ಸರಸ್ವತಿಪುರಂ ಠಾಣೆಯಲ್ಲಿ ವಿಶ್ವ ಭೂಮಿ ದಿನ ಆಚರಣೆ
ಮೈಸೂರು

ಸರಸ್ವತಿಪುರಂ ಠಾಣೆಯಲ್ಲಿ ವಿಶ್ವ ಭೂಮಿ ದಿನ ಆಚರಣೆ

April 23, 2020

ಮೈಸೂರು,ಏ.22(ಎಸ್‍ಪಿಎನ್)-ಮೈಸೂರಿನ ಸರಸ್ವತಿಪುರಂ ಪೊಲೀಸರು ಠಾಣಾ ಆವರಣದಲ್ಲಿ ಬುಧವಾರ 2 ಗಿಡ ನೆಟ್ಟು `ವಿಶ್ವ ಭೂಮಿ ದಿನ’ ಆಚರಿಸಿದರು.

ಕೃಷ್ಣರಾಜ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ, ಸೀಬೆ, ನೆಲ್ಲಿಕಾಯಿ ಗಿಡ ನೆಟ್ಟು, ನಂತರ ಮಾಧ್ಯಮಗಳೊಂದಿಗೆ ಮಾತ ನಾಡಿದರು. ಒಂದು ಗಲ್ಲಿ, ಊರು, ಪಟ್ಟಣ ಸದಾ ಹಸಿರಾಗಿದ್ದರೆ, ಅಲ್ಲಿನ ಜನರ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ದೊರೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರು ಭೂಮಿಯನ್ನು ಪ್ರೀತಿಸಿ. ಆಗ ಮಾತ್ರ, ಪ್ರಕೃತಿಯನ್ನು ಪ್ರೀತಿಯಿಂದ ಕಾಣಲು ಸಾಧ್ಯ ಎಂದರು.

ಸರಸ್ವತಿಪುರಂ ಠಾಣೆ ಇನ್ಸ್‍ಪೆಕ್ಟರ್ ಆರ್.ವಿಜಯ್‍ಕುಮಾರ್ ಪರಿಸರ ಪ್ರೇಮಿಯಾಗಿದ್ದು, ಠಾಣಾ ಆವರಣದಲ್ಲಿ ಗಿಡ ನೆಡಿಸಿ `ಭೂಮಿ’ಯನ್ನು ಎಲ್ಲರೂ ಪ್ರೀತಿಯಿಂದ ಕಾಣುವ ಸಂದೇಶ ನೀಡಿ ದ್ದಾರೆ. ಕೋವಿಡ್ ವೈರಾಣು ತಡೆಗಟ್ಟುವ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡು ಇತರೆ ಪೊಲೀಸರಿಗೆ ಮಾದರಿ ಎನಿಸಿಕೊಂಡಿದ್ದಾರೆ ಎಂದರು.

20 ವರ್ಷಗಳ ಹಿಂದೆ ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆ ಆವರಣದಲ್ಲಿ ಅರಳಿ ಮರ, ಬೆಂಗಳೂರಿನ ಕೋರಮಂಗಲ 6ನೇ ಹಂತದ ಪೊಲೀಸ್ ಕ್ವಾರ್ಟರ್ಸ್‍ನಲ್ಲಿ ಅತ್ತಿ ಮರ ಬೆಳೆಸಿ ಪರಿಸರ ಸ್ನೇಹಿ ಎನಿಸಿಕೊಂಡಿದ್ದಾರೆ ಎಂದು ಠಾಣೆಯ ಸಿಬ್ಬಂದಿ `ಮೈಸೂರು ಮಿತ್ರ,ನಿಗೆ ತಿಳಿಸಿದರು. ಈ ವೇಳೆ ಸಬ್‍ಇನ್ಸ್‍ಪೆಕ್ಟರ್ ಭವ್ಯ ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Translate »