ಕೊರೊನಾ ಎಫೆಕ್ಟ್; ರಸ್ತೆಯಲ್ಲಿ ಬಿದ್ದಿದ್ದ 500 ರೂ. ನೋಟುಗಳನ್ನು ಮುಟ್ಟದ ಜನತೆ.!
ಮಂಡ್ಯ

ಕೊರೊನಾ ಎಫೆಕ್ಟ್; ರಸ್ತೆಯಲ್ಲಿ ಬಿದ್ದಿದ್ದ 500 ರೂ. ನೋಟುಗಳನ್ನು ಮುಟ್ಟದ ಜನತೆ.!

April 23, 2020

ಮಂಡ್ಯ, ಏ.22(ನಾಗಯ್ಯ)- ರಸ್ತೆಯಲ್ಲಿ ಬಿದ್ದಿದ್ದ 500 ರೂ. ಮುಖಬೆಲೆಯ ನೋಟುಗಳನ್ನು ಕೊರೊನಾ ಭೀತಿಯಿಂದಾಗಿ ಮುಟ್ಟದೆ ಜನತೆ ಭಯಭೀತರಾದ ಘಟನೆ ಪಾಂಡವಪುರ ಪಟ್ಟಣದಲ್ಲಿಂದು ಜರುಗಿದೆ.

ಪಾಂಡವಪುರ ಪಟ್ಟಣದ ಗಾಣಿಗರ ಬೀದಿಯಲ್ಲಿ 500 ರೂಪಾಯಿ ಮುಖಬೆಲೆಯ 6 ನೋಟುಗಳು ಬಿದ್ದಿದ್ದರೂ ಕೂಡಾ ಜನರು ಅದನ್ನು ತೆಗೆದು ಕೊಳ್ಳದೇ ಪೆÇಲೀಸರಿಗೆ ಮಾಹಿತಿ ಮುಟ್ಟಿಸಿದರು. ಸ್ಥಳಕ್ಕಾಗಮಿಸಿದ ಪಟ್ಟಣ ಠಾಣೆಯ ಪಿಎಸ್‍ಐ ಸುಮಾರಾಣಿ ಸೂಕ್ಷ್ಮವಾಗಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಬಳಿಕ ನೋಟಿನ ಮೇಲೆ ಸ್ಯಾನಿಟೈಸರ್ ಸಿಂಪಡಿಸಿ, ಕೈಗೆ ಗ್ಲೌಸ್ ಧರಿಸಿ ನೋಟು ಎತ್ತಿಕೊಂಡ ಬಳಿಕ ಸ್ಥಳೀಯರು ನಿಟ್ಟುಸಿರುಬಿಟ್ಟರು. ಈ ಹಣವನ್ನು ಯಾರೋ ಆಕಸ್ಮಿಕವಾಗಿ ಬೀಳಿಸಿಕೊಂಡಿದ್ದು, ಯಾವುದೇ ಸುಳ್ಳು ಸುದ್ದಿಗೆ ಜನತೆ ಕಿವಿಗೊಡ ಬಾರದು, ಹಣ ಕಳೆದುಕೊಂಡವರು ಯಾರಾದರೂ ಇದ್ದರೆ ಠಾಣೆಗೆ ಬಂದು ಪಡೆಯಲು ಪಿಎಸ್‍ಐ ಸುಮಾರಾಣಿ ತಿಳಿಸಿದ್ದಾರೆ. ಐದು ರೂಪಾಯಿ ನಾಣ್ಯ ರಸ್ತೆಯಲ್ಲಿ ಬಿದ್ದಿದ್ದರೆ ಬಿಡದ ಜನರೀಗ ಕೊರೊನಾ ವೈರಸ್ ಭೀತಿಯಿಂದಾಗಿ ಐದುನೂರು ರೂಪಾಯಿ ಕಂಡರೂ ಹೆದರುವ ಕಾಲ ಬಂದಿದೆ.

Translate »