ಮೇ3ರ ನಂತರ ಲಾಕ್‍ಡೌನ್ ಸಡಿಲಿಕೆಗೆ ಸಿಎಂ ಜೊತೆ ಚರ್ಚೆ : ಎಸ್.ಟಿ.ಸೋಮಶೇಖರ್
ಮೈಸೂರು ಗ್ರಾಮಾಂತರ

ಮೇ3ರ ನಂತರ ಲಾಕ್‍ಡೌನ್ ಸಡಿಲಿಕೆಗೆ ಸಿಎಂ ಜೊತೆ ಚರ್ಚೆ : ಎಸ್.ಟಿ.ಸೋಮಶೇಖರ್

April 23, 2020

ತಿ.ನರಸೀಪುರ, ಏ.22(ಎಸ್‍ಕೆ)-ತಾಲೂಕಿನಲ್ಲಿ ಒಂದೂ ಕೋವಿಡ್-19 ಕೇಸ್ ದೃಢ ಪಡದ ಹಿನ್ನೆಲೆಯಲ್ಲಿ ತಾಲೂಕು ಸೇಫ್ ಝೋನ್‍ನಲ್ಲಿದ್ದು, ಮೇ 3ರ ನಂತರ ಲಾಕ್‍ಡೌನ್ ಕೊಂಚ ಸಡಿಲಿಕೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಟಾಸ್ಕ್ ಫೆÇೀರ್ಸ್ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಸ್ಥಳೀಯ ಶಾಸಕರು, ಆರೋಗ್ಯ ಇಲಾಖೆ ಹಾಗೂ ತಾಲೂಕು ಆಡಳಿತದ ಪರಿಶ್ರಮದಿಂದಾಗಿ ತಾಲೂಕಿನಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ನಂಜನಗೂಡು ಜುಬಿಲಂಟ್ ಕಾರ್ಖಾನೆಯ ಪ್ರಕರಣಗಳಿಂದಾಗಿ ಮೈಸೂರು ರೆಡ್ ಜೋನ್‍ನಲ್ಲಿದೆ. ಆದರೆ ತಾಲೂಕಿನಲ್ಲಿ ಯಾವುದೇ ಪ್ರಕರಣಗಳು ಇಲ್ಲದ್ದರಿಂದ ಸ್ವಲ್ಪ ಮಟ್ಟಿನ ಸಡಿಲಿಕೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.

ಲಾಕ್‍ಡೌನ್‍ನಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಹೊಡೆತ ಬಿದ್ದಿದೆ. ಜಿಲ್ಲೆಯಿಂದ ಜಿಲ್ಲೆಗೆ ಕೃಷಿ ಸಾಮಗ್ರಿ ಹಾಗೂ ಕೃಷಿ ಉತ್ಪನ್ನ ಸಾಗಣಿಕೆ ಮಾಡಲು ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಎಪಿಎಂಸಿಗೆ ಹಣ್ಣು ಮತ್ತು ತರಕಾರಿಗಳನ್ನು ಸಾಗಿಸಲು ಇಲಾಖೆಯವರೇ ರೈತರಿಗೆ ವಾಹನ ಸೌಲಭ್ಯ ಕಲ್ಪಿಸಿಕೊಡಬೇಕು. ಸಹಕಾರ ಸಂಘಗಳಾಗಲಿ, ಖಾಸಗಿ ಕಂಪನಿಗಳಾಗಲಿ ರೈತರಿಗೆ ನೀಡಿರುವ ಸಾಲ ಮರುಪಾವತಿಸುವಂತೆ ಮುಂದಿನ ಮೂರು ತಿಂಗಳು ಒತ್ತಾಯಿಸುವಂತಿಲ್ಲ ಎಂದು ಸಚಿವರು ಸಹಕಾರ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

