ಎಟಿಎಂಗಳಲ್ಲಿ ಸ್ಯಾನಿಟೈಸರ್, ಸೆಕ್ಯೂರಿಟಿ ಗಾರ್ಡ್‍ಗಳಿಲ್ಲ!
ಮಂಡ್ಯ

ಎಟಿಎಂಗಳಲ್ಲಿ ಸ್ಯಾನಿಟೈಸರ್, ಸೆಕ್ಯೂರಿಟಿ ಗಾರ್ಡ್‍ಗಳಿಲ್ಲ!

April 7, 2020

ಜಿಲ್ಲಾಡಳಿತದ ಸೂಚನೆ ಗಾಳಿಗೆ ತೂರಿದ ಬ್ಯಾಂಕ್ ಅಧಿಕಾರಿಗಳು, ಕೊರೊನಾ ಭೀತಿಯಲ್ಲಿ ಗ್ರಾಹಕರು
ಮಂಡ್ಯ, ಏ.6(ನಾಗಯ್ಯ)- ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ಕಡ್ಡಾಯವಾಗಿ ಬ್ಯಾಂಕ್ ಮತ್ತು ಎಟಿಎಂ ಕೇಂದ್ರಗಳಲ್ಲಿ ಸ್ಯಾನಿಟೈಸರ್, ಡೆಟಾಯಿಲ್ ಬಳಸಬೇಕು ಎಂದು ಜಿಲ್ಲಾಡಳಿತ ನೀಡಿರುವ ಸೂಚನೆಯನ್ನು ನಗರದ ಪ್ರಮುಖ ಬ್ಯಾಂಕ್‍ಗಳು ಗಾಳಿಗೆ ತೂರಿವೆ.

ನಗರದ ಪ್ರಮುಖ ರಸ್ತೆ, ಬಡಾವಣೆಗಳಲ್ಲಿ 100ಕ್ಕೂ ಹೆಚ್ಚು ಎಟಿಎಂ ಕೇಂದ್ರಗಳಿದ್ದು, ಬಹುತೇಕ ಎಟಿಎಂ ಕೇಂದ್ರ ಗಳಲ್ಲಿ ಸ್ಯಾನಿಟೈಸರ್ ಮತ್ತು ಸೆಕ್ಯುರಿಟಿ ಗಾರ್ಡ್‍ಗಳೇ ಇಲ್ಲದಿರುವುದರಿಂದ ಹಣ ಪಡೆಯಲು ಬರುವ ಗ್ರಾಹಕರು ಕೊರೊನಾ ಭೀತಿನ್ನೆದುರಿಸುವ ಪರಿಸ್ಥಿತಿ ಎದುರಾಗಿದೆ.

ನಗರದ ಎಂಸಿ ರಸ್ತೆಯಲ್ಲಿ ಬಹುತೇಕ ಪ್ರಮುಖ ಬ್ಯಾಂಕ್ ಗಳ ಮುಖ್ಯ ಕಚೇರಿಯಿದೆ. ಈ ಬ್ಯಾಂಕ್‍ಗಳ ಬಳಿಯಿ ರುವ ಎಟಿಎಂಗಳಲ್ಲಿ ಸ್ಯಾನಿಟೈಸರ್‍ನ್ನೇ ಇಟ್ಟಿಲ್ಲ. ಇಂಡಿ ಯನ್ ಬ್ಯಾಂಕ್, ಆಂಧ್ರಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಐಸಿಐಸಿಐ ಬ್ಯಾಂಕ್, ಕೆನರಾ ಬ್ಯಾಂಕ್, ಲಕ್ಷ್ಮಿ ವಿಲಾಸ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ ಮುಖ್ಯ ಕಚೆÉೀರಿ ಬಳಿಯಿರುವ ಎಟಿಎಂ ಕೇಂದ್ರಗಳಲ್ಲಿ ಸ್ಯಾನಿಟೈಸರ್‍ನ ಸುಳಿವೇ ಇಲ್ಲ್ಲ.

ಇನ್ನುಳಿದಂತೆ ನೂರಡಿ ರಸ್ತೆಯ ಬ್ಯಾಂಕ್ ಆಪ್ ಬರೋಡಾ, ಐಡಿಬಿಐ ಬ್ಯಾಂಕ್, ಎಕ್ಸಿಟಾಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಕರ್ನಾಟಕ ಬ್ಯಾಂಕ್, ಯೂನಿಯನ್ ಬ್ಯಾಂಕ್‍ನ ಎಟಿಎಂ ಕೇಂದ್ರಗಳಲ್ಲೂ ಸ್ಯಾನಿಟೈಸರ್ ಇಟ್ಟಿಲ್ಲ. ಆರ್‍ಪಿ ರಸ್ತೆಯ ಎಸ್‍ಬಿಐ ಮುಖ್ಯ ಕಚೇರಿಯಲ್ಲಿ ಸ್ಯಾನಿಟೈಸರ್ ಇಡಲಾಗಿದೆ.

