ಕೊಡಗಿನಲ್ಲಿ ಕೊರೊನಾ ಮಧ್ಯೆ ಡೆಂಗ್ಯೂ ಭೀತಿ
ಕೊಡಗು

ಕೊಡಗಿನಲ್ಲಿ ಕೊರೊನಾ ಮಧ್ಯೆ ಡೆಂಗ್ಯೂ ಭೀತಿ

April 24, 2020

ಮಡಿಕೇರಿ, ಏ.23- ಕೊಡಗು ಜಿಲ್ಲೆಯಲ್ಲಿ ಕೊರೊನಾ ಭೀತಿ ಆವರಿ ಸಿರುವ ನಡುವೆಯೇ ಡೆಂಗ್ಯೂ ಜ್ವರವೂ ಕಾಣಿಸಿಕೊಂಡಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು 7 ಡೆಂಗ್ಯೂ ಜ್ವರ ಪೀಡಿತರು ಪತ್ತೆಯಾಗಿದ್ದು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಡೆಂಗ್ಯೂ ಜ್ವರವನ್ನು ಮಟ್ಟ ಹಾಕಲು ಮುಂದಾಗಿದೆ.

ಜಿಲ್ಲೆಯ ಜನರು ಕೊರೊನಾ ಸೋಂಕಿನ ಬಗ್ಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಡೆಂಗ್ಯೂ ಜ್ವರದ ಬಗ್ಗೆಯೂ ಕೈಗೊಳ್ಳಬೇಕು. ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಮನೆ ಮತ್ತು ಸುತ್ತ ಮುತ್ತ ಲಿನ ಪ್ರದೇಶವನ್ನೂ ಶುಚಿಯಾಗಿಟ್ಟು ಕೊಳ್ಳಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ. ಜನವರಿಯಿಂದ ಇಂದಿನ ವರೆಗೆ ನಂಜರಾಯಪಟ್ಟಣದಲ್ಲಿ 1, ಕೂಡಿಗೆ 3, ಸುಂಟಿಕೊಪ್ಪ 2, ಸಂಪಾಜೆಯಲ್ಲಿ ಒಬ್ಬ ವ್ಯಕ್ತಿಯಲ್ಲಿ ಡೆಂಗ್ಯು ಜ್ವರ ಕಾಣಿಸಿಕೊಂಡಿದೆ. ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ತಪಾ ಸಣೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಯೂ ಮನವಿ ಮಾಡಿದೆ.

Translate »