ಮಂಡ್ಯ, ಏ.6(ನಾಗಯ್ಯ)- ನಗರದ ಮಿಮ್ಸ್‍ನ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಾಪತ್ತೆಯಾಗಿದ್ದ ಕೊರೊನಾ ಶಂಕಿತನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ಮತ್ತೆ ಚಿಕಿತ್ಸೆಗೆ ದಾಖಲು ಮಾಡುವಲ್ಲಿ ಮಂಡ್ಯ ಪೆÇಲೀಸರು ಯಶಸ್ವಿಯಾಗಿದ್ದಾರೆ. ಮಳವಳ್ಳಿಯ 35ರ ವಯೋಮಾನದ ವ್ಯಕ್ತಿ ಸೋಮವಾರ ಬೆಳಿಗ್ಗೆ ಪರಾರಿಯಾಗಿ ಮಧ್ಯಾಹ್ನದ ವೇಳೆಗೆ ಸಿಕ್ಕಿಬಿದ್ದಿದ್ದಾನೆ. ಈತ ನಗರದ ಶಂಕರಮಠದಲ್ಲಿ ಸಂಬಂಧಿಕರ ಮನೆಯಲ್ಲಿ ಇದ್ದ ಎನ್ನಲಾಗಿದೆ. ಆತನನ್ನು ಆ್ಯಂಬುಲೆನ್ಸ್ ಮೂಲಕ ಮತ್ತೆ ಆಸ್ಪತ್ರೆಗೆ ಕರೆತರಲಾಗಿದ್ದು, ಆ ಮೂಲಕ ಜಿಲ್ಲಾ ಪೆÇಲೀಸರು ಮತ್ತು ವೈದ್ಯಾಧಿಕಾರಿಗಳು ಎಲ್ಲಾ ಅತಂಕಕ್ಕೆ ತೆರೆ ಎಳೆದಿದ್ದಾರೆ. ಘಟನೆ ವಿವರ:…
ಎಟಿಎಂಗಳಲ್ಲಿ ಸ್ಯಾನಿಟೈಸರ್, ಸೆಕ್ಯೂರಿಟಿ ಗಾರ್ಡ್‍ಗಳಿಲ್ಲ!
April 7, 2020ಜಿಲ್ಲಾಡಳಿತದ ಸೂಚನೆ ಗಾಳಿಗೆ ತೂರಿದ ಬ್ಯಾಂಕ್ ಅಧಿಕಾರಿಗಳು, ಕೊರೊನಾ ಭೀತಿಯಲ್ಲಿ ಗ್ರಾಹಕರು ಮಂಡ್ಯ, ಏ.6(ನಾಗಯ್ಯ)- ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ಕಡ್ಡಾಯವಾಗಿ ಬ್ಯಾಂಕ್ ಮತ್ತು ಎಟಿಎಂ ಕೇಂದ್ರಗಳಲ್ಲಿ ಸ್ಯಾನಿಟೈಸರ್, ಡೆಟಾಯಿಲ್ ಬಳಸಬೇಕು ಎಂದು ಜಿಲ್ಲಾಡಳಿತ ನೀಡಿರುವ ಸೂಚನೆಯನ್ನು ನಗರದ ಪ್ರಮುಖ ಬ್ಯಾಂಕ್‍ಗಳು ಗಾಳಿಗೆ ತೂರಿವೆ. ನಗರದ ಪ್ರಮುಖ ರಸ್ತೆ, ಬಡಾವಣೆಗಳಲ್ಲಿ 100ಕ್ಕೂ ಹೆಚ್ಚು ಎಟಿಎಂ ಕೇಂದ್ರಗಳಿದ್ದು, ಬಹುತೇಕ ಎಟಿಎಂ ಕೇಂದ್ರ ಗಳಲ್ಲಿ ಸ್ಯಾನಿಟೈಸರ್ ಮತ್ತು ಸೆಕ್ಯುರಿಟಿ ಗಾರ್ಡ್‍ಗಳೇ ಇಲ್ಲದಿರುವುದರಿಂದ ಹಣ ಪಡೆಯಲು ಬರುವ ಗ್ರಾಹಕರು ಕೊರೊನಾ ಭೀತಿನ್ನೆದುರಿಸುವ ಪರಿಸ್ಥಿತಿ…
ಕೊರೊನಾ ಭೀತಿ: ಜಿಲ್ಲಾದ್ಯಂತ ಲಾಕ್‍ಡೌನ್ ಮತ್ತಷ್ಟು ಬಿಗಿ ನಾಗಮಂಗಲ, ಮಳವಳ್ಳಿ ಕಂಟೋನ್ಮೆಂಟ್ ಝೋನ್
