ಜುಬಿಲಂಟ್ ಕಾರ್ಖಾನೆ ವಿರುದ್ಧ ಸಮಗ್ರ ತನಿಖೆಯಾಗಲಿ ಮಾಜಿ ಸಂಸದ ಆರ್.ಧ್ರುವನಾರಾಯಣ್ ಆಗ್ರಹ
ಮೈಸೂರು ಗ್ರಾಮಾಂತರ

ಜುಬಿಲಂಟ್ ಕಾರ್ಖಾನೆ ವಿರುದ್ಧ ಸಮಗ್ರ ತನಿಖೆಯಾಗಲಿ ಮಾಜಿ ಸಂಸದ ಆರ್.ಧ್ರುವನಾರಾಯಣ್ ಆಗ್ರಹ

April 24, 2020

ನಂಜನಗೂಡು, ಏ.23 (ರವಿ)- ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌPರರಿಗೆ ಕೊರೊನಾ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕೆಂದು ಮಾಜಿ ಸಂಸದ ಆರ್. ಧ್ರುವನಾರಾಯಣ್ ಆಗ್ರಹಿಸಿದ್ದಾರೆ.

ಗುರುವಾರ ನಗರ ಆರ್.ಪಿ. ರಸ್ತೆಯಲ್ಲಿ ರುವ ಕಾಂಗ್ರೆಸ್ ಕಚೇರಿಯಲ್ಲಿ ಸವಿತಾ ಸಮಾಜದ 190 ಮಂದಿ ವೃತ್ತಿನಿರತರಿಗೆ ರೇಷನ್ ಕಿಟ್ ವಿತರಿಸಿದ ನಂತರ ಸುದ್ದಿ ಗಾರೊಂದಿಗೆ ಮಾತನಾಡಿ, ಈ ಭಾಗದಲ್ಲಿ ಅನೇಕ ಕಾರ್ಖಾನೆಗಳಿದ್ದರೂ ಜುಬಿಲಂಟ್ ಕಾರ್ಖಾನೆ ಯಿಂದ ಮಾತ್ರ ಕೊರೊನಾ ಸೋಂಕು ಹರಡುವ ಮೂಲಕ ಜಿಲ್ಲೆಯ ಜನತೆಯನ್ನೇ ಬೆಚ್ಚಿ ಬೀಳಿಸಿದೆ. ಜಿಲ್ಲೆಯಲ್ಲಿ 88 ಸೋಂಕಿನ ಪ್ರಕರಣದಲ್ಲಿ ಈ ಕಾರ್ಖಾನೆ ಯಿಂದಲೇ 72 ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ಆತಂಕಕ್ಕೆ ಕಾರಣವಾಗಿದೆ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದ ರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ವಿವಿಧ ಹಂತದಲ್ಲಿ ಸಮಿತಿ ರಚಿಸಿ ಪಕ್ಷದ ಮುಖಂಡರು ರಾಜ್ಯಾದ್ಯಂತ ಅಸಂಘಟಿತ ಕಾರ್ಮಿಕರಿಗೆ, ಬಡವರಿಗೆ, ಕೈಲಾದಷ್ಟು ನೆರವನ್ನು ನೀಡುವ ಮೂಲಕ ಸಹಾಯ ಹಸ್ತ ಚಾಚಿದೆ. ಹೂವು, ಹಣ್ಣು ತರಕಾರಿ ಬೆಳೆದ ರೈತರು ತೀವ್ರ ಸಂಕಷ್ಟದಲ್ಲಿದ್ದು, ಸರ್ಕಾರ ಅವರಿಗೆ ಸಹಾಯಧನ ನೀಡಬೇಕು ಎಂದು ಧ್ರುವನಾರಾಯಣ್ ಒತ್ತಾಯಿಸಿದರು.

ಕೊರೊನಾ ತೊಲಗಿಸಲು ಕೇರಳ, ಉತ್ತರಪ್ರದೇಶ ಸರ್ಕಾರ ತೆಗೆದುಕೊಂಡ ಮುಂಜಾಗ್ರತಾ ಕ್ರಮವನ್ನು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಅನುಸರಿಸಿ ದ್ದರೇ ಕೊರೊನಾ ಸೋಂಕನ್ನು ನಿಯಂತ್ರಿಸ ಬಹುದಿತ್ತು ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅವರು ಲಾಕ್‍ಡೌನ್ ಜಾರಿಯಿಂದಾಗಿ ಸಂಕಷ್ಟದಲ್ಲಿರುವ ಕಾಯಕ ಸಮಾಜ, ಅಸಂಘಟಿತ ಕಾರ್ಮಿಕರಿಗೆ ರೇಷನ್ ಕಿಟ್ ನೀಡುತ್ತಿರುವುದು ಉತ್ತಮ ಕಾರ್ಯ. ಇದಕ್ಕೆ ಕೈಜೋಡಿಸಿರುವ ಕಾಂಗ್ರೇಸ್ ಮುಖಂಡರು ಹಾಗೂ ದಾನಿಗಳನ್ನು ಅಭಿನಂದಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಲತಾಸಿದ್ದಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಶ್ರೀನಿವಾಸ್, ಹೆಚ್.ಎಸ್.ಮೂಗ ಶೆಟ್ಟಿ, ಕುರಹಟ್ಟಿ ಮಹೇಶ್, ಮಾಜಿ ಜಿ.ಪಂ. ಸದಸ್ಯ ಕೆ.ಮಾರುತಿ, ನಂದಕುಮಾರ್, ಕೆಪಿಸಿಸಿ ಸದಸ್ಯ ಅಕ್ಬರ್, ನಗರಸಭಾ ಸದಸ್ಯ ರಾದ ಮಹೇಶ್, ಎಸ್. ಗಂಗಾಧರ್, ಪ್ರದೀಪ್, ಶ್ರೀಕಂಠಸ್ವಾಮಿ, ಸಿದ್ದಿಕ್, ಕವಲಂದೆ ನಾಗೇಶ್, ಸತೀಶ್‍ಗೌಡ, ಜಿ.ಎಸ್.ಗೋವಿಂದ್ ರಾಜ್, ಮಾಜಿ ನಗರಸಭಾ ಅಧ್ಯಕ್ಷ ಸಿ.ಎಂ. ಶಂಕರ್, ಮಾಜಿ ಸದಸ್ಯ ಎಂ.ಶ್ರೀಧರ್, ಮಾಜಿ ತಾ.ಪಂ. ಶಿವಪ್ಪದೇವರು, ಹಗಿವಾಳು ಬಸವಣ್ಣ, ಶ್ರೀರಾಂಪುರ ಮಹದೇವು, ಸೌಭಾಗ್ಯ, ನಟೇಶ್, ಗೋವಿಂದ್,ಗಣೇಶ್, ಸೇರಿದಂತೆ ಇದ್ದರು.

Translate »