ಹೊಸ ವರ್ಷಕ್ಕೆ ಮಂಡ್ಯ ರೈತರಿಗೆ ಸಿಹಿ ಸುದ್ದಿ ಜುಲೈ ಒಳಗೆ ಮೈಷುಗರ್ ಕಾರ್ಖಾನೆ ಆರಂಭ
ಮಂಡ್ಯ

ಹೊಸ ವರ್ಷಕ್ಕೆ ಮಂಡ್ಯ ರೈತರಿಗೆ ಸಿಹಿ ಸುದ್ದಿ ಜುಲೈ ಒಳಗೆ ಮೈಷುಗರ್ ಕಾರ್ಖಾನೆ ಆರಂಭ

January 1, 2020

ರೈತ ಮುಖಂಡರು, ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ನಿರ್ಣಯ
ಮಂಡ್ಯ, ಡಿ.31(ನಾಗಯ್ಯ)- ರಾಜ್ಯ ಸರ್ಕಾರದಿಂದ ಹೊಸ ವರ್ಷಕ್ಕೆ ಮಂಡ್ಯ ರೈತರಿಗೆ ಸಿಹಿ ಸುದ್ದಿ ಹೊರ ಬಿದ್ದಿದ್ದು, ಜೂನ್ ಅಥವಾ ಜುಲೈನಲ್ಲಿ ಮೈಷುಗರ್ ಕಾರ್ಖಾನೆ ಆರಂಭಿಸಲು ನಿರ್ಧರಿಸಲಾಗಿದೆ.

ಮೈಷುಗರ್ ಕಾರ್ಖಾನೆ ಆವರಣದಲ್ಲಿ ಮಂಗಳವಾರ ಸಕ್ಕರೆ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ಮೈಷುಗರ್ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆ ಪುನ ಶ್ಚೇತನ ಕುರಿತು ರೈತ ಮುಖಂಡರು ಮತ್ತು ಜನಪ್ರತಿನಿಧಿಗಳೊಂದಿಗೆ ನಡೆದ ಅಭಿ ಪ್ರಾಯ ಸಂಗ್ರಹ ಸಭೆಯಲ್ಲಿ ಜುಲೈ ಯೊಳಗೆ ಶತಾಯಗತಾಯ ಕಾರ್ಖಾನೆ ಆರಂಭಿಸುವುದಕ್ಕೆ ಆದ್ಯತೆ ನೀಡುವ ನಿರ್ಣಯ ಕೈಗೊಳ್ಳಲಾಯಿತು.

ಸಭೆ ಆರಂಭವಾಗುತ್ತಿದ್ದಂತೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಶಾಂತರಾಂ ಅವರು ಕಾರ್ಖಾನೆಯ ಸ್ಥಿತಿಗತಿ, ಆಸ್ತಿ, ಸಾಲ, ನಷ್ಟ ಇತ್ಯಾದಿ ವಿಚಾರ ಬಗ್ಗೆ ವಿವರಿಸಿದರು.

ರೈತ ಮುಖಂಡರಾದ ಕೆ.ಬೋರಯ್ಯ, ಶಂಭೂನಹಳ್ಳಿ ಸುರೇಶ್, ಸುನೀತಾ ಪುಟ್ಟ ಣ್ಣಯ್ಯ, ಸುನಂದಾ ಜಯರಾಂ, ಸುಧೀರ್ ಕುಮಾರ್ ಹಾಗೂ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಶಂಭೂನಹಳ್ಳಿ ಕೃಷ್ಣ ಸೇರಿ ದಂತೆ ಮತ್ತಿತರರು ಮಾತನಾಡಿ, ಕಾರ್ಖಾನೆ ದುಸ್ಥಿತಿಗೆ ಕಾರಣವಾದ ಅಂಶಗಳನ್ನು ಸಚಿವರ ಗಮನಕ್ಕೆ ತಂದರಲ್ಲದೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಕಾರ್ಖಾನೆ ಇಂದು ದಿವಾಳಿಗೆ ಬಂದು ನಿಂತಿದೆ. ದಕ್ಷ ಅಧಿಕಾರಿ ಗಳು ಹಾಗೂ ತಂತ್ರಜ್ಞರ ತಂಡ ನೇಮಕ ಮಾಡಿದ್ದೇ ಆದಲ್ಲಿ ಕಾರ್ಖಾನೆ ಉಳಿಯ ಲಿದೆ. ಖಾಸಗಿಯವರಿಗೆ ವಹಿಸುವ ಅಗತ್ಯವೇ ಇಲ್ಲ ಎಂದು ಸಲಹೆ ನೀಡಿದರು.

