ಸೋಲಿಗರು, ಸವಿತಾ ಸಮಾಜದವರಿಗೆ ಆಹಾರ ಕಿಟ್ ವಿತರಣೆ
ಚಾಮರಾಜನಗರ

ಸೋಲಿಗರು, ಸವಿತಾ ಸಮಾಜದವರಿಗೆ ಆಹಾರ ಕಿಟ್ ವಿತರಣೆ

April 24, 2020

ಹನೂರು, ಏ.23- ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸೋಲಿಗ ಹಾಗೂ ಸವಿತಾ ಸಮಾಜದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಹನೂರು ಭಾಗದ ಸವಿತಾ ಸಮಾಜ ದವರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಠ ಕ್ಕೊಳಗಿರುವ ಕ್ಷೇತ್ರದ ಸೋಲಿಗ ಹಾಗೂ ಸವಿತಾ ಸಮಾಜಕ್ಕೆ ಆಹಾರ ಕಿಟ್ ವಿತರಿಸ ಲಾಗುತ್ತಿದೆ. ಕ್ಷೇತ್ರ ವ್ಯಾಪ್ತಿಯ ದೊಡ್ಡಿಂದು ವಾಡಿ, ಸತ್ತೇಗಾಲ, ಮಾರ್ಟಳ್ಳಿ, ಲೊಕ್ಕನ ಹಳ್ಳಿ, ಮ.ಮ.ಬೆಟ್ಟ ವಿವಿಧಡೆ ಇರುವ ಸವಿತಾ ಸಮಾಜದವರಿಗೆ ಪಡಿತರ ವಿತರಿಸಲಾಗು ವುದು. ರಾಮಾಪುರ ಭಾಗದ ಜನತೆಗೆ ಜಿಪಂ ಸದಸ್ಯ ಬಸವರಾಜು ಪಡಿತರ ವಿತರಿಸಲು ಮುಂದಾಗಿದ್ದಾರೆ. ಸರ್ಕಾರ ಎಪಿಎಲ್ ಮತ್ತು ಬಿಬಿಎಲ್ ಕಾರ್ಡ್‍ಗೆ ಅರ್ಜಿ ಹಾಕಿರು ವವರು ಸೇರಿದಂತೆ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪಡಿತರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಇದೇ ವೇಳೆ ಲಾಕ್‍ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸಹಕರಿಸುವಂತೆ ಇದೇ ವೇಳೆ ಮನವಿ ಮಾಡಿದರು. ಈ ವೇಳೆ ತಹಶೀಲ್ದಾರ್ ಬಸವರಾಜು ಚಿಗರಿ, ಶಿರಸ್ತೇದಾರ್ ಸುರೇಶ್, ಶಾಸಕರ ಆಪ್ತ ಸಹಾಯಕ ಲೋಕೇಶ್, ಪಪಂ ಸದಸ್ಯರು ಇದ್ದರು.

Translate »