ಪಾಂಡವಪುರ, ಡಿ.31- ಹಾಲಿನ ಡೈರಿ ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಗಳು ರೈತರಿಂದ ಗುಣಮಟ್ಟದ ಹಾಲು ಸರಬರಾಜು ಮಾಡಿಸಿಕೊಳ್ಳಬೇಕು ಎಂದು ಮನ್‍ಮುಲ್ ನಿರ್ದೇಶಕ ಕಾಡೇನ ಹಳ್ಳಿ ರಾಮಚಂದ್ರು ಸಲಹೆ ನೀಡಿದರು. ಪಟ್ಟಣದ ಮನ್‍ಮುಲ್ ಉಪ ಕಚೇರಿ ಯಲ್ಲಿ ಮಂಗಳವಾರ ನಡೆದ ಬಿಎಂಸಿ ಘಟಕ ಹೊಂದಿರುವ ಡೈರಿ ಕಾರ್ಯದರ್ಶಿ ಹಾಗೂ ಅಧ್ಯಕ್ಷರಿಗೆ ಗುಣಮಟ್ಟದ ಹಾಲು ಪೂರೈಕೆ ಸಂಬಂಧ ಅರಿವು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ 28 ಹಾಲಿನ ಡೈರಿಗಳಲ್ಲಿ ಬಿಎಂಸಿ ಘಟಕವಿದ್ದು, ಎಲ್ಲಾ ಡೈರಿಗಳಿಗೆ ಗುಣಮಟ್ಟದ ಹಾಲು ಪೂರೈಸುವಂತೆ…
ಕಾವೇರಿ ತೀರದಲ್ಲಿ ಹೊಸ ವರ್ಷಾಚರಣೆ ಮೋಜು-ಮಸ್ತಿಗೆ ಬ್ರೇಕ್…!
December 31, 20192 ದಿನ 144 ಸೆಕ್ಷನ್ ಜಾರಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಚೂಡಹಳ್ಳಿ ಚೆಕ್‍ಪೋಸ್ಟ್ ಬಂದ್, ಎಡಮುರಿ-ಬಲಮುರಿ, ಮುತ್ತತ್ತಿ ಪ್ರವೇಶಕ್ಕೂ ನಿಷೇಧ ಮಂಡ್ಯ, ಡಿ.30(ನಾಗಯ್ಯ)- ಕಾವೇರಿ ತೀರದಲ್ಲಿ ಹೊಸ ವರ್ಷಾಚರಣೆಗೆ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಬ್ರೇಕ್ ಹಾಕಿವೆ. ಹೊಸ ವರ್ಷ ಸಂಭ್ರಮಾಚರಣೆ ನೆಪದಲ್ಲಿ ನಡೆಯುವ ಅಕ್ರಮ, ಅಸಭ್ಯ ವರ್ತನೆ, ಅಹಿತಕರ ಘಟನೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಕಾವೇರಿ ನದಿ ತೀರದ ಹಲವು ಪ್ರಮುಖ ಪ್ರವಾಸಿ ತಾಣಗಳಲ್ಲಿ 2 ದಿನಗಳ ಕಾಲ ನಿಷೇಧಾಜ್ಞೆ…
ಮತದಾನದ ಹಕ್ಕಿಗಾಗಿ ಸಂತೇಬಾಚಹಳ್ಳಿ ಡೈರಿ ಷೇರುದಾರರ ಪ್ರತಿಭಟನೆ
December 31, 2019ಕೆ.ಆರ್.ಪೇಟೆ, ಡಿ.30- ತಾಲೂಕಿನ ಸಂತೇಬಾಚಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 300ಕ್ಕೂ ಹೆಚ್ಚು ಷೇರುದಾರರಿದ್ದರೂ, ಕೇವಲ 47 ಮಂದಿಗೆ ಮಾತ್ರ ಮತದಾನದ ಹಕ್ಕು ನೀಡಿರುವುದನ್ನು ಖಂಡಿಸಿ ಹಾಗೂ ಎಲ್ಲಾ ಷೇರುದಾರರಿಗೂ ಮತದಾನದ ಹಕ್ಕು ನೀಡಬೇಕೆಂದು ಒತ್ತಾಯಿಸಿ ಸಂಘದ ಷೇರುದಾರರು ಹಾಗೂ ಹಾಲು ಉತ್ಪಾದಕರು ಸೋಮವಾರ ಪ್ರತಿಭಟನೆ ನಡೆಸಿದರು. ಸಂತೇಬಾಚಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಕೇಂದ್ರದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಹಾಲಿನ ಟ್ಯಾಂಕರ್ ತಡೆದು ಪ್ರತಿಭಟನೆ ನಡೆಸಿದರು. ಸಂಘದಲ್ಲಿ 324 ಷೇರುದಾರರಿದ್ದಾರೆ. ಆದರೆ ಕಾರ್ಯದರ್ಶಿಗಳು ವಾರ್ಷಿಕ…
ದುಷ್ಕರ್ಮಿಗಳಿಂದ ಕಾರು, ಬೈಕ್‍ಗಳಿಗೆ ಬೆಂಕಿ
December 31, 2019ಚಿನಕುರಳಿ, ಡಿ.30- ಮನೆ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್‍ಗಳಿಗೆ ದುಷ್ಕರ್ಮಿಗಳು ಬೆಂಕಿ ಹಾಕಿರುವ ಘಟನೆ ಚಿನಕುರಳಿ ಗ್ರಾಮದಿಂದ ವರದಿಯಾಗಿದೆ. ಗ್ರಾಮದ ಅಂಕೇಗೌಡರಿಗೆ ಸೇರಿದ ಹೀರೋ ಫ್ಯಾಷನ್ ಪ್ಲಸ್ ಹಾಗೂ ಸಿ.ಎಂ.ಸಂತೋಷ್ ಅವರಿಗೆ ಸೇರಿದ ಬಜಾಜ್ ಪಲ್ಸರ್ ಬೈಕ್‍ಗಳಿಗೆ ಹಾಗೂ ಮಹಮ್ಮದ್ ಎಂಬುವರಿಗೆ ಸೇರಿದ ಇಂಡಿಕಾ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆ ವಿವರ: ಶನಿವಾರ ರಾತ್ರಿ ಸಂತೋಷ್ ಅವರು ತಮ್ಮ ಮನೆ ಮುಂದೆ ಬೈಕ್ ನಿಲ್ಲಿಸಿ ಮಲಗಿದ್ದರು. ಈ ವೇಳೆ ದುಷ್ಕರ್ಮಿಗಳು ಬೈಕ್‍ಗೆ ಬೆಂಕಿ…
ಕುವೆಂಪು ಸಾಹಿತ್ಯದಲ್ಲಿ ವೈಜ್ಞಾನಿಕ ಪ್ರಜ್ಞೆ ಅಡಗಿದೆ: ಜಿಪಂ ಸಿಇಓ
December 31, 2019ಮಂಡ್ಯ,ಡಿ.30(ನಾಗಯ್ಯ)- ಕುವೆಂಪು ರಚಿಸಿರುವ ಪದ್ಯ, ಗದ್ಯ, ಕಾವ್ಯ, ನಾಟಕ ಗಳಲ್ಲಿ ವೈಜ್ಞಾನಿಕ ಪ್ರಜ್ಞೆ ಅಡಗಿದೆ ಎಂದು ಜಿಪಂ ಸಿಇಓ ಕೆ.ಯಾಲಕ್ಕಿಗೌಡ ತಿಳಿಸಿದರು. ನಗರದ ಕರ್ನಾಟಕ ಸಂಘದ ಆವರಣ ದಲ್ಲಿ ನಡೆದ ಕುವೆಂಪು ಜಯಂತೋತ್ಸವದಲ್ಲಿ ಡಾ. ರಾ.ಗೌ ರವರ ಕುವೆಂಪು ವಿಚಾರ ಜಾಗೃತಿ ಪುಸ್ತಕ ಬಿಡುಗಡೆಗೊಳಿಸಿ ಮಾತ ನಾಡಿದ ಅವರು, ಕುವೆಂಪು ವಿಶ್ವಮಾನವ ಸಂದೇಶವನ್ನು ಸಾರಿದಂತಹ ಸಾಂಸ್ಕøತಿಕ ರಾಯಭಾರಿಯಾಗಿದ್ದು ಅವರಲ್ಲಿದ್ದ ದೇಶ ಹಾಗೂ ನಾಡಿನ ಪ್ರೇಮ ಅನನ್ಯ ಎಂದರು. ರಾಷ್ಟಕವಿ ಕುವೆಂಪು ಸಾಹಿತ್ಯ ಲೋಕದ ದೈತ್ಯ ಪ್ರತಿಭೆ, ಕುವೆಂಪು…
ಕುವೆಂಪು ಕನ್ನಡ ಸಾಹಿತ್ಯದ ಸಂಪತ್ತು: ಪಂಚ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಸಿಪಿಕೆ ಬಣ್ಣನೆ