ಭ್ರಷ್ಟಾಚಾರ ತನಿಖೆಗೆ ಆಗ್ರಹ: ಮೈಷು ಗರ್ ಕಾರ್ಖಾನೆ ಇಂದಿನ ದುಸ್ಥಿತಿಗೆ ಈ ಹಿಂದಿನ ಆಡಳಿತ ಮಂಡಳಿಗಳೇ ಕಾರಣ. ಕಾರ್ಖಾನೆಯಲ್ಲಿ ನಡೆದಿರುವ ಅವ್ಯವ ಹಾರದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸಭೆಯಲ್ಲಿದ್ದ ಬಹುತೇಕ ರೈತ ಮುಖಂಡರು ಆಗ್ರಹಿಸಿದರು.

ಸರ್ಕಾರದಿಂದ ಎಷ್ಟೇ ಅನುದಾನ ಬಂದರೂ ಕಾರ್ಖಾನೆ ಮಾತ್ರ ಅಭಿವೃದ್ಧಿಯಾಗು ತ್ತಿಲ್ಲ. ಕಬ್ಬು ಬೆಳೆದು ಸಾಲಗಾರರಾಗಿ ಅತಂತ್ರ ಸ್ಥಿತಿಗೆ ಸಿಲುಕಿದ ರೈತರ ಆತ್ಮಹತ್ಯೆ ತಡೆಯು ವವರು ಯಾರು ಇಲ್ಲ. ಆದರೆ ಕಾರ್ಖಾನೆ ಯನ್ನು ಲೂಟಿ ಮಾಡಿದ ಆಡಳಿತ ವರ್ಗದವರು ಮಾತ್ರ ಆರಾಮವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನುಭವವಿಲ್ಲದ ಹಾಗೂ ಕಾರ್ಖಾನೆ ಬಗ್ಗೆ ಗೊತ್ತಿಲ್ಲದ ಅಧಿಕಾರಿಗಳನ್ನು ನೇಮಿಸುವ ಮೂಲಕ ಹಿಂದಿನ ಸರ್ಕಾರ ಗಳು ಕಾರ್ಖಾನೆ ಬಗ್ಗೆ ನಿರ್ಲಕ್ಷ್ಯ ವಹಿ ಸಿವೆ. ಅಕ್ರಮ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾ ಯಿಸುತ್ತಾ ಬಂದಿದ್ದರೂ, ಕಣ್ಮುಚ್ಚಿ ಕುಳಿ ತಿವೆ ಎಂದು ಕಿಡಿಕಾರಿದರು.