ಶಾಸಕ ಎಂ.ಅಶ್ವಿನ್‍ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕೊರೊನಾಗೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ನಿರೀಕ್ಷೆಗೂ ಮೀರಿದ ಕೆಲಸ ಮಾಡಿದೆ. ಈ ವರೆವಿಗೂ ಕೊರೊನಾ ಮುಕ್ತ ತಾಲೂಕನ್ನಾಗಿ ಮಾಡಲು ಶ್ರಮಿಸಿದ್ದಾರೆ. ಟಾಸ್ಕ್‍ಪೆÇೀರ್ಸ್ ರಚಿಸಿ ಪ್ರತಿ ಹಳ್ಳಿಯಲ್ಲೂ ಜಾಗೃತಿ ಮಾಡಿಸುವ ಕೆಲಸ ಮಾಡಿದ್ದಾರೆ ಅವರ ಕೆಲಸ ಅಭಿನಂದನಾರ್ಹ ಎಂದರು.

ಪೆÇಲೀಸಪ್ಪನ ಲಂಚಾವತಾರ ಕುರಿತು ದೂರು: ಪಟ್ಟಣ ಠಾಣೆಯಲ್ಲಿ ಕರ್ತವ್ಯನಿರತ ಪೆÇಲೀಸ್ ಪೇದೆಯೊಬ್ಬರು ವಿವಿಧ ಕೆಲಸಗಳಿಗಾಗಿ ಠಾಣೆಗೆ ಬರುವ ಅಮಾಯರಿಂದ ಲಂಚಕ್ಕಾಗಿ ಬೇಡಿಕೆಯಿಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಉಸ್ತುವಾರಿ ಸಚಿವರಿಗೆ ದೂರು ನೀಡಿದರು. ಟಾಸ್ಕ್‍ಪೆÇೀರ್ಸ್ ಸಭೆಯ ಬಳಿಕ ಸಚಿವರನ್ನು ಭೇಟಿಯಾದ ಮುಖಂಡರು ಪೆÇಲೀಸ್ ಪೇದೆ ಕೃಷ್ಣೇಗೌಡ ಎಂಬಾತ ಠಾಣೆಗೆ ಬರುವವರಿಂದ ಪಾಸ್‍ಪೆÇೀರ್ಟ್ ಪರಿಶೀಲನೆ ಮಾಡಲು ಹಣಕ್ಕೆ ಬೇಡಿಕೆಯಿಡುತ್ತಿದ್ದು, ಬಿಜೆಪಿ ಮುಖಂಡರು ಕೆಲ ಕೆಲಸಗಳಿಗೆ ಹೋದಾಗಲೂ ಹಣ ಕೇಳಿದ್ದಾನೆ. ಹಣ ನೀಡದಿದ್ದರೆ ಬೇಕೆಂತಲೇ ದಾಖಲಾತಿಗಳು ಸರಿ ಇಲ್ಲ ಎಂದು ಸಾಗಹಾಕುತ್ತಿದ್ದಾನೆಂದು ದೂರಿದರು. ಮನವಿ ಆಲಿಸಿದ ಸಚಿವ ಸೋಮಶೇಖರ್ ಎಸ್ಪಿಯೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಗುಂಡ್ಲುಪೇಟೆ ಶಾಸಕ ನಿರಂಜನ್‍ಕುಮಾರ್, ಎಎಸ್ಪಿ ಸ್ನೇಹಾ, ಜಿಪಂ ಇಓ ಪ್ರಶಾಂತ್, ತಹಸೀಲ್ದಾರ್ ಡಿ.ನಾಗೇಶ್, ತಾಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್, ಎಇಇ ಲಕ್ಷ್ಮಣರಾವ್, ಸಿಪಿಐ ಎಂ.ಆರ್.ಲವ, ಪುರಸಭಾ ಮುಖ್ಯಾಧಿಕಾರಿ ಆರ್.ಅಶೋಕ್, ಹೇಮಂತ್‍ಕುಮಾರ್, ಎಇಇ ನಾಗಯ್ಯ, ಬಿಇಓ ಸ್ವಾಮಿ, ಸಿಡಿಪಿಓ ಬಸವರಾಜು ಮತ್ತಿತರರಿದ್ದರು.

Translate »