April 6, 2020ಎರಡು ತಾಲೂಕಿನೊಳಕ್ಕೆ ಯಾರೂ ಬರುವಂಗಿಲ್ಲ, ಹೊರ ಹೋಗೋಕೂ ಬಿಡ್ತಿಲ್ಲ ಜಿಲ್ಲಾ ಕೇಂದ್ರ ಸಂಪೂರ್ಣ ಸ್ತಬ್ಧ, ಎಲ್ಲೆಡೆ ಪೊಲೀಸರ ನಾಕಾಬಂದಿ ಮಂಡ್ಯ, ಏ.5(ನಾಗಯ್ಯ)- ನಾಗ ಮಂಗಲ ಮತ್ತು ಮಳವಳ್ಳಿಗೆ ಭೇಟಿ ನೀಡಿ ಮೈಸೂರಿಗೆ ತೆರಳಿದ್ದ ದೆಹಲಿಯ ನಿಜಾ ಮುದ್ದೀನ್ ಜಮಾತ್ ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಐವರು ಮೌಲ್ವಿ ಗಳಿಗೆ ಕೊರೊನಾ ಸೋಂಕು ತಗುಲಿರು ವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎರಡು ತಾಲೂಕುಗಳನ್ನು ಕಂಟೋನ್ಮೆಂಟ್ ಝೋನ್ (ರೆಡ್ ಏರಿಯಾ) ಎಂದು ಮಂಡ್ಯ ಜಿಲ್ಲಾಡಳಿತ ಘೋಷಿಸಿದೆ. ಮೌಲ್ವಿಗಳು ನಾಗಮಂಗಲ, ಮಳವಳ್ಳಿ ಯಲ್ಲಿ…
ಅಂಚೆ ಇಲಾಖೆಯಿಂದ ಸಾರ್ವಜನಿಕರಿಗೆ ಅಗತ್ಯ ಸೇವೆ
April 6, 2020ಮಂಡ್ಯ, ಏ.5(ನಾಗಯ್ಯ)- ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕ ರಿಗೆ ಅಗತ್ಯ ಸೇವೆ ಒದಗಿಸಲು ಅಂಚೆ ಇಲಾಖೆ ಸಜ್ಜಾಗಿದೆ. ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದ ಕಾರಣ, ಔಷಧಿಗಳು, ವೈದ್ಯಕೀಯ ಸಲಕರಣೆಗಳ ಸಾಗಣೆಗೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಎಲ್ಲಾ ಅಂಚೆ ಕಚೇರಿಗಳಿಂದ ವೈದ್ಯಕೀಯ ಪಾರ್ಸೆಲ್‍ಗಳನ್ನು ಕಾಯ್ದಿರಿಸಬಹುದು. ವೈದ್ಯಕೀಯ ವಸ್ತುಗಳನ್ನು ಹೊಂದಿರುವ ಪಾರ್ಸೆಲ್‍ಗಳನ್ನು ಕಾಯ್ದಿರಿಸಲು ಮತ್ತು ವಿತರಿಸಲು ಅಂಚೆ ಇಲಾಖೆ ವಿಶೇಷ ವ್ಯವಸ್ಥೆ ಮಾಡುತ್ತಿದೆ. ಅಂಚೆ ಕಚೇರಿ ನೀಡುವ ಅಗತ್ಯ ಸೇವೆಗಳು: ಸಾಮಾಜಿಕ ಭದ್ರತೆ ಪಿಂಚಣಿ ಹಣದ ಆದೇಶಗಳ ಪಾವತಿ, ಮೇಲ್ ಸೇವೆಗಳು, ವೈದ್ಯಕೀಯ…
ಜಿಲ್ಲಾದ್ಯಂತ ಝಗಮಗಿಸಿದ ‘ಸಾಮರಸ್ಯದ ಬೆಳಕು’
April 6, 2020ಮಂಡ್ಯ, ಏ.5- ಕೊರೊನಾ ಅಂಧಕಾರ ಓಡಿಸಲು ದೀಪ ಬೆಳಗಿಸುವುದರ ಮೂಲಕ ನಾವೆಲ್ಲ ಒಗ್ಗೂಡಿ ಈ ಮಾರಣಾಂತಿಕ ಕಾಯಿಲೆ ವಿರುದ್ಧ ಹೋರಾಡೋಣ ಎಂಬ ಸಂದೇಶವನ್ನೊ ಳಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ದೀಪ ಹಚ್ಚುವ ಕಾರ್ಯಕ್ರಮಕ್ಕೆ ಜಿಲ್ಲೆಯ ಜನರು ಉತ್ತಮ ಸ್ಪಂದನೆ ತೋರಿದರು. ರಾತ್ರಿ 9 ಗಂಟೆಗೆ ಸರಿಯಾಗಿ ಜಿಲ್ಲೆಯ ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ, ಪಾಂಡವಪುರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಜನರು ಧರ್ಮ, ಜಾತಿ ಭೇದವಿಲ್ಲದೆ ಮನೆಯ ವಿದ್ಯುತ್ ದೀಪ ಆರಿಸಿ, ಹಣತೆ,…
