ಕೆಆರ್‍ಎಸ್ ಬಳಿಯ ಬಾರ್‍ನಲ್ಲಿ ಕಳ್ಳತನ
ಮಂಡ್ಯ

ಕೆಆರ್‍ಎಸ್ ಬಳಿಯ ಬಾರ್‍ನಲ್ಲಿ ಕಳ್ಳತನ

April 23, 2020

ಶ್ರೀರಂಗಪಟ್ಟಣ, ಏ.22(ವಿನಯ್ ಕಾರೇಕುರ)- ತಾಲೂಕಿನ ಪಂಪ್ ಹೌಸ್ ಸರ್ಕಲ್ ಬಳಿಯ ಮೈಸೂರು-ಕೆ.ಆರ್.ಸಾಗರ ರಸ್ತೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್‍ನ ಬೀಗ ಮತ್ತು ಡೋರ್ ಲಾಕ್ ಒಡೆದು 2. ಲಕ್ಷ ಮೌಲ್ಯದ ವಿವಿಧ ಕಂಪನಿಗಳ ಮದ್ಯಗಳನ್ನು ಮತ್ತು ಸಿಸಿ ಕ್ಯಾಮರಾ ಡಿ.ವಿ.ಆರ್. ಅನ್ನು ಕಳ್ಳತನ ಮಾಡಿರುವ ಘಟನೆ ಬುಧವಾರ ನಡೆದಿದೆ.

ಇಂದು ಬೆಳಿಗ್ಗೆ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಪಡೆದ ಕೆ.ಆರ್.ಸಾಗರ ಪೊಲೀಸ್ ಠಾಣೆಯ ಪಿ.ಎಸೈ ನವೀನ್‍ಗೌಡ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಂಡ್ಯ ಜಿಲ್ಲಾ ಬೆರಳಚ್ಚು ತಜÐರು ಹಾಗೂ ಶ್ವಾನದಳ ಕೂಡ ಪರಿಶೀಲನೆ ನಡೆಸಿದ್ದು, ಅಬಕಾರಿ ವೃತ್ತ ನಿರೀಕ್ಷಕಿ ಶೈಲಜಾ ಹಾಗೂ ಸಿಬ್ಬಂದಿ ಬಾರ್ ಪರಿಶೀಲನೆ ನಡೆಸಿ ಹಿಂದಿನ ಸ್ಟಾಕ್ ಮತ್ತು ಪ್ರಸ್ತುತ ಸ್ಟಾಕ್ ಗಳ ಬಗ್ಗೆ ಮಾಹಿತಿ ಪಡೆದರು. ಸ್ಥಳಕ್ಕೆ ಡಿವೈಎಸ್‍ಪಿ ಅರುಣ್ ನಾಗೇಗೌಡ, ವೃತ್ತ ನಿರೀಕ್ಷಕ ಯೋಗೇಶ್ ಕೂಡ ತೆರಳಿದ್ದರು.

Translate »