸಕ ಎಂ. ಅಶ್ವಿನ್ ಕುಮಾರ್ ಬುಧವಾರ ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ಚರಂಡಿಯ ಕಾಮಗಾರಿ ಈ ಹಿಂದೆ ಅವೈಜ್ಞಾನಿಕವಾಗಿ ನಡೆದಿದೆ. ಕೊಳಚೆ ನೀರು ಸುಗಮವಾಗಿ ಹೋಗುತ್ತಿಲ್ಲ. ಪಟ್ಟಣದ ಬಡಾವಣೆಗಳಿಂದ ಬರುವ ತ್ಯಾಜ್ಯ ಮಿಶ್ರಿತ ನೀರು ಇಲ್ಲಿ ಸಂಗ್ರಹವಾಗಿ ಸಾಕಷ್ಟು ಅನಾನೂಕೂಲವಾಗಿದೆ. ಈ ಬಗ್ಗೆ ಕೂಡಲೇ ನೀರಾವರಿ ಅಧಿಕಾರಿಗಳಿಂದ ಅಗತ್ಯ ಸಲಹೆ ಪಡೆದು ಚರಂಡಿ ಅವ್ಯವಸ್ಥೆ ಸರಿಪಡಿಸಿ ನೀರಿನ ಹರಿವಿಗೆ ಕಾಮಗಾರಿ ಕ್ರಮ ಕೈಗೊಳ್ಳಬೇಕು, ಪ್ರಸ್ತುತ ಲಾಕ್ ಡೌನ್ ಇರುವುದರಿಂದ ವಾಹನ ಸಂಚಾರ ಸ್ಥಗಿತವಿರುವುದರಿಂದ ಕಾಮಗಾರಿಗೆ ಯಾವುದೇ ಅಡ್ಡಿ ಇಲ್ಲ. ಈ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರ ಕಾಮಗಾರಿ ಮಾಡುವಂತೆ ಪುರಸಭಾ ಮುಖ್ಯಾಧಿಕಾರಿ ಆರ್. ಅಶೋಕ್ ಅವರಿಗೆ ತಿಳಿಸಿದರು.

ಚರಂಡಿ ಪಕ್ಕದ ರಸ್ತೆ ಬದಿಯಲ್ಲಿ ಗಿಡ ಮರಗಳನ್ನು ನೆಡಲು ಅರಣ್ಯಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು. ನೀರಾವರಿ ಎಇಇ ಮಹೇಶ್, ತಾ.ಪಂ ಸದಸ್ಯ ಮೂಗೂರು ಚಂದ್ರಶೇಖರ್, ಮುಖಂಡ ರಾದ ಬೇವಿನಹಳ್ಳಿ ಸತೀಶ್, ಶಂಭು ದೇವನಪುರ ರಮೇಶ ಇತರರು ಇದ್ದರು.

Translate »