December 30, 2019ಮಂಡ್ಯ, ಡಿ.29(ನಾಗಯ್ಯ)- ಕನ್ನಡ ಸಾರಸತ್ವ ಲೋಕವನ್ನು ಇಡೀ ವಿಶ್ವದಾ ದ್ಯಂತ ಪಸರಿಸುವಲ್ಲಿ ವಿಭಿನ್ನ ಕೊಡುಗೆ ನೀಡಿದ ರಾಷ್ಟ್ರಕವಿ ಕುವೆಂಪು ಕನ್ನಡ ಸಾಹಿತ್ಯದ ಮೇರು ಶಿಖರವಾಗಿ ನಿಂತಿ ದ್ದಾರೆ ಎಂದು ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಬಣ್ಣಿಸಿದರು. ನಗರದ ರೈತ ಸಭಾಂಗಣದಲ್ಲಿ ಬೆಳಕು ಸಾಹಿತ್ಯ ಸಾಂಸ್ಕøತಿಕ ಸಂಘಟನೆ ಆಯೋ ಜಿಸಿದ್ದ ಪಂಚ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸಾಹಿತ್ಯದ ಮೂಲಕ ಕನ್ನಡದ ಧ್ವನಿ ಗಟ್ಟಿಗೊಳಿಸಿದ ಮಹಾನ್ ಮಾನವತಾ ವಾದಿ ಕುವೆಂಪು ಸಾಹಿತ್ಯದ ಎಲ್ಲಾ ಪ್ರಾಕಾರದಲ್ಲೂ ಸಹ…
ವಿಶ್ವಮಾನವ ಸಂದೇಶ ಒಂದು ವರ್ಗಕ್ಕೆ ಸೀಮಿತವಲ್ಲ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಅಭಿಮತ
December 30, 2019ಮಂಡ್ಯ, ಡಿ.29(ನಾಗಯ್ಯ)- ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಅಭಿಪ್ರಾಯಪಟ್ಟರು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಕರುನಾಡ ಸೇವಕರು-ಕನ್ನಡಪರ ಸಂಘಟನೆ ಗಳ ಒಕ್ಕೂಟ ಏರ್ಪಡಿಸಿದ್ದ ವಿಶ್ವಮಾನವ ಕುವೆಂಪು ಜನ್ಮದಿನದ ಪ್ರಯುಕ್ತ ಕುವೆಂಪು ಕನ್ನಡ ಹಬ್ಬ ಮತ್ತು ಜಾನಪದ ಜಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ಮಂತ್ರ ಮಾಂಗಲ್ಯ ಅಳವಡಿಸಿಕೊಳ್ಳಬೇಕು. ಗುಡಿ, ಚರ್ಚ್, ಮಸೀದಿಗಳನ್ನು ಬಿಟ್ಟು ಹೊರಬನ್ನಿ, ಮನುಜಮತ ವಿಶ್ವಪಥ, ವಿಶ್ವಮಾನವರಾಗಿ ಎಂಬ ಸಂದೇಶ ಸಾರಿದವರು ಕುವೆಂಪು ಅಂತಹವರನ್ನು…
ಮಾಹಿತಿ ನೀಡದ ತಹಶೀಲ್ದಾರ್‍ಗೆ 15 ಸಾವಿರ ದಂಡ
December 30, 2019ಮಂಡ್ಯ, ಡಿ.29(ನಾಗಯ್ಯ)- ಸಾರ್ವಜನಿಕ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ನೀಡದ ಲೋಪದ ಮೇಲೆ ಮದ್ದೂರು ತಹಸೀಲ್ದಾರ್‍ಗೆ 15 ಸಾವಿರ ದಂಡವಿಧಿಸಿ ಮಾಹಿತಿ ಹಕ್ಕು ಆಯೋಗವು ಆದೇಶಿಸಿದೆ. ಈ ಹಿಂದೆ ಮದ್ದೂರಿನಲ್ಲಿ ಕಾರ್ಯ ನಿರ್ವಹಿಸಿದ್ದ ಹಾಲಿ ಹೊಸಕೋಟೆ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಗೀತಾ ಅವರಿಗೆ ಮಾಹಿತಿ ಆಯೋಗ 15 ಸಾವಿರ ರೂ.ದಂಡ ವಿಧಿಸಿದೆ. ಏನಿದು ಪ್ರಕರಣ: ಮದ್ದೂರು ತಾಲೂಕು ತಹಶೀಲ್ದಾರ್ ಆಗಿ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಗೀತಾ ರವರಿಗೆ ಎನ್.ಶಿವರಾಮು ಎಂಬುವರು…
ಜಿಲ್ಲಾದ್ಯಂತ ಸಂಭ್ರಮದ ‘ಕ್ರಿಸ್‍ಮಸ್’
December 26, 2019ಕ್ರೈಸ್ತ ಬಾಂಧವರಿಂದ ವಿಶೇಷ ಪ್ರಾರ್ಥನೆ ವಿಶೇಷ ದೀಪಾಲಂಕಾರದಿಂದ ಕಂಗೊಳಿಸಿದ ಚರ್ಚ್‍ಗಳು ಸಿಹಿ ವಿತರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಕ್ರೈಸ್ತ ಬಾಂಧವರು ಮಂಡ್ಯ, ಡಿ.25(ನಾಗಯ್ಯ)- ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಏಸು ಕ್ರಿಸ್ತನ ಜನ್ಮದಿನ, ಕ್ರಿಸ್‍ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಸಡಗರ ಸಂಭ್ರಮದಿಂದ ಬುಧವಾರ ಜಿಲ್ಲಾದ್ಯಂತ ಆಚರಿಸಿದರು.ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವ ಪುರ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ನಾಗ ಮಂಗಲ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗಳಲ್ಲಿ ಕ್ರಿಸ್‍ಮಸ್ ಹಬ್ಬವನ್ನು ಆಚರಿಸಿದ ಬಗ್ಗೆ ವರದಿಯಾಗಿದೆ. ಮಂಡ್ಯ ನಗರದ ಆರ್.ಪಿ.ರಸ್ತೆಯ ಸಾಡೆ…
ಕೇಂದ್ರದಿಂದ ದೇಶದೆಲ್ಲೆಡೆ ಭಯದ ವಾತಾವರಣ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಆರೋಪ
December 26, 2019ಭಾರತೀನಗರ, ಡಿ.25(ಅ.ಸತೀಶ್)- ಕೇಂದ್ರ ಸರ್ಕಾರ ದೇಶದೆಲ್ಲೆಡೆ ಭಯದ ವಾತಾವರಣ ಸೃಷ್ಟಿ ಮಾಡಿದೆ ಎಂದು ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಆರೋಪಿಸಿದರು. ಇಲ್ಲಿನ ಕೇಂಬ್ರಿಡ್ಜ್ ಶಾಲಾ ಆವರಣದಲ್ಲಿ ಬುಧವಾರ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ಆಯೋಜಿಸಿದ್ದ ‘ಸಂವಿಧಾನದ ಆಶಯಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಹಿಟ್ಲರ್, ಮುಸಲೋನಿಯಂತೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಸರ್ವಾ ಧಿಕಾರಿ ಧೋರಣೆಯ ಪರಿಣಾಮ ದೇಶದಲ್ಲಿ ಸಂವಿಧಾನದ ಆಶಯಗಳಿಗೆ ಬೆಲೆ…