ಇಲ್ಲಿಯವರೆಗೂ ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರ, ಅನುದಾನ ದುರ್ಬಳಕೆ ಹಾಗೂ ಅಕ್ರಮ ಸಕ್ಕರೆ ಮಾರಾ ಟದ ಬಗ್ಗೆಯೂ ಪ್ರತ್ಯೇಕವಾಗಿ ತನಿಖೆ ನಡೆಯಬೇಕು. ತಕ್ಷಣವೇ ಕಾರ್ಖಾನೆ ಆರಂಭಿಸುವ ಕುರಿತು ಕ್ರಮ ಕೈಗೊಳ್ಳ ಬೇಕು. ಬೆಳೆದು ನಿಂತಿರುವ ರೈತರ ಕಬ್ಬನ್ನು ಅರೆಸುವ ಕಾರ್ಯ ಆರಂಭವಾಗಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡರ ಸಲಹೆ, ಸೂಚನೆ, ಕಾರ್ಖಾನೆ ವಾಸ್ತವ ಸ್ಥಿತಿಗತಿ ಆಲಿಸಿದ ಬಳಿಕ ಮಾತನಾಡಿದ ಸಚಿವ ಸಿ.ಟಿ.ರವಿ, ಮೊದಲು ಕಾರ್ಖಾನೆ ಆರಂಭಿಸುವುದಕ್ಕೆ ಆದ್ಯತೆ ನೀಡಲಾಗುವುದು. ಅವ್ಯವಹಾರದ ಬಗ್ಗೆಯೂ ತನಿಖೆ ನಡೆಸಲಾಗುವುದು. ಕಾರ್ಮಿಕರು, ಕಾರ್ಖಾನೆಯ ತಾಂತ್ರಿಕ ಸ್ಥಿತಿಗತಿ ಸರಿಪಡಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು. ನೀವೆಲ್ಲ ನೀಡಿರುವ ಸಲಹೆ, ಸೂಚನೆ, ಕಾರ್ಖಾನೆ ವಾಸ್ತ ವಾಂಶದ ಮೇರೆಗೆ ಕಾರ್ಖಾನೆಯನ್ನು ಸರ್ಕಾರದಿಂದಲೇ ನಡೆಸಬೇಕೋ, ಖಾಸ ಗಿಗೆ ಗುತ್ತಿಗೆ ನೀಡಬೇಕೋ ಅಥವಾ ಒ ಅಂಡ್ ಎಂ ನೀಡಬೇಕು ಎಂಬುದರ ಬಗ್ಗೆ ಮುಂದಿನ ತಿಂಗಳೊಳಗೆ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದಕ್ಕೆ ಸಭೆಯು ಸಮ್ಮತಿಸಿತು.

ಸಭೆಯಲ್ಲಿ ಸಂಸದೆ ಸುಮಲತಾ, ಶಾಸಕರಾದ ಎಂ.ಶ್ರೀನಿವಾಸ್, ಶ್ರೀಕಂಠೇ ಗೌಡ ಹಾಗೂ ಡಿಸಿ ಡಾ.ಎಂ.ವಿ.ವೆಂಕ ಟೇಶ್, ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ, ಮುಖಂಡ ಡಾ.ಸಿದ್ದರಾಮಯ್ಯ ಮತ್ತಿತರರಿದ್ದರು.

ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ: ಸಚಿವ ಸಿ.ಟಿ.ರವಿ
ಮಂಡ್ಯ, ಡಿ.31(ನಾಗಯ್ಯ)- ಮೈಷುಗರ್ ಕಾರ್ಖಾನೆ ಪುನಾರಂಭಕ್ಕೆ ನಿರ್ಧರಿಸಲಾಗಿದ್ದು, ಈ ಬಗ್ಗೆ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗು ವುದು ಎಂದು ಸಕ್ಕರೆ ಸಚಿವ ಸಿ.ಟಿ.ರವಿ ತಿಳಿಸಿದರು.

ನಗರದ ಮೈಷುಗರ್ ಕಾರ್ಖಾನೆಯಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಮುಂದುವರೆಸಬೇಕೆ ಅಥವಾ ಖಾಸಗೀಕರಣ ಮಾಡಬೇಕೆ ಎಂಬ ಬಗ್ಗೆ ಜನವರಿ ಅಂತ್ಯದೊಳಗೆ ತೀರ್ಮಾನ ಕೈ ಗೊಳ್ಳಲಾಗುವುದು. 10 ದಿನದೊಳಗೆ ಕಾರ್ಖಾನೆ ಸ್ಥಿತಿಗತಿ ಕುರಿತ ವರದಿ ಪಡೆಯಲಾಗುವುದು ಎಂದರು.

ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ಪುನಶ್ಚೇತನ ಕೈಗೊಳ್ಳಬೇಕೆಂಬುದು ಜನರ ಅಪೇಕ್ಷೆಯಾಗಿತ್ತು. ಕೆಡಿಪಿ ಸಭೆಯಲ್ಲಿ ಖಾಸಗೀಕರಣ ಮಾಡಲು ನಿರ್ಣಯ ಕೈಗೊಳ್ಳಲಾಗಿತ್ತು. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿದೆ. ಇದೀಗ ಜನಪ್ರತಿನಿಧಿಗಳು ಹಾಗೂ ರೈತ ನಾಯಕರ ಅಭಿ ಪ್ರಾಯ ಸಂಗ್ರಹಿಸಿದ್ದು ಸರ್ಕಾರಿ ಅಥವಾ ಖಾಸಗಿಯಾಗಿ ಒಟ್ಟಾರೆ ಕಾರ್ಖಾನೆ ಆರಂಭಿಸಿ ಎಂಬ ನಿಲುವು ವ್ಯಕ್ತವಾಗಿದೆ ಎಂದರು.

ಕಳೆದ 10 ವರ್ಷಗಳಲ್ಲಿ 428 ಕೋಟಿ ಅನುದಾನ ಕಾರ್ಖಾನೆಗೆ ಸರ್ಕಾರ ನೀಡಲಾಗಿದೆ. ಆದರೂ ಸಹ ಕಾರ್ಖಾನೆ ಸಂಕಷ್ಟದಲ್ಲಿದೆ. ಕಾರ್ಖಾನೆಯನ್ನು ತುರ್ತಾಗಿ ಪುನಶ್ಚೇತನಗೊಳಿಸಿ, ಕಬ್ಬು ನುರಿಸಬೇಕೆಂಬುದು ರೈತರ ನಿಲುವಾಗಿದ್ದು ಮುಂದಿನ ಜೂನ್ ಅಥವಾ ಜುಲೈ ತಿಂಗಳಲ್ಲಿ ಕಾರ್ಖಾನೆ ಆರಂಭಿಸಲು ಕ್ರಮ ವಹಿಸಲಾಗು ವುದು ಎಂದರು.

ಮೈಷುಗರ್ ಕಾರ್ಖಾನೆಯಲ್ಲಿ 110 ಕಾರ್ಮಿಕರು ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯದ ಸ್ಥಿತಿಗೆ 100 ಮಂದಿ ನೌಕರರು ಸಾಕಾಗಿದೆ. ಆದರೆ ಕಾರ್ಖಾನೆ ಯಲ್ಲಿ 280 ಜನ ಇದ್ದು ತಾಂತ್ರಿಕ ತಂಡದ ಅಭಿಪ್ರಾಯ ಪಡೆಯಲಾಗುವುದು ಎಂದರು.

