ತಂಬಾಕು ಬೆಳೆಗಾರರ ಹಿತ ಕಾಯಲು ವಿಶ್ವನಾಥ್ ಆಗ್ರಹ
ಮೈಸೂರು ಗ್ರಾಮಾಂತರ

ತಂಬಾಕು ಬೆಳೆಗಾರರ ಹಿತ ಕಾಯಲು ವಿಶ್ವನಾಥ್ ಆಗ್ರಹ

April 6, 2020

ಹುಣಸೂರು, ಏ.5(ಕೆಕೆ)-ರಾಜ್ಯದಲ್ಲಿ ಪ್ರಸ್ತುತ 3 ಮಿಲಿಯನ್ ತಂಬಾಕು ಮಾರಾಟ ವಾಗದೆ ಉಳಿಕೆಯಾಗಿದ್ದು, ಕೇಂದ್ರ-ರಾಜ್ಯ ಸರ್ಕಾರಗಳು ಹಾಗೂ ರೈತ ಮುಖಂಡರು ಚರ್ಚಿಸಿ ಈ ಬಾರಿ ತಂಬಾಕು ಬೆಳೆ ರಜೆ ನೀಡಿ, ರೈತರಿಗೆ ಪರಿಹಾರ ಘೋಷಿಸು ವಂತೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.

ನಗರದ ಪತ್ರಕರ್ತರ ಸಂಘದ ಕಚೇರಿ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ತಂಬಾಕು ಮಾರುಕಟ್ಟೆ ಮುಗಿದರೂ ಸಹ 3 ಮಿಲಿಯನ್‍ನಷ್ಟು ತಂಬಾಕು ಬಾಕಿ ಉಳಿದು ರೈತರು ಕಂಗಾ ಲಾಗಿದ್ದಾರೆ. ಇದನ್ನು ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ದರು. ರೈತರು ದುಡುಕಿ ತಂಬಾಕು ಬೆಳೆ ಬೆಳೆಯಲು ಮುಂದಾದರೆ ಸಂಕಷ್ಟದಲ್ಲಿ ಸಿಲುಕ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತರಿಗೆ ತಂಬಾಕು ಬೆಳೆಯಲು ಎಸ್‍ಓಪಿ ಗೊಬ್ಬರ ಹೊರದೇಶದಿಂದ ಬರಬೇಕು. ಪ್ರಪಂಚವೇ ಲಾಕ್‍ಡಾನ್ ಆಗಿರುವುದರಿಂದ ಗೊಬ್ಬರ ಸಿಗುವುದು ಕಷ್ಟ. ಅದೇ ರೀತಿ ತಂಬಾಕು ಹೊರದೇಶಗಳಿಗೆ ರಫ್ತು ಆಗುವುದು ಅನುಮಾನ. ಆದ್ದರಿಂದ ಈ ಬಾರಿ ಆಲೋ ಚಿಸಿ ತಂಬಾಕು ಬೆಳೆಯಬೇಕು ಎಂದು ರೈತರಿಗೆ ಸಲಹೆ ನೀಡಿದರು. ರೈತರು ಈಗಾಗಲೇ ಸಸಿಮಡಿ ಸಿದ್ಧತೆಗೆ ಮುಂದಾಗಿದ್ದು, ತಂಬಾಕು ಮಂಡಳಿ ಬಿತ್ತನೆ ಬೀಜ ನೀಡುತ್ತಿದೆ. ಆದರೆ ಮುಂದಿನ ಸಮಸ್ಯೆಗಳ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಈ ಬೆಳವಣೆಗೆಯಿಂದ ಮುಂದಿನ ದಿನದಲ್ಲಿ ರೈತ ಸಂಕಷ್ಟಕ್ಕೆ ಸಿಲುಕುವುದು ಖಚಿತ. ಕೇಂದ್ರ-ರಾಜ್ಯ ಸರ್ಕಾರಗಳೊಂ ದಿಗೆ ರೈತ ಮುಖಂಡರು ಚರ್ಚಿಸಿ ಒಂದು ತೀರ್ಮಾನಕ್ಕೆ ಬರಬೇಕು ಎಂದು ತಿಳಿಸಿದರು.

ರೈತ ಬೆಳೆದ ತರಕಾರಿ ಹಾಗೂ ಇತರ ಉತ್ಪನ್ನ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ರೈತರು ಬೆಳೆದ ತರಕಾರಿ ಕೇರಳಾ ಹಾಗೂ ಇತರೇ ರಾಜ್ಯಗಳಿಗೆ ರವಾನಿಸಲು ಕೇರಳಾ ಗಡಿಭಾಗದ ಮಾನಂದವಾಡಿ ವರೆಗೆ ಅವಕಾಶ ನೀಡ ಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

Translate »