ವಿದ್ಯುತ್ ಸ್ಪರ್ಶ: ಸ್ಥಳದಲ್ಲೇ ರೈತ ಸಾವು
ಮಂಡ್ಯ

ವಿದ್ಯುತ್ ಸ್ಪರ್ಶ: ಸ್ಥಳದಲ್ಲೇ ರೈತ ಸಾವು

April 21, 2020

ಕೆ.ಆರ್.ಪೇಟೆ, ಏ.20- ವಿದ್ಯುತ್ ಸ್ಪರ್ಶಿಸಿ ರೈತನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿ ರುವ ಘಟನೆ ತಾಲೂಕಿನ ಬಿಕ್ಕಸಂದ್ರ ಗ್ರಾಮದಲ್ಲಿ ಸೋಮವಾರ ಸಂಜೆ ನಡೆ ದಿದೆ. ತಾಲೂಕಿನ ಸಂತೆಬಾಚಹಳ್ಳಿ ಹೋಬಳಿ ಬಿಕ್ಕಸಂದ್ರ ಗ್ರಾಮದ ನಿವಾಸಿ ನಿಂಗಯ್ಯ (64) ಮೃತ ರೈತ.

ವಿವರ: ರೈತ ನಿಂಗಯ್ಯ ಮೇಕೆಗೆ ಮೇವು ತರಲೆಂದು ತಮ್ಮ ಜಮೀನಿಗೆ ಹೋದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದಿದ್ದಾರೆ. ಪರಿಣಾಮ ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮರದ ಕೆಳಗೆ ಬಿದ್ದಿದ್ದ ನಿಂಗಯ್ಯ ಅವರನ್ನು ಗ್ರಾಮಸ್ಥರು ನೋಡಿ ಪಟ್ಟಣ ಪೆÇಲೀಸ್ ಠಾಣೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕೆ.ಆರ್.ಪೇಟೆ ಪಟ್ಟಣ ಪೆÇಲೀಸರು ಮತ್ತು ಚೆಸ್ಕಾಂ ಅಧಿಕಾರಿ ಗಳು ಭೇಟಿ ನೀಡಿ, ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗ್ರಾಮಸ್ಥರ ಆಗ್ರಹ: ವಿದ್ಯುತ್ ಇಲಾಖೆ ನಿರ್ಲಕ್ಷ್ಯದಿಂದ ರೈತ ನಿಂಗಯ್ಯ ಮೃತಪಟ್ಟಿ ದ್ದಾರೆ. ಹಾಗಾಗಿ ಕೂಡಲೇ ಅವರ ಕುಟುಂಬಕ್ಕೆ ಕನಿಷ್ಠ 10ಲಕ್ಷ ರೂ. ಪರಿಹಾರ ನೀಡ ಬೇಕೆಂದು ಒತ್ತಾಯ ಮಾಡಿದ್ದಾರೆ.

Translate »