ವಿವಿ ರಸ್ತೆ, ಗುತ್ತಲು ರಸ್ತೆ, ಬಂದೀಗೌಡ ಬಡಾವಣೆ ಯಲ್ಲಿರುವ ಎಟಿಎಂ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಮಾಯ ವಾಗಿದೆ. ಎಂ.ಸಿ ರಸ್ತೆಯ ಹೆಚ್‍ಡಿಎಫ್‍ಸಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಎಟಿಎಂ ಕೇಂದ್ರಗಳಲ್ಲಿ ಮಾತ್ರ ಸ್ಯಾನಿಟೈಸರ್ ಇಡಲಾಗಿತ್ತು. ಅಶೋಕ್ ನಗರದ ಸಿಂಡಿಕೇಟ್ ಬ್ಯಾಂಕ್, ಲಕ್ಷ್ಮೀವಿಲಾಸ ಬ್ಯಾಂಕ್ ಮುಖ್ಯ ಕಚೇರಿಯ ಎಟಿಎಂಗಳಲ್ಲಿ ಸ್ಯಾನಿಟೈಸರ್ ಇರಲಿಲ್ಲ.

ಕೆ.ಆರ್.ರೋಡ್‍ನಲ್ಲಿರುವ ಕೆನರಾ ಬ್ಯಾಂಕ್‍ನ ಮುಖ್ಯ ಕಚೇರಿಯ ಎಟಿಎಂ ಕೇಂದ್ರಗಳÀಲ್ಲಿ ಮಾತ್ರ ಸ್ಯಾನಿಟೈಸರ್ ಇಡಲಾಗಿದ್ದು, ಗುತ್ತಲು ರಸ್ತೆ, ಹೊಸಹಳ್ಳಿ ರಸ್ತೆ, ಆರ್‍ಪಿ ರಸ್ತೆ, ಎಂಸಿ.ರಸ್ತೆ, ಕಲ್ಲಹಳ್ಳಿಯ ಎಟಿಎಂ ಕೇಂದ್ರ, ಗುತ್ತಲು ರಸ್ತೆಯ ಎಸ್‍ಬಿಐ, ಕೆನರಾ, ಎಕ್ಸಿಸ್ ಬ್ಯಾಂಕ್ ಎಟಿಎಂಗಳು ಹಾಗೂ ಫ್ಯಾಕ್ಟರಿ ವೃತ್ತದ ಬಳಿಯ ಐಸಿಐಸಿಐ, ಇಂಡಿಯಾ ಒನ್ ಎಟಿಎಂಗಳಲ್ಲೂ ಸ್ಯಾನಿಟೈಸರ್ ವ್ಯವಸ್ಥೆಯೇ ಇರಲಿಲ್ಲ.

ಭದ್ರತಾ ಸಿಬ್ಬಂದಿಯೇ ಇಲ್ಲ: ನಗರದ ಬಹುತೇಕ ಎಟಿಎಂ ಗಳಲ್ಲಿ ಭದ್ರತಾ ಸಿಬ್ಬಂದಿಯೇ ಇಲ್ಲದಿರುವುದು ಕಂಡು ಬಂತು. ಎಸ್‍ಬಿಐನ ಪ್ರಮುಖ ಶಾಖೆ ಸೇರಿದಂತೆ ಇನ್ನಿತರ ಶಾಖಾ ಕೇಂದ್ರಗಳ ಎಟಿಎಂ ಕೇಂದ್ರಗಳಲ್ಲೂ ಹಾಗೂ ಆಂಧ್ರಬ್ಯಾಂಕ್ ವಿವೇಕಾನಂದ ರಸ್ತೆಯ ವಿಜಯಾ ಬ್ಯಾಂಕ್, ಅಶೋಕನಗರ ಸಿಂಡಿಕೇಟ್ ಬ್ಯಾಂಕ್‍ನ ಮುಖ್ಯ ಕಚೇರಿ, ಲಕ್ಷ್ಮಿ ವಿಲಾಸ ಬ್ಯಾಂಕ್, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಐಡಿಬಿಐ ಬ್ಯಾಂಕ್ ಆಫ್ ಬರೋಡ ಮುಖ್ಯ ಕಚೇರಿ, ಐಸಿಐಸಿಐ ಬ್ಯಾಂಕ್‍ನ ಶಾಖಾ ಕೇಂದ್ರಗಳ ಎಟಿಎಂಗಳಲ್ಲೂ ಭದ್ರತಾ ಸಿಬ್ಬಂದಿಯ ಸುಳಿವೇ ಇಲ್ಲ್ಲ.

ಸರ್ಕಾರ ಹಾಗೂ ಜಿಲ್ಲಾಡಳಿತ ಕೊರೊನಾ ತಡೆಗೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಇದರ ನಡುವೆ ಮಳವಳ್ಳಿ ಮತ್ತು ನಾಗಮಂಗಲ ತಾಲೂಕಿನಲ್ಲಿ ದೆಹಲಿಯ ನಂಟಿರುವ ಕೊರೊನಾ ಸೋಂಕಿ ರುವವರು ಹಾಗೂ ಶಂಕಿತರೂ ಕೂಡ ಸಂಚರಿಸಿದ್ದಾರೆ. ಇಂತಹ ಆತಂಕದ ವಾತವರಣದ ನಡುವೆಯೂ ಬ್ಯಾಂಕ್‍ನವರು ಕೊರೊನಾ ವೈರಸ್ ಹರಡುವಿಕೆಯ ನಿಯಂತ್ರಣದ ಬಗ್ಗೆ ಕಾಳಜಿವಹಿಸದಿರುವುದು ಎಷ್ಟು ಸರಿ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Translate »