ಗೂಡ್ಸ್ ವಾಹನ ಪಲ್ಟಿ: ಇಬ್ಬರಿಗೆ ಗಾಯ
ಮೈಸೂರು ಗ್ರಾಮಾಂತರ

ಗೂಡ್ಸ್ ವಾಹನ ಪಲ್ಟಿ: ಇಬ್ಬರಿಗೆ ಗಾಯ

April 6, 2020

ಹುಣಸೂರು, ಏ.5(ಶೇಖರ್/ಕೆಕೆ)- ತರಕಾರಿ ಸಾಗಿಸುತ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಗುರುಪುರದ ಬಳಿ ಭಾನುವಾರ ನಡೆದಿದೆ.

ಕೇರಳಾ ಮೂಲದ ತರಕಾರಿ ವ್ಯಾಪಾರಿ ಸುಬ್ಬರಾಯ(45) ಹಾಗೂ ಚಾಲಕ ಪ್ರಭಾಕರ್(38) ಗಾಯಗೊಂಡವರಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವ್ಯಾಪಾರಿ ಸುಬ್ಬರಾಯ ಹುಣಸೂರು ಎಪಿಎಂಸಿಯಲ್ಲಿ ತರಕಾರಿ ಖರೀಸಿ ತಮ್ಮ ಟಾಟಾ ಏಸ್(ಕೆಎಲ್58, ಸಿ3419)ನಲ್ಲಿ ಲೋಡ್ ಮಾಡಿಕೊಂಡು ಚಾಲಕ ಪ್ರಭಾಕರ್‍ರೊಂದಿಗೆ ಹುಣಸೂರು-ಎಚ್.ಡಿ.ಕೋಟೆ ಮುಖ್ಯರಸ್ತೆಯ ಮೂಲಕ ಕೇರಳಾಕ್ಕೆ ತೆರಳುತ್ತಿದ್ದರು. ಗುರುಪುರದ ಬಳಿ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ ಸುಬ್ಬರಾಯರಿಗೆ ತಲೆಗೆ ಪೆಟ್ಟು ಬಿದ್ದಿದೆ. ಚಾಲಕ ಪ್ರಭಾಕರ್‍ಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಗಾಯಾಳುಗಳನ್ನು ವಾಹನದಿಂದ ಹೊರಗೆಳೆದು ಆಸ್ಪತ್ರೆಗೆ ರವಾನಿಸಿದರು. ಅಪಘಾತದಿಂದ ರಸ್ತೆ ತುಂಬೆಲ್ಲಾ ತರಕಾರಿ ಚೆಲ್ಲಾಪಿಲ್ಲಿಯಾ ಗಿದ್ದವು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »