ಜಿಲ್ಲಾದ್ಯಂತ ಝಗಮಗಿಸಿದ ‘ಸಾಮರಸ್ಯದ ಬೆಳಕು’
ಮಂಡ್ಯ

ಜಿಲ್ಲಾದ್ಯಂತ ಝಗಮಗಿಸಿದ ‘ಸಾಮರಸ್ಯದ ಬೆಳಕು’

April 6, 2020

ಮಂಡ್ಯ, ಏ.5- ಕೊರೊನಾ ಅಂಧಕಾರ ಓಡಿಸಲು ದೀಪ ಬೆಳಗಿಸುವುದರ ಮೂಲಕ ನಾವೆಲ್ಲ ಒಗ್ಗೂಡಿ ಈ ಮಾರಣಾಂತಿಕ ಕಾಯಿಲೆ ವಿರುದ್ಧ ಹೋರಾಡೋಣ ಎಂಬ ಸಂದೇಶವನ್ನೊ ಳಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ದೀಪ ಹಚ್ಚುವ ಕಾರ್ಯಕ್ರಮಕ್ಕೆ ಜಿಲ್ಲೆಯ ಜನರು ಉತ್ತಮ ಸ್ಪಂದನೆ ತೋರಿದರು.

ರಾತ್ರಿ 9 ಗಂಟೆಗೆ ಸರಿಯಾಗಿ ಜಿಲ್ಲೆಯ ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ, ಪಾಂಡವಪುರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಜನರು ಧರ್ಮ, ಜಾತಿ ಭೇದವಿಲ್ಲದೆ ಮನೆಯ ವಿದ್ಯುತ್ ದೀಪ ಆರಿಸಿ, ಹಣತೆ, ಮೇಣದ ಬತ್ತಿ, ಮೊಬೈಲ್ ಟಾರ್ಚ್‍ಗಳನ್ನು 9 ನಿಮಿಷಗಳ ಕಾಲ ಬೆಳಗಿಸಿದರು. ಮಹಿಳೆಯರು ಮನೆಯ ಮುಂಭಾಗ ರಂಗೋಲಿ ಬಿಡಿಸಿ ದೀಪ ಹಚ್ಚಿದರು. ಒಟ್ಟಾರೆ, ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ದೀಪದ ಬೆಳಕಿನಿಂದ ಮಂಡ್ಯ ಜಿಲ್ಲೆಯ ಝಗಮಗಿಸಿತು.

Translate »