ಕೋವಿಡ್ ಆಸ್ಪತ್ರೆಗೆ 1 ಲಕ್ಷ ರೂ. ವೆಚ್ಚದ ಆರೋಗ್ಯ ಪರಿಕರ ಹಸ್ತಾಂತರ
ಕೊಡಗು

ಕೋವಿಡ್ ಆಸ್ಪತ್ರೆಗೆ 1 ಲಕ್ಷ ರೂ. ವೆಚ್ಚದ ಆರೋಗ್ಯ ಪರಿಕರ ಹಸ್ತಾಂತರ

April 24, 2020

ಮಡಿಕೇರಿ, ಏ.23- ಮರ್ಕೆರಾ ಕೌಂಟಿ ಕ್ಲಬ್ ವತಿಯಿಂದ 1 ಲಕ್ಷ ರೂ. ವೆಚ್ಚದ ಆರೋಗ್ಯ ಪರಿಕರಗಳನ್ನು ಶಾಸಕ ಕೆ.ಜಿ. ಬೋಪಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಗುರುವಾರ ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಮರ್ಕೆರ ಕೌಂಟಿ ಕ್ಲಬ್ ವತಿಯಿಂದ ಒಂದು ಲಕ್ಷ ರೂ. ವೆಚ್ಚದ ಕ್ರಾಸ್ ಕಾರ್ಟ್‍ಗಳ ಮೂಲಕ ವಿವಿಧ ವಾರ್ಡ್‍ಗಳಿಗೆ ಔಷಧಿ ಗಳನ್ನು ತೆಗೆದುಕೊಂಡು ಹೋಗಿ ನೀಡಲು ಸಹಕಾರಿಯಾಗಿದೆ ಎಂದರು. ಕೋವಿಡ್ 19 ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆ ಗಳು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಸಾಮಾಜಿಕ ಚಟುವಟಿಕೆಗಳು ಸದಾ ಮುಂದುವರೆಯಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರ ಮಣಿ ಮಾತನಾಡಿ, ಜಗತ್ತು ಕಷ್ಟದ ಸಂದರ್ಭ ದಲ್ಲಿದ್ದು, ಇಂತಹ ವೇಳೆಯಲ್ಲಿ ಸಂಘ ಸಂಸ್ಥೆ ಗಳು ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದರು. ಜಿಲ್ಲಾಸ್ಪತ್ರೆ ವಾರ್ಡ್‍ಗಳಿಗೆ ಔಷಧಿ ಗಳನ್ನು ಸಾಗಿಸುವ ಉಪಕರಣ ಇದಾಗಿದ್ದು, ಜಿಲ್ಲಾಸ್ಪತ್ರೆಗೆ ಈ ಸಾಧನದ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಉಚಿತವಾಗಿ ಇವುಗಳನ್ನು ನೀಡಿದ್ದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮರ್ಕೆರಾ ಕೌಂಟಿ ಕ್ಲಬ್ ಅಧ್ಯಕ್ಷ ಮೋಹನ್ ಮೊಣ್ಣಪ್ಪ ಮಾತನಾಡಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ಕಾರ್ಯಪ್ಪ, ಅಧೀಕ್ಷಕ ಡಾ.ಲೋಕೇಶ್, ಆಡಳಿತಾಧಿಕಾರಿ ಮೇರಿ ನಾಣಯ್ಯ, ಸಹಾಯಕ ಆಡಳಿತಾಧಿಕಾರಿ ಬಸವರಾಜು, ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ತಾಪಂಡ ಸುರೇಶ್, ಖಜಾಂಜಿ ಸಿ.ಪಿ.ಪೂವಣ್ಣ, ನಿರ್ದೇಶಕರಾದ ಸುರೇಶ್ ಚಂಗಪ್ಪ, ಬಿ.ಕೆ.ಪೂಣಚ್ಚ ಇತರರಿದ್ದರು.

Translate »