ಕೊರೊನಾ ನಿಯಂತ್ರಣಕ್ಕೆ ಔಷಧಿ ಸಿಂಪಡಿಸುತ್ತಿದ್ದ ಪೌರಕಾರ್ಮಿಕ ಸಾವು
ಮಂಡ್ಯ

ಕೊರೊನಾ ನಿಯಂತ್ರಣಕ್ಕೆ ಔಷಧಿ ಸಿಂಪಡಿಸುತ್ತಿದ್ದ ಪೌರಕಾರ್ಮಿಕ ಸಾವು

April 23, 2020

ಮಂಡ್ಯ, ಏ.22(ನಾಗಯ್ಯ)- ಕೊರೊನಾ ನಿಯಂತ್ರಣಕ್ಕಾಗಿ ಔಷಧಿ ಸಿಂಪಡಣೆ ವೇಳೆ ಪೌರಕಾರ್ಮಿಕ ಕುಸಿದು ಬಿದ್ದು ಸಾವಿಗೀಡಾದ ಘಟನೆ ಮಳವಳ್ಳಿ ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ ನಡೆದಿದೆ.

ಕಲ್ಕುಣಿ ಗ್ರಾಮ ಪಂಚಾಯತಿಯ ಡಿ ಗ್ರೂಪ್ ನೌಕರ ಬಸವರಾಜು(46) ಎಂಬಾತನೇ ಮೃತ ಪೌರಕಾರ್ಮಿಕನಾಗಿದ್ದು, ಈತ ಕಳೆದ ಕೆಲವು ದಿನಗಳಿಂದ ಕಲ್ಕುಣಿ ಪಂಚಾಯ್ತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಕರೊನಾ ಸೋಂಕು ಹರಡದಂತೆ ಔಷಧಿ ಸಿಂಪಡಿ ಸುವ ಸಿಬ್ಬಂದಿಗಳ ಜೊತೆ ಕೆಲಸ ಮಾಡುತ್ತಿದ್ದ. ಔಷಧಿ ಸಿಂಪಡಿಸುವ ವೇಳೆ ಬಸವರಾಜು ಅಸ್ವಸ್ಥರಾಗಿ ಕುಸಿದು ಬಿದ್ದ ಪರಿಣಾಮ ಆತನನ್ನು ಮಂಗಳವಾರ ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಬಸವರಾಜು ಸಾವನ್ನಪ್ಪಿದ್ದಾರೆ.

ಈ ಸಂಬಂಧ ಕಿರುಗಾವಲು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಚೇ ಗೌಡ, ಔಷಧಿ ಸಿಂಪಡಣೆಯ ಅಡ್ಡಪರಿಣಾಮದಿಂದ ಕಾರ್ಮಿಕರು ಮೃತಪಟ್ಟ ಪ್ರಕರಣ ಈವರೆಗೆ ದೇಶದಲ್ಲಿ ವರದಿಯಾಗಿಲ್ಲ. ಪೌರ ಕಾರ್ಮಿಕನ ಸಾವಿಗೆ ಔಷಧಿ ಸಿಂಪಡಣೆ ಕಾರಣವಲ್ಲ. ಆದರೆ ಆತನಿಗೆ ಹೃದಯ ಸಂಬಂಧಿ ಖಾಯಿಲೆ ಇತ್ತು ಎಂಬ ಮಾಹಿತಿ ಬಂದಿದೆ. ಅದರ ಬಗ್ಗೆಯೂ ಪರಿಶೀಲಿಸಲಾಗುವುದು ಎಂದರು.

Translate »