ಪ್ರಸ್ತುತ ವರ್ಷದಲ್ಲಿ 60ಲಕ್ಷ ಟನ್ ಕಬ್ಬು ಉತ್ಪಾದನೆ ಯಾಗುತ್ತದೆ ಎಂಬ ನಿರೀಕ್ಷೆ ಇದೆ. ವಿಸಿಎಫ್ ಎಂಬ ಹೊಸ ತಳಿಯಿಂದಾಗಿ ಹೆಚ್ಚು ಕಬ್ಬು ಉತ್ಪಾದನೆಯಾಗು ತ್ತಿದೆ. ಕಬ್ಬು ಅರೆಯುವಿಕೆ ಆರಂಭಿಸದಿದ್ದರೆ, ದೊಡ್ಡ ಪ್ರಮಾಣದಲ್ಲಿ ರೈತರು ಬೀದಿಗೆ ಬೀಳುವ ಆತಂಕ ಸೃಷ್ಠಿಯಾಗುತ್ತದೆ ಎಂಬುದನ್ನು ಮನಗಂಡು ಕಬ್ಬು ಅರೆಯುವಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಈಗಾಗಲೇ ನಡೆಸಿದ ಸಭೆಯಲ್ಲಿ ಖಾಸಗಿಯವರಿಗೆ ವಹಿಸುವುದಕ್ಕೆ ರೈತರೂ ಕೂಡ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಅದರಂತೆ ಮೈಷುಗರ್ ಕಾರ್ಖಾನೆ ಪ್ರಾರಂಭಿಸಲು ಮುಖ್ಯಮಂತ್ರಿಯವರ ಜತೆ ಮಾತನಾಡಿ ಕಬ್ಬು ಅರೆ ಯಲು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಆಸ್ತಿ ಸಂರಕ್ಷಣೆ: ಕಾರ್ಖಾನೆಗೆ ಸಂಬಂಧಿಸಿದ ಎಲ್ಲ ಆಸ್ತಿಗಳನ್ನು ಸಂರಕ್ಷಿಸಲಾಗುವುದು. ಇದುವರೆಗೂ ಯಾವುದೇ ಆಸ್ತಿ ಪರಭಾರೆ ಆಗಿಲ್ಲ. ಆಗುವುದಕ್ಕೂ ಬಿಡುವುದಿಲ್ಲ. ಬಿಟ್ಟು ಹೋಗಿರುವ ಆಸ್ತಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಅಭಿಪ್ರಾಯ ಸಂಗ್ರಹ ವೇಳೆ ರೈತರ ಪ್ರತಿಭಟನೆ: ಸಭೆಗೆ ಹಲವು ಶಾಸಕರ ಗೈರು
ಮಂಡ್ಯ, ಡಿ.31(ನಾಗಯ್ಯ)- ಮೈಷುಗರ್ ಕಾರ್ಖಾನೆ ಸ್ಥಿತಿಗತಿ ಸಂಬಂಧ ಸಕ್ಕರೆ ಸಚಿವ ಸಿ.ಟಿ.ರವಿ ಅಭಿಪ್ರಾಯ ಸಂಗ್ರಹ ವೇಳೆ ರೈತರು ಪ್ರತಿಭಟನೆ ನಡೆಸಿದರು.

ನಗರದ ಮೈಷುಗರ್ ಕಾರ್ಖಾನೆ ಅತಿಥಿ ಗೃಹದಲ್ಲಿ ಚುನಾಯಿತ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆ ನಡೆಸಿ ಸಚಿವರು ಅಭಿಪ್ರಾಯ ಸಂಗ್ರಹಣೆ ಮಾಡುತ್ತಿ ದ್ದಾಗ ನಮ್ಮನ್ನು ಸಹ ಸಭೆಗೆ ಬಿಡಿ ಎಂದು ರೈತರು ಪ್ರತಿಭಟಿಸಿದರು.

ರೈತರಿಗೆ ವಾಸ್ತವ ಸ್ಥಿತಿ ಗೊತ್ತಿದ್ದು ಅವರನ್ನೇ ಸಭೆಗೆ ಬಿಡುತ್ತಿಲ್ಲ. ಇನ್ನೇನು ಮಾಹಿತಿ ಸಂಗ್ರಹಿಸುತ್ತೀರಿ. ನಮ್ಮನ್ನು ಒಳಗೆ ಬಿಡಿ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಪೊಲೀಸರು ರೈತರನ್ನು ಸಮಾಧಾನಿಸಲು ಪ್ರಯತ್ನಿಸಿದರೂ ರೈತರ ಕೂಗು ಹೆಚ್ಚಾಗಿತ್ತು.

ಸಭೆ ಮುಗಿಸಿ ಸಚಿವ ಸಿ.ಟಿ.ರವಿ ಹೊರ ಬರುತ್ತಿದ್ದಂತೆ ರೈತರು ಘೋಷಣೆಗಳನ್ನು ಕೂಗ ತೊಡಗಿದರು. ಕಾರ್ಖಾನೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಕೋಟ್ಯಾಂತರ ಅನುದಾನ ದುರ್ಬಳಕೆಯಾಗಿದೆ. 10 ವರ್ಷದಲ್ಲಿ ಕಾರ್ಖಾನೆಯನ್ನು ಮುಳುಗಿಸಿದ್ದಾರೆ. ತನಿಖೆ ನಡೆಸಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಾರ್ಖಾನೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ತನಿಖೆಗೆ ಸರ್ಕಾರ ಬದ್ಧವಾಗಿದ್ದು, ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ತನಿಖೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.