ವಾರದೊಳಗೆ ರೈತರ ಖಾತೆಗಳಿಗೆ 2 ಸಾವಿರ, ಜನ್ ಧನ್ ಖಾತೆಗೆ 500 ರೂ ಜಮಾ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್
April 3, 2020ಬಡವರು,ನಿರ್ಗತಿಕರಿಗೆ 10000 ಲೀ .ಹಾಲು ಉಚಿತವಾಗಿ ವಿತರಣೆ ವಿದ್ಯುತ್ ಬಿಲ್ ಪಾವತಿಯಲ್ಲಿ ವಿನಾಯಿತಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶ ಚೆಕ್ ಪೋಸ್ಟ್‍ನಲ್ಲಿ ರೈತರ ಬೆಳೆ ವಿಲೆವಾರಿಗೆ ಅಡ್ಡಿಪಡಿಸುವಂತಿಲ್ಲ. ಮಂಡ್ಯ, ಏ.2(ನಾಗಯ್ಯ)- ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ರೈತರ ಖಾತೆಗೆ 2 ಸಾವಿರ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲಾಣ ಯೋಜನೆಯಡಿ ಜನ್ ಧನ್ ಖಾತೆಗೆ 500 ರೂ ಗಳನ್ನು ಈ ಮೊದಲ ವಾರದಲ್ಲಿ ಜಮೆ ಮಾಡಲಾ ಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು. ಜಿಲ್ಲಾಧಿಕಾರಿಗಳ…
ಬುದ್ದಿ ಹೇಳಿದ ವೈದ್ಯರನ್ನು ನಿಂದಿಸಿದ ಯುವಕರ ಗುಂಪು
April 3, 2020ಕಾನೂನು ಕ್ರಮ ಕೈಗೊಳ್ಳುವುದಾಗಿ ಡಿಹೆಚ್‍ಓ ಎಚ್ಚರಿಕೆ ಕೊನೆಗೂ ವೈದ್ಯರ ಕ್ಷಮೆ ಯಾಚಿಸಿದ ಯುವಕರು ನಾಗಮಂಗಲ, ಏ.2- ಗುಂಪುಗುಂಪಾಗಿ ಆಟವಾಡಬಾರದು ಎಂದು ತಿಳಿದ ಡಾಕ್ಟರನ್ನು ಯುವಕರ ಗುಂಪು ನಿಂದಿಸಿರುವ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿ ವಳಗೆರೆ ಪುರ ದಲ್ಲಿ ನಡೆದಿದೆ. ನಾಗಮಂಗಲ ತಾಲೂಕಿನಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ ನಡೆಸುತ್ತಿರುವ ಡಾಕ್ಟರ್ ಮಮತಾ ಅವರು ತಂಡ ಬೆಳ್ಳೂರು ಹೋಬಳಿ ವಳಗೆರೆ ಪುರಕ್ಕೆ ಭೇಟಿ ನೀಡಿದಾಗ ಯುವಕರ ಗುಂಪೆÇಂದು ಆಟವಾಡುತ್ತಿರುವುದನ್ನು ಕಂಡು, ದೇಶದಾದ್ಯಂತ ಕೊರೊನಾ…
ಮಂಡ್ಯ ಕಾಂಗ್ರೆಸ್‍ನಿಂದ 7.5 ಲಕ್ಷ ರೂ ದೇಣಿಗೆ
April 3, 2020ಮಂಡ್ಯ, ಏ.2(ನಾಗಯ್ಯ)- ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ 7.5 ಲಕ್ಷ ರೂ ದೇಣಿಗೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಇಂದು ಸಲ್ಲಿಸಲಾಯಿತು. ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕಾಂಗ್ರೆಸ್ ಮುಖಂಡರು, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ 7.5 ಲಕ್ಷರು ದೇಣಿಗೆಯ ಚೆಕ್‍ನ್ನು ನೀಡಿದರು. ಈ ಸಂದರ್ಭದಲ್ಲಿ ಮಾತ ನಾಡಿದ ಎನ್.ಚಲುವರಾಯಸ್ವಾಮಿ, ಪ್ರಧಾನಿ ಮೋದಿಯವರ ಕರೆಗೆ ದೇಶದ ಜನತೆ ಪಕ್ಷಾತೀತವಾಗಿ ಕೊರೊನಾ ತಡೆಗೆ ಸ್ಪಂದಿಸುತ್ತಿ ದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಗೊಂಡ ಕ್ರಮದ ಹಿನ್ನೆಲೆಯಲ್ಲಿ…
ಮಂಡ್ಯ ಸಕ್ಕರೆ ಕಾರ್ಖಾನೆಗಳ ಸ್ಪಿರಿಟ್‍ನಿಂದ ಸ್ಯಾನಿಟೈಸರ್ ಉತ್ಪಾದನೆ
April 2, 2020ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾಹಿತಿ. ಮಂಡ್ಯ, ಏ.1(ನಾಗಯ್ಯ)- ಜಿಲ್ಲೆಯಲ್ಲಿ 5 ಸಕ್ಕರೆ ಕಾರ್ಖಾನೆಗಳ ಪೈಕಿ ಸದ್ಯ 3 ಕಾರ್ಯ ನಿರ್ವಹಿಸುತ್ತಿದ್ದು, ಈ ಕಾರ್ಖಾನೆ ಗಳಲ್ಲಿ ತಯಾರಾಗುವ ರೆಕ್ಟಿಫೈಡ್ ಸ್ಪಿರಿಟ್ ನಿಂದ ಹ್ಯಾಂಡ್ ಸ್ಯಾನಿಟೈಸರ್ ತಯಾರಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು. ನಗರದಲ್ಲಿ ಕೊಪ್ಪ ಎನ್.ಎಸ್.ಎಲ್ ಕಾರ್ಖಾನೆಯ ಆಡಳಿತ ಮಂಡಳಿಯು ನೀಡಿದ 500 ಲೀಟರ್ ರೆಕ್ಟಿಫೈಡ್ ಸ್ಪಿರಿಟ್ ಸ್ವೀಕರಿಸಿ ಅವರು ಮಾತನಾಡಿದರು. ಕೊಪ್ಪ ಎನ್.ಎಸ್.ಎಲ್ ಕಾರ್ಖಾನೆಯ ಆಡಳಿತ ಮಂಡಳಿಯು ನೀಡಿದ 500 ಲೀಟರ್…
ಕೆನ್ನಾಳು ಗ್ರಾಪಂನಲ್ಲಿ ನಿರ್ಗತಿಕರಿಗೆ ಊಟ
April 2, 2020ಪಾಂಡವಪುರ, ಏ.1- ತಾಲೂಕಿನ ಕೆನ್ನಾಳು ಗ್ರಾಪಂ ಆವರಣದಲ್ಲಿ ನಿರ್ಗತಿಕರಿಗೆ ಊಟ ನೀಡುವ ಕಾರ್ಯಕ್ಕೆ ತಾಪಂ ಇಓ ಆರ್.ಪಿ.ಮಹೇಶ್ ಚಾಲನೆ ನೀಡಿದರು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಲಾಕ್‍ಡೌನ್ ಆಗಿರುವುದರಿಂದ ಕೆನ್ನಾಳು ಗ್ರಾಪಂ ಆವರಣದಲ್ಲಿ ಪಂಚಾಯಿತಿಯ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾಮಸ್ಥರು, ಮುಖಂಡರಿಂದ ಸಹಕಾರ ಪಡೆದುಕೊಂಡು ನಿರ್ಗತಿಕರಿಗೆ ಉಚಿತ ಊಟ ನೀಡುವ ಕಾರ್ಯವನ್ನು ತಾಪಂ ಇಓ ಆರಂಭಿಸಿದರು. ಪಾಂಡವಪುರ ರೈಲ್ವೇ ನಿಲ್ದಾಣ ಹಾಗೂ ಆರತಿ ಉಕ್ಕಡ ಬಳಿ ಹೆಚ್ಚು ಮಂದಿ ನಿರ್ಗತಿಕರು, ಊಟಕ್ಕಾಗಿ ಪರದಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಅವರಿಗೆ…