ರೈತರಿಂದ ಗುಣಮಟ್ಟದ ಹಾಲು ಸರಬರಾಜು ಮಾಡಿಸಿಕೊಳ್ಳಿ ಮನ್‍ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸಲಹೆ
ಮಂಡ್ಯ

ರೈತರಿಂದ ಗುಣಮಟ್ಟದ ಹಾಲು ಸರಬರಾಜು ಮಾಡಿಸಿಕೊಳ್ಳಿ ಮನ್‍ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸಲಹೆ

January 1, 2020

ಪಾಂಡವಪುರ, ಡಿ.31- ಹಾಲಿನ ಡೈರಿ ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಗಳು ರೈತರಿಂದ ಗುಣಮಟ್ಟದ ಹಾಲು ಸರಬರಾಜು ಮಾಡಿಸಿಕೊಳ್ಳಬೇಕು ಎಂದು ಮನ್‍ಮುಲ್ ನಿರ್ದೇಶಕ ಕಾಡೇನ ಹಳ್ಳಿ ರಾಮಚಂದ್ರು ಸಲಹೆ ನೀಡಿದರು.

ಪಟ್ಟಣದ ಮನ್‍ಮುಲ್ ಉಪ ಕಚೇರಿ ಯಲ್ಲಿ ಮಂಗಳವಾರ ನಡೆದ ಬಿಎಂಸಿ ಘಟಕ ಹೊಂದಿರುವ ಡೈರಿ ಕಾರ್ಯದರ್ಶಿ ಹಾಗೂ ಅಧ್ಯಕ್ಷರಿಗೆ ಗುಣಮಟ್ಟದ ಹಾಲು ಪೂರೈಕೆ ಸಂಬಂಧ ಅರಿವು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನ 28 ಹಾಲಿನ ಡೈರಿಗಳಲ್ಲಿ ಬಿಎಂಸಿ ಘಟಕವಿದ್ದು, ಎಲ್ಲಾ ಡೈರಿಗಳಿಗೆ ಗುಣಮಟ್ಟದ ಹಾಲು ಪೂರೈಸುವಂತೆ ಕಾರ್ಯ ದರ್ಶಿಗಳು ಹಾಗೂ ಅಧ್ಯಕ್ಷರು ರೈತರಿಗೆ ಅರಿವು ಮೂಡಿಸಬೇಕು ಎಂದರು.

ರೈತರು ಡೈರಿಗೆ ಶೇ.28.5ರಷ್ಟು ಟೆಸ್ಟಿಂಗ್ ಹಾಗೂ ಶೇ.4.5ರಷ್ಟು ಕೊಬ್ಬಿನಾಂಶವಿರುವ ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಮಾತ್ರ ಸರ್ಕಾರದಿಂದ ರೈತರಿಗೆ 6 ರೂ. ಪ್ರೋತ್ಸಾಹಧನ ಸಿಗುತ್ತದೆ. ಅದಕ್ಕಿಂತ ಕಡಿಮೆ ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ಸರ್ಕಾರದ ಪ್ರೋತ್ಸಾಹ ಹಣ ಸಿಗುವುದಿಲ್ಲ. ಹೀಗಾಗಿ ರೈತರು ಗುಣಮಟ್ಟ ಹಾಲು ಸರಬ ರಾಜು ಮಾಡಲು ಅಧಿಕಾರಿಗಳಿಂದ ಆಗಾಗ್ಗೆ ಸಲಹೆ ಪಡೆದು ಹಸುಗಳಿಗೆ ಉತ್ತಮ ಗುಣ ಮಟ್ಟದ ಫೀಡ್ಸ್ ಹಾಗೂ ಮೇವುಗಳನ್ನು ಹಾಕಬೇಕು. ರಾಸುಗಳಿಗೆ ಸೋಂಕು ತಗುಲ ದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಮನ್‍ಮುಲ್‍ನಲ್ಲಿ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ 3.50 ರೂ. ಹಾಲಿನ ದರ ಏರಿಕೆ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿ ಕೊಟ್ಟಿದೆ. ಮನ್‍ಮುಲ್ ರೈತರಿಗೆ ಹೆಚ್ಚು ಹಣ ನೀಡುತ್ತಿರುವ ರಾಜ್ಯದ ಎರಡನೇ ಸಹಕಾರ ಸಂಘವಾಗಿದೆ. ಅದೇ ರೀತಿ ರೈತರು ಡೈರಿಗಳಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ನಾನು ನಿರ್ದೇಶಕನಾದ ಬಳಿಕ ತಾಲೂ ಕಿಗೆ 4 ಬಿಎಂಸಿ ಘಟಕಗಳನ್ನು ಮಂಜೂರು ಮಾಡಿಸಿದ್ದೇನೆ. ಜೊತೆಗೆ ಪಟ್ಟಣದಲ್ಲಿ ಮನ್‍ಮುಲ್ ಉಪಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕು ಎನ್ನುವುದು ನನ್ನ ಗುರಿ. ಅದನ್ನು ಮಾಡಿಯೇ ತೀರುತ್ತೇನೆ. ಜತೆಗೆ ಮನ್‍ಮುಲ್ ವತಿಯಿಂದಲೇ ರೈತರಿಗೆ ಮ್ಯಾಟ್ ಹಾಗೂ ಮೇವು ಕತ್ತರಿಸುವ ಯಂತ್ರ ಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುವುದು. ಆಸಕ್ತ ರೈತರು ತಮ್ಮ ಹಾಲಿನ ಡೈರಿಗಳ ಮೂಲಕ ಪಡೆದುಕೊಳ್ಳಬಹುದಾಗಿದೆ. ರೈತರಿಗೆ ಏನೇ ಅನುಕೂಲ ಬೇಕಿದ್ದರೂ ನಾವು ಮಾಡಿಕೊಡುತ್ತೇವೆ. ಆದರೆ ರೈತರು ಮಾತ್ರ ಡೇರಿಗೆ ಗುಣ ಮಟ್ಟದ ಹಾಲು ಪೂರೈಕೆ ಮಾಡಲು ಮುಂದಾಗಬೇಕು ಎಂದರು.

ಕೆಲವು ಬಿಎಂಸಿ ಕೇಂದ್ರಗಳಲ್ಲಿ ಹಾಲಿನ ಟ್ಯಾಂಕರ್‍ನ ಲಾರಿ ಡ್ರೈವರ್‍ಗಳು ಹಾಗೂ ಡೈರಿ ಕಾರ್ಯದರ್ಶಿಗಳು ಹಾಲಿಗೆ ನೀರು ಬೆರೆಸುತ್ತಿರುವ ಬಗ್ಗೆ ಆರೋಪ ಕೇಳಿ ಬರುತ್ತಿದೆ. ನಾವು ಯಾವದೇ ಸಂದರ್ಭದ ಲ್ಲಾದರೂ ಡೈರಿಗೆ ಭೇಟಿ ಕೊಟ್ಟು ಪರಿ ಶೀಲಿಸುತ್ತೇನೆ. ಒಂದು ವೇಳೆ ಡೈರಿಯಲ್ಲಿ ಭ್ರಷ್ಟಾಚಾರ ಮಾಡಿ ರೈತರಿಗೆ ಮೋಸ ಮಾಡು ತ್ತಿರುವುದು ಬೆಳಕಿಗೆ ಬಂದರೆ ಸಂಬಂಧಪಟ್ಟ ವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ವ್ಯವಸ್ಥಾಪಕ ಡಾ.ವಿ.ಎಂ.ರಾಜು ಮಾತ ನಾಡಿ, ಡೈರಿಗಳಿಂದ ಮನ್‍ಮುಲ್‍ಗೆ ಜೈವಿಕ ಗುಣಮಟ್ಟದ ಹಾಲು ಪೂರೈಕೆ ಮಾಡಿಕೊಳ್ಳ ಬೇಕೆಂಬ ಉದ್ದೇಶದಿಂದ ಡೈರಿಗಳಲ್ಲಿ ಬಿಎಂಸಿ ಘಟಕ ಆರಂಭಿಸಿದೆವು. ಆದರೆ, ಅದು ವಿಫಲವಾಗುತ್ತಿದೆ. ಬಿಎಂಸಿ ಘಟಕ ವಿದ್ದರೂ ಸಹ ಕೆಲವೆಡೆ ಜೈವಿಕ ಗುಣಮ ಟ್ಟದ ಹಾಲು ಮನ್‍ಮುಲ್‍ಗೆ ಪೂರೈಕೆ ಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸುಮಾರು 248 ಬಿಎಂಸಿ ಕೇಂದ್ರಗಳಿವೆ. ಇವುಗಳಲ್ಲಿ 215 ಕಾರ್ಯ ನಿರ್ವಹಿಸುತ್ತಿವೆ. ಉಳಿದವುಗಳಿಗೆ ಇನ್ನೂ ಚಾಲನೆ ನೀಡಲಾಗಿಲ್ಲ. ಈಗಾಗಲೇ ಮದ್ದೂ ರಿನ ಕೆಲವೆಡೆ ಬಿಎಂಸಿ ಕೇಂದ್ರ ಬೇಡ ಎಂಬುದಾಗಿ ಅರ್ಜಿಗಳು ಬಂದಿವೆ. ಬಿಎಂಸಿ ಕೇಂದ್ರವನ್ನು ಆರಂಭಿಸುವುದು ಹಾಲಿನ ಗುಣಮಟ್ಟ ಕಾಪಾಡುವುದಕ್ಕಾಗಿ ಹಾಲಿನಲ್ಲಿ ಉತ್ಪತ್ತಿಯಾಗುವ ಹುಳಿ ಅಂಶವನ್ನು ಕಡಿಮೆ ಮಾಡುವುದಕ್ಕಾಗಿ ಹಾಲನ್ನು ಬಿಎಂಸಿ ಘಟಕ ದಲ್ಲಿ ಶೇಖರಿಸಲಾಗುತ್ತದೆ. ಹಾಗಾಗಿ ಕಾರ್ಯ ದರ್ಶಿಗಳು ರೈತರಿಗೆ ಅರಿವು ಮೂಡಿಸಿ ಡೈರಿಗೆ ಗುಣಮಟ್ಟದ ಹಾಲು ಸರಬರಾಜು ಆಗುವಂತೆ ಕ್ರಮ ವಹಿಸಬೇಕು ಎಂದರು.

ಸಂದರ್ಭದಲ್ಲಿ ಮನ್‍ಮುಲ್ ವ್ಯವಸ್ಥಾ ಪಕ ನಿರ್ದೇಶಕ ಮಹೇಶ್, ಗುಣಮಟ್ಟ ಪರೀಕ್ಷಣಾ ವಿಭಾಗದ ಪ್ರಧಾನ ವ್ಯವಸ್ಥಾ ಪಕ ರಾಜಶೇಖರಮೂರ್ತಿ, ಉಪವ್ಯವ ಸ್ಥಾಪಕ ಜೈಶಂಕರ್, ಡಾ.ಮೋಹನ್ ಕುಮಾರ್, ಮಾರ್ಗ ವಿಸ್ತರಣಾಧಿಕಾರಿ ಗಳಾದ ಪ್ರತಾಪ್, ಉಮಾಶಂಕರ್, ರುಮಾನ, ಡಾ.ಪೂಜಾ ಹಾಜರಿದ್ದರು.

Translate »