ಶಾಸಕರ ಗೈರು: ಮೈಷುಗರ್ ಕಾರ್ಖಾನೆ ರೈತರ ಜೀವನಾಡಿ, ಕಾರ್ಖಾನೆ ಪುನ ಶ್ಚೇತನ ಅತಿಮುಖ್ಯ ಎಂದು ಬೊಬ್ಬೆ ಹಾಕುತ್ತಿದ್ದ ಜಿಲ್ಲೆಯ ಶಾಸಕರ ಗೈರು ಎದ್ದು ಕಾಣುತ್ತಿತ್ತು. ಸಭೆಗೆ ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇ ಗೌಡ ಹಾಗೂ ಸಂಸದೆ ಸುಮಲತಾ ಹಾಜರಿದ್ದರೆ, ಇನ್ನುಳಿದ ಶಾಸಕರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಕೆ.ಸಿ.ನಾರಾಯಣಗೌಡ, ಸುರೇಶ್‍ಗೌಡ, ಡಾ.ಕೆ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ ಸಭೆಯತ್ತ ಸುಳಿಯಲಿಲ್ಲ.

ಪಿಎಸ್‍ಎಸ್‍ಕೆಗೂ ಸಚಿವ ಸಿ.ಟಿ.ರವಿ ಭೇಟಿ, ಪರಿಶೀಲನೆ
ಪಾಂಡವಪುರ, ಡಿ.31- ಸಕ್ಕರೆ ಸಚಿವ ಸಿ.ಟಿ.ರವಿ ಮಂಡ್ಯದ ಮೈಷುಗರ್ ಬಳಿಕ ಪಾಂಡವಪುರ ತಾಲೂಕಿನ ಪಿಎಸ್‍ಎಸ್‍ಕೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಕಳೆದ ಮೂರ್ನಾಲ್ಕು ವರ್ಷಗಳಿಂದ ಪಿಎಸ್‍ಎಸ್‍ಕೆ ಕಾರ್ಖಾನೆ ಸ್ಥಗಿತಗೊಂಡಿರು ವುದರಿಂದ ರೈತರು ಕಬ್ಬನ್ನು ತಮಿಳು ನಾಡಿನ ಸತ್ಯಮಂಗಲ, ಬನ್ನಾರಿಯಮ್ಮನ್ ಸೇರಿದಂತೆ ದೂರದ ಕಾರ್ಖಾನೆಗಳಿಗೆ ಸಾಗಿಸುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಕಬ್ಬು ಕಟಾವು ಮಾಡಿ ಸಾಕಾಣಿಕೆ ಮಾಡುವ ವರೆಗೂ ರೈತರಿಗೆ 1800-1900 ವರೆಗೂ ಖರ್ಚಾಗುತ್ತಿದೆ. ಹಾಗಾಗಿ ಪಿಎಸ್‍ಎಸ್‍ಕೆ ಕಾರ್ಖಾನೆಯನ್ನು ಆರಂಭಿಸುವ ಮೂಲಕ ಈ ಭಾಗದ ರೈತರನ್ನು ರಕ್ಷಿಸಬೇಕೆಂದು ರೈತರು ಸಚಿವರಿಗೆ ಮನವಿ ಮಾಡಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಎಸಿ ನಟರಾಜು, ತಹಶೀ ಲ್ದಾರ್ ಪ್ರಮೋದ್ ಎಲ್.ಪಾಟೀಲ್, ರೈತರು ಹಾಗೂ ಬಿಜೆಪಿ ಮುಂಖಡರು ಸೇರಿದಂತೆ ಹಲವರಿದ್ದರು.

Translate »