ಮಂಡ್ಯ, ಏ.6(ನಾಗಯ್ಯ)- ನಗರದ ಮಿಮ್ಸ್‍ನ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಾಪತ್ತೆಯಾಗಿದ್ದ ಕೊರೊನಾ ಶಂಕಿತನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ಮತ್ತೆ ಚಿಕಿತ್ಸೆಗೆ ದಾಖಲು ಮಾಡುವಲ್ಲಿ ಮಂಡ್ಯ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಮಳವಳ್ಳಿಯ 35ರ ವಯೋಮಾನದ ವ್ಯಕ್ತಿ ಸೋಮವಾರ ಬೆಳಿಗ್ಗೆ ಪರಾರಿಯಾಗಿ ಮಧ್ಯಾಹ್ನದ ವೇಳೆಗೆ ಸಿಕ್ಕಿಬಿದ್ದಿದ್ದಾನೆ. ಈತ ನಗರದ ಶಂಕರಮಠದಲ್ಲಿ ಸಂಬಂಧಿಕರ ಮನೆಯಲ್ಲಿ ಇದ್ದ ಎನ್ನಲಾಗಿದೆ. ಆತನನ್ನು ಆ್ಯಂಬುಲೆನ್ಸ್ ಮೂಲಕ ಮತ್ತೆ ಆಸ್ಪತ್ರೆಗೆ ಕರೆತರಲಾಗಿದ್ದು, ಆ ಮೂಲಕ ಜಿಲ್ಲಾ ಪೆÇಲೀಸರು ಮತ್ತು ವೈದ್ಯಾಧಿಕಾರಿಗಳು ಎಲ್ಲಾ ಅತಂಕಕ್ಕೆ ತೆರೆ ಎಳೆದಿದ್ದಾರೆ.
ಘಟನೆ ವಿವರ: ದೆಹಲಿಯ ನಿಜಾಮುದ್ದೀನ್ ಸಭೆಗೆ ತೆರಳಿದ್ದ 10 ಮೌಲ್ವಿಗಳÀ ಸಂಪರ್ಕದಲ್ಲಿದ್ದ 35ರ ವಯೋಮಾನದ ಈ ವ್ಯಕ್ತಿಯು ಗಂಟಲು ನೋವಿನ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಮಳವಳ್ಳಿಯಿಂದ ಮಂಡ್ಯ ಮಿಮ್ಸ್‍ಗೆ ಕರೆತಂದು ಐಸೋಲೇಷನ್‍ನಲ್ಲಿ ಇರಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಈತನ ರಕ್ತ ಮತ್ತು ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ ಬಳಿಕ ಬೇರೆ ವಾರ್ಡ್‍ಗೆ ಸ್ಥಳಾಂತರ ಮಾಡುವ ಸಂದರ್ಭದಲ್ಲಿ ನರ್ಸ್‍ಗಳನ್ನು ಯಾಮಾರಿಸಿ ಈತ ಪರಾರಿಯಾಗಿದ್ದ. ವಿಷಯ ತಿಳಿದ ವೈದ್ಯಾಧಿಕಾರಿಗಳು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.
ತಕ್ಷಣ ಕಾರ್ಯ ಪ್ರವೃತ್ತರಾದ ಮಂಡ್ಯ ಎಸ್‍ಪಿ ಕೆ.ಪರಶುರಾಮ್, ಎಎಸ್‍ಪಿ ಡಾ.ವಿ.ಜೆ.ಶೋಭಾರಾಣಿ ನೇತೃತ್ವದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಸಿಬ್ಬಂದಿ ವಿಚಾರಣೆ ನಡೆಸಿ, ಪರಿಶೀಲನೆ ನಡೆಸಿದರು. ಬಳಿಕ, ಮಿಮ್ಸ್ ಸಿಸಿ ಕ್ಯಾಮರಾಗಳ ದೃಶ್ಯಗಳ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ಪೊಲೀಸರಿಗೆ ಆತನ ಸಂಬಂಧಿಕ ರೊಂದಿಗೆ ತೆರಳುತ್ತಿದ್ದುದು, ಗೊತ್ತಾಗಿ ನಗರದ ಶಂಕರಮಠದ ಸಂಬಂಧಿಕರ ಮನೆ ಯಲ್ಲಿ ಆತನನ್ನು ಬಂಧಿಸಿ ಮತ್ತೆ ಮಿಮ್ಸ್‍ನ ಐಸೋಲೇಷನ್‍ಗೆ ದಾಖಲು ಮಾಡಿದ್ದಾರೆ.