ಕೊಡಗು

ಕುಶಾಲನಗರ: ಚೆಕ್‌ಪೋಸ್ಟ್‍ಗಳ ಪರಿಶೀಲನೆ

April 24, 2020

ಕುಶಾಲನಗರ, ಏ.23- ಕೊರೊನಾ ವೈರಸ್ ಹರಡದಂತೆ ಮೇ 3ರವರೆಗೆ ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ಪ್ರವೇಶದ್ವಾರ ಪಟ್ಟಣದ ಟೋಲ್‍ಗೇಟ್ ಬಳಿಯ ಅರಣ್ಯ ತಪಾ ಸಣಾ ಕೇಂದ್ರ ಹಾಗೂ ಶಿರಂಗಾಲ ಗ್ರಾಮ ದಲ್ಲಿರುವ ತಪಾಸಣಾ ಕೇಂದ್ರಗಳಿಗೆ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾ ಗಡಿ ಪ್ರದೇಶಗಳಲ್ಲಿ ಪೆÇಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಕೈಗೊಂಡಿರುವ ಭದ್ರತಾ ಕ್ರಮಗಳನ್ನು ಪರಿಶೀಲಿಸಿದ ಅವರು ಶಾಸಕರು ಸಿಬ್ಬಂದಿ ಗಳಿಗೆ ಕಲ್ಪಿಸಿರುವ ಅನುಕೂಲಗಳ ಬಗ್ಗೆ ಮಾಹಿತಿ ಪಡೆದರು. ಹಾಸನ ಹಾಗೂ ಮೈಸೂರು ಕಡೆಯಿಂದ ಜನರು ಆಗಮಿಸುವ ಕೊಪ್ಪಗೇಟ್ ಹಾಗೂ ಶಿರಂಗಾಲ ಗೇಟ್‍ಗಳಿಂದ ಕೊಡಗಿಗೆ ಆಗಮಿಸುವ ಪ್ರತಿಯೊಬ್ಬರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಅನಗತ್ಯವಾಗಿ ಓಡಾಡುವ ಯಾವುದೇ ವಾಹನಗಳಿಗೆ ಅವಕಾಶ ನೀಡಬಾರದು ಎಂದು ಸಿಬ್ಬಂದಿ ಗಳಿಗೆ ಸೂಚಿಸಿದರು.

ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಕುಶಾಲನಗರ, ಸುಂಟಿಕೊಪ್ಪ, ಶನಿವಾರ ಸಂತೆ, ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಕೈಗೊಂಡಿ ರುವ ಭದ್ರತಾ ವ್ಯವಸ್ಥೆ ಬಗ್ಗೆ ಡಿವೈಎಸ್ಪಿ ಶೈಲೇಂದ್ರ ಹಾಗೂ ಸಿಪಿಐ ಮಹೇಶ್ ಅವ ರೊಂದಿಗೆ ಚರ್ಚಿಸಿದರು. ಈ ವೇಳೆ ಪಪಂ ಸದಸ್ಯ ಬಿ.ಅಮೃತ್ ರಾಜ್, ಕಾಫಿ ಮಂಡಳಿ ಮಾಜಿ ನಿರ್ದೇಶಕ ಜಿ.ಎಲ್.ನಾಗರಾಜು, ಮುಖಂಡ ವೈಶಾಕ್ ಇದ್ದರು.

Translate »