ನಾಟಕಗಳ ದೃಶ್ಯಗಳು ಬದುಕು ರೂಪಿಸಿಕೊಳ್ಳುವಂತಿರಲಿ
ಮಂಡ್ಯ

ನಾಟಕಗಳ ದೃಶ್ಯಗಳು ಬದುಕು ರೂಪಿಸಿಕೊಳ್ಳುವಂತಿರಲಿ

January 1, 2020

ಭಾರತೀನಗರ, ಡಿ.31(ಅ.ಸತೀಶ್)- ನಾಟಕಗಳಲ್ಲಿ ಬರುವ ದೃಶ್ಯಗಳನ್ನು ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅನು ಸರಿಸಬೇಕೆಂದು ತಾಲೂಕು ಜೆಡಿಎಸ್ ಅಧ್ಯಕ್ಷ ಚಿಕ್ಕತಿಮ್ಮೇಗೌಡ ತಿಳಿಸಿದರು.

ಇಲ್ಲಿನ ವಿಶ್ವಮಾನವ ರಂಗಭೂಮಿ ಕಲಾ ವಿದರ ಸಂಘದ ವತಿಯಿಂದ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಆಯೋ ಜಿಸಿದ್ದ ಅಣ್ಣತಂಗಿ ಅಥವಾ ಸ್ನೇಹದ ಸಂಕೋಲೆ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು.

ಕುವೆಂಪುರವರು ಉತ್ತಮ ಸಾಹಿತ್ಯ ಗಳನ್ನು ಬರೆದಿದ್ದಾರೆ. ಅವರ ಆದರ್ಶ ಅನನ್ಯ. ಪ್ರತಿಯೊಬ್ಬರು ತಮ್ಮ ಗುರಿಗಳನ್ನು ಸಾಧಿಸಬೇಕಾದರೆ ಹಿರಿಯ ಮಾರ್ಗ ದರ್ಶನದಲ್ಲಿ ನಡೆಯಬೇಕು. ನಾಟಕಗಳಲ್ಲಿ ಬರುವ ದೃಶ್ಯಗಳು ಕೇವಲ ಮನರಂಜನೆ ಗಾಗಿರಬಾರದು. ತಮ್ಮ ಬದುಕನ್ನು ರೂಪಿಸಿ ಕೊಳ್ಳುವಂತಿರಬೇಕು ಎಂದರು.

ಕಲಾವಿದರು ನೈಜ್ಯ ಕಲೆ ಪ್ರದರ್ಶಿಸು ತ್ತಾರೆ. ಇದರಿಂದ ಯಾವುದೇ ಹಣ ಮಾಡಲು ಸಾಧ್ಯವಿಲ್ಲ. ಅವರು ಸಾರುವ ಸಂದೇಶ ಗಳು ಸಮಾಜಕ್ಕೆ ಮಾದರಿಯಾಗಿರುತ್ತವೆ. ಅಂತಹ ಕಲಾವಿದರನ್ನು ಗುರುತಿಸುವುದು ಸರ್ಕಾರದ ಜವಾಬ್ದಾರಿ ಎಂದರು.

ಇದೇ ವೇಳೆ ಬೆಳ್ಳಿ ಕೀರಿಟ ಪುರಸ್ಕøತ ರಾದ ಕುರಿಕೆಂಪನದೊಡ್ಡಿ ದೇಸಿಗೌಡ, ಗೊಲ್ಲರದೊಡ್ಡಿ ಶಿವಲಿಂಗಯ್ಯ, ಹೊಟೇಲ್ ದಾಸಪ್ಪ, ದೇವರಹಳ್ಳಿ ಚಿಕ್ಕೈದಹೆಗ್ಡೆ, ದೇವೇಗೌಡನದೊಡ್ಡಿ ಚಿಕ್ಕಮೊಗೇಗೌಡ, ವಿಶ್ವಮಾನವ ರಂಗಭೂಮಿಕಲಾದ ಸಂಘದ ಅಧ್ಯಕ್ಷ ಕೆ.ಪಿ.ದೊಡ್ಡಿ ದೇವ ರಾಜು, ಕೆಎಸ್‍ಎಸ್ ಅಧಿಕಾರಿ ಶಿವ ಕುಮಾರ್‍ರವರನ್ನು ಅಭಿನಂದಿಸಲಾಯಿತು.

ಈ ಸಂದರ್ಭ ವೆಂಕಟೇಶ್, ಶಂಕರೇ ಗೌಡ, ಕೃಷ್ಣ, ಸತೀಶ್, ಸಂಘದ ಕಲಾವಿದ ರಾದ ನವೀನ್, ರಘು, ಸುನೀಲ್, ಕೆ.ಪಿ. ದೊಡ್ಡಿ ಸಿದ್ದರಾಜು, ಯೋಗೇಶ್, ಮಹೇಶ್, ಸತೀಶ್,ಅಂಕೇಗೌಡ, ಚಿನ್ನದ ಅಂಗಡಿ ರವಿ, ದ್ಯಾಪೇಗೌಡ ಸೇರಿದಂತೆ ಇತರರಿದ್ದರು.

Translate »