ನಿಗದಿಗಿಂತ ಹೆಚ್ಚಿನ ದರಕ್ಕೆ ಅಗತ್ಯ ವಸ್ತುಗಳ ಮಾರಾಟ ಮೆಡಿಕಲ್ ಶಾಪ್ ಸೇರಿ 20 ಅಂಗಡಿಗಳ ಮೇಲೆ ಕೇಸ್ ದಾಖಲು
ಮಂಡ್ಯ

ನಿಗದಿಗಿಂತ ಹೆಚ್ಚಿನ ದರಕ್ಕೆ ಅಗತ್ಯ ವಸ್ತುಗಳ ಮಾರಾಟ ಮೆಡಿಕಲ್ ಶಾಪ್ ಸೇರಿ 20 ಅಂಗಡಿಗಳ ಮೇಲೆ ಕೇಸ್ ದಾಖಲು

April 24, 2020

ಮಂಡ್ಯ, ಏ.23(ನಾಗಯ್ಯ)- ಸ್ಯಾನಿಟೈಸರ್ ಸೇರಿದಂತೆ ಅಗತ್ಯ ವಸ್ತುಗಳನ್ನು ಸರ್ಕಾರ ನಿಗದಿಪಡಿಸಿರುವುದÀಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ಆರೋಪದ ಮೇಲೆ ನಗರದ ವಿವಿಧೆಡೆ ಮೆಡಿಕಲ್ ಶಾಪ್ ಕಿರಾಣಿ ಅಂಗಡಿಗಳು ಸೇರಿದಂತೆ ಸುಮಾರು 20 ಅಂಗಡಿ ಮಂದಿ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸ ಲಾಗಿದ್ದು 55 ಸಾವಿರಕ್ಕೂ ಹೆಚ್ಚು ದಂಡವನ್ನು ವಿಧಿಸಲಾಗಿದೆ.

ಅಗತ್ಯ ವಸ್ತುಗಳನ್ನು ಅದರಲ್ಲಿಯೂ ವಿಶೇಷವಾಗಿ ಆಹಾರ ಸಾಮಾಗ್ರಿಗಳನ್ನು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವ ಬಗ್ಗೆ ಕಾನೂನು ಮಾಪನ ಸಹಾಯಕ ನಿಯಂತ್ರಕರು THE PREVENTION OF BLACK MARKETING AND MAINTENANCE OF SUPPLIES OF ESSENTIAL COMMODITIES ACT 1980ರ ಅಡಿಯಲ್ಲಿ ಮೊಕದ್ದಮೆಗಳನ್ನು ದಾಖಲು ಮಾಡಿದ್ದು, ಈ ಮೊಕದ್ದಮೆಗಳು ಈಗಾಗಲೆ ಜಿಲ್ಲಾ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಇವೆ.

ಈಗಾಗಲೇ ಮಾಸ್ಕ್ ಮತ್ತು ಸ್ಯಾನಿಟ್ಯಸರ್‍ಗಳನ್ನು ಸಹ THE ESSENTIAL COMMODITIES ACT 1955ರ ಷೆಡ್ಯೂಲಿನಲ್ಲಿ ಸೇರಿಸಲಾಗಿದ್ದು ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದ 8 ಮೆಡಿಕಲ್ ಶಾಪ್ ಮತ್ತು ಫಾರ್ಮಾಟಿಕಲ್ ಹೋಲ್ ಸೇಲ್ ಡೀಲರ್‍ಗಳ ಮೇಲೆ THE LEGAL METROLOGY ACT 2009 AND THE LEGAL METROLOGY RULE 2011ರ ಅಡಿಯಲ್ಲಿ 8 ಮೊಕದ್ದಮೆಗಳನ್ನು ದಾಖಲು ಮಾಡಿ ಅವರಿಂದ 40ಸಾವಿರ ರೂ. ದಂಡವನ್ನು ವಸೂಲಿ ಮಾಡಲಾಗಿದೆ.

ಕೆಲವು ಮಾಸ್ಕ್ ಮೇಲೆ ಅಗತ್ಯ ಘೋಷಣೆಗಳು ಇಲ್ಲದ ಕಾರಣ ಕ್ಕಾಗಿ 7 ಮೆಡಿಕಲ್ ಸ್ಟೋರ್‍ಗಳ ಮೇಲೆ ಮೊಕದ್ದಮೆ ಹೂಡಿದ್ದು, 15 ಸಾವಿರ ರೂಗಳ ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಧಿಕಾರಿ ಡಾ.ಎಂ.ವಿ.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೆ ನಗರದ ವಿವಿಧೆಡೆ 5 ಕಿರಾಣಿ ಅಂಗಡಿಗಳಲ್ಲಿಯೂ ಅಗತ್ಯವಸ್ತುಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ಆರೋಪದ ಮೇಲೂ ಪ್ರಕರಣ ದಾಖಲಿಸಲಾಗಿದೆ.

ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿರುವ, ಎಲ್ಲಾ ಚಿಲ್ಲರೆ ಕಿರಾಣಿ ಅಂಗಡಿಗಳಲ್ಲಿ ಮುಖ್ಯವಾಗಿ ದರ ಪಟ್ಟಿ ಪ್ರದರ್ಶಿಸ ಬೇಕು. ಬಹತೇಕ ಅಂಗಡಿಗಳಲ್ಲಿ ಈ ರೀತಿಯ ದರ ಪಟ್ಟಿ ಪ್ರದರ್ಶಿ ಸದೇ ಇರುವುದು ಅಧಿಕಾರಿಗಳು ತಪಾಸಣೆ ನಡೆಸಿದ ಸಮಯದಲ್ಲಿ ಕಂಡುಬಂದಿದ್ದು ಅಂತಹವರ ವಿರುದ್ದ ಕಾನೂನು ಕ್ರಮಕೈಗೊಳ್ಳ ಲಾಗುತ್ತಿದೆ. ಕೋವಿಡ್-19 ಲಾಕ್‍ಡೌನ್‍ಗಿಂತ ಮೊದಲು ಮಾ.22ಕ್ಕಿಂತ ಮೊದಲಿದ್ದ ಅಗತ್ಯ ವಸ್ತುಗಳ ದರಕ್ಕಿಂತ ಸಕಾರಣ ವಿಲ್ಲದೆ ದರ ಹೆಚ್ಚು ಮಾಡಿ ಮಾರಾಟ ಮಾಡುತ್ತಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದು ಎಚ್ಚರಿಸಲಾಗಿದೆ.

Translate »