ಕರವೇಯಿಂದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ
ಮಂಡ್ಯ

ಕರವೇಯಿಂದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ

January 1, 2020

ಕೆ.ಆರ್.ಪೇಟೆ, ಡಿ.31- ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಡಿ.ಎಸ್.ವೇಣು ನೇತೃತ್ವದಲ್ಲಿ ಅದ್ಧೂರಿಯಾಗಿ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಆಚರಿಸಲಾಯಿತು.

ಉಪನ್ಯಾಸಕ ಸಿ.ಬಿ.ಚೇತನ್‍ಕುಮಾರ್ ಕುವೆಂಪು ಕುರಿತು ಉಪನ್ಯಾಸ ನೀಡಿ ಮಾತನಾಡಿ, ಕುವೆಂಪು ಅವರಿಗೆ ಕುವೆಂಪು ಅವರೇ ಸಾಟಿ, ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಅವರು ರಚಿಸದ ಸಾಹಿತ್ಯವಿಲ್ಲ. ಇಂತಹ ಶ್ರೇಷ್ಠ ಸಾಹಿತಿ ನಮ್ಮ ಕನ್ನಡದವರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಇವರು ರಚಿಸಿರುವ ಜೈ ಭಾರತ ಜನನಿಯ ತನಜಾತೆ ಹಾಗೂ ರೈತ ಗೀತೆಗಳು ನಾಡಗೀತೆಗಳಾಗಿರುವುದು ಕುವೆಂಪು ಅವರ ಗಟ್ಟಿ ಸಾಹಿತ್ಯಕ್ಕೆ ಹಿಡಿದ ಕೈಗನ್ನಡಿ. ಹಾಗಾಗಿ ಪ್ರತಿಯೊಬ್ಬರೂ ಕುವೆಂಪು ಅವರ ಆದರ್ಶಗಳನ್ನು ರೂಢಿಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಬಹುದಾಗಿದೆ ಎಂದರು.

ಈ ವೇಳೆ ಕರವೇ ಕಾರ್ಯದರ್ಶಿ ಟೆಂಪೋ ಶ್ರೀನಿವಾಸ್, ಉಪಾಧ್ಯಕ್ಷ ಕೆ.ಟಿ. ಶ್ರೀನಿವಾಸ