ಗ್ರೀನ್ಸ್ ಬಡ್ಸ್‍ಗೆ ಸೇರಿದ ಆಸ್ತಿ ಹರಾಜು ಮಾಡಿ, ಹೂಡಿಕೆದಾರರಿಗೆ ಹಣ ಮರುಪಾವತಿಗಾಗಿ ಸಿಎಂ ಬಳಿಗೆ ನಿಯೋಗ ತೆರಳಲು ಗ್ರೀನ್ ಬಡ್ಸ್ ಹೂಡಿಕೆದಾರರ ನಿರ್ಧಾರ
ಮೈಸೂರು

ಗ್ರೀನ್ಸ್ ಬಡ್ಸ್‍ಗೆ ಸೇರಿದ ಆಸ್ತಿ ಹರಾಜು ಮಾಡಿ, ಹೂಡಿಕೆದಾರರಿಗೆ ಹಣ ಮರುಪಾವತಿಗಾಗಿ ಸಿಎಂ ಬಳಿಗೆ ನಿಯೋಗ ತೆರಳಲು ಗ್ರೀನ್ ಬಡ್ಸ್ ಹೂಡಿಕೆದಾರರ ನಿರ್ಧಾರ

January 1, 2020

ಮೈಸೂರು, ಡಿ.31(ಎಂಟಿವೈ)-ಗ್ರೀನ್ ಬಡ್ಸ್ ಸಂಸ್ಥೆಗೆ ಠೇವಣಿ ಹೂಡಿರುವ ಗ್ರಾಹಕರಿಗೆ ಹಣ ಪಾವತಿಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ನಿಯೋಗ ದೊಂದಿಗೆ ಭೇಟಿ ಮಾಡಲು ಸಂಸ್ಥೆಯ ಏಜೆಂಟರು ನಿರ್ಧರಿಸಿದ್ದಾರೆ.

ಹಣ ಮರು ಪಾವತಿಯಾಗದೇ ಇರು ವುದರಿಂದ ಕಂಗೆಟ್ಟಿರುವ ಗ್ರೀನ್ ಬಡ್ಸ್ ಸಂಸ್ಥೆಯ ಏಜೆಂಟರು ಗ್ರಾಹಕರ ಒತ್ತಡ ದಿಂದ ಜರ್ಝರಿತರಾಗಿದ್ದು, ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಮೀಪದ ಉದ್ಯಾ ನವನದಲ್ಲಿ ಪೂರ್ವಭಾವಿ ಸಭೆ ನಡೆಸಿ, ನಿಯೋಗದೊಂದಿಗೆ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಹೂಡಿರುವ ಹಣವನ್ನು ತ್ವರಿತಗತಿಯಲ್ಲಿ ಗ್ರಾಹಕರ ಖಾತೆಗೆ ಜಮೆ ಮಾಡಲು ಕ್ರಮ ಕೈಗೊಳ್ಳು ವಂತೆ ಮನವಿ ಸಲ್ಲಿಸಲು ಒಮ್ಮತದಿಂದ ನಿರ್ಧರಿಸಲಾಯಿತು.

ಗ್ರೀನ್ ಬಡ್ಸ್ ಆಗ್ರೋ ಲಿಮಿಟೆಡ್ ಕಾರ್ಯ ಕರ್ತರು, ಠೇವಣಿದಾರರು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷೆ ಜಿ.ವಿ.ಲಕ್ಷ್ಮೀದೇವಿ ಮಾತನಾಡಿ, ರಾಜ್ಯದಾದ್ಯಂತ ಗ್ರೀನ್ ಬಡ್ಸ್ ಸಂಸ್ಥೆ ಕೋಟ್ಯಾಂತರ ರೂ. ಠೇವಣಿ ಮೂಲಕ ಜನರಿಂದ ಹಣ ಪಡೆದು, ವಂಚಿಸಲು ಯತ್ನಿಸಿದೆ. ಎಲ್ಲಾ ಜಿಲ್ಲೆಗ ಳಲ್ಲೂ ಠೇವಣಿದಾರರು ಹಾಗೂ ಏಜೆಂ ಟರು, ಕಾರ್ಯಕರ್ತರು ಗ್ರೀನ್ ಬಡ್ಸ್ ಸಂಸ್ಥೆ ವಿರುದ್ದ ಹೋರಾಟ ನಡೆಸಿ, 140ಕ್ಕೂ ಹೆಚ್ಚು ಎಫ್‍ಐಆರ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆ ಮೇರೆಗೆ ಹೂಡಿಕೆದಾರರು ಅಗತ್ಯ ದಾಖಲೆ ಗಳೊಂದಿಗೆ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಉಪವಿಭಾಗಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಕೋಟ್ಯಾಂ ತರ ರೂ. ಹೂಡಿಕೆ ಹಣ ವಾಪಸ್ಸು ನೀಡು ವಂತೆ 1,80,863 ಅರ್ಜಿ ಸಲ್ಲಿಕೆಯಾಗಿವೆ. ಅವುಗಳಲ್ಲಿ 22,457 ಅರ್ಜಿ ಗಡುವು ದಿನ ಮುಗಿದ ನಂತರ ತಡವಾಗಿ ಸಲ್ಲಿಕೆ ಯಾಗಿವೆ. 14 ಸಾವಿರ ಅರ್ಜಿಗಳಿಗೆ ಅಗತ್ಯ ದಾಖಲೆಗಳು ಲಗತ್ತಿಸಿಲ್ಲ ಎಂದು ಪ್ರತ್ಯೇಕಿ ಸಲಾಗಿದೆ. ಈ ಎಲ್ಲಾ ಅರ್ಜಿಗಳನ್ನು ಆಡಿಟ್‍ಗೆ ಕಳುಹಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಅಂತಿಮ ಗಡುವಿನ ನಂತರ ಸಲ್ಲಿಕೆ ಯಾದ ಅರ್ಜಿಗಳು ಹಾಗೂ ಸಮರ್ಪಕ ದಾಖಲೆ ಲಗತ್ತಿಸಿದ ಅರ್ಜಿಗಳನ್ನು ಏನು ಮಾಡಬೇಕು, ದಾಖಲೆ ನೀಡಲು ಅವ ಕಾಶ ನೀಡಬೇಕೋ ಅಥವಾ ತಡವಾಗಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿ ಸಬೇಕೋ ಎನ್ನುವುದನ್ನು ನಿರ್ಧರಿಸಲಿದ್ದಾರೆ. ಈ ನಡುವೆ ವಶಪಡಿಸಿಕೊಂಡ ಗ್ರೀನ್ಸ್ ಬಡ್ಸ್ ಸಂಸ್ಥೆ ಆಸ್ತಿಯನ್ನು ಹರಾಜು ಮಾಡಲು ವಿಳಂಬ ಧೋರಣೆ ಅನುಸರಿ ಸಲಾಗು ತ್ತಿದೆ. ಅಲ್ಲದೆ ಪ್ರಭಾವಿಗಳು, ರಾಜಕಾರಣಿ ಗಳು ಕಡಿಮೆ ಮೊತ್ತಕ್ಕೆ ಹರಾಜು ಕೂಗಿ ಹೆಚ್ಚು ಬೆಲೆಯ ಆಸ್ತಿ ಲಪಟಾಯಿಸುವ ಸಾಧ್ಯತೆ ಯಿದೆ. ಈ ಹಿನ್ನೆಲೆಯಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಯನ್ನು ಸರ್ಕಾ ರದ ವಶದಲ್ಲಿಯೇ ಇರಲಿ. ಸರ್ಕಾರವೇ ಠೇವಣಿದಾರರಿಗೆ ಹಣ ಹಿಂದಿರುಗಿಸಲು ಕ್ರಮ ಕೈಗೊಳ್ಳಲಿ ಎಂದು ಮನವಿ ಸಲ್ಲಿಸಲು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದು ಸೂಕ್ಷ ಎಂದರು.

ಈ ಸಂದರ್ಭದಲ್ಲಿ ಗ್ರೀನ್ ಬಡ್ಸ್ ಹೂಡಿಕೆದಾರರ ಹಿತರಕ್ಷಣಾ ವೇದಿಕೆಯ ಎ.ನಾಗರಾಜು ಬರಡನಪುರ, ಜಿ.ಪಿ. ಮಂಜುನಾಥ್ ಬಳ್ಳಾರಿ ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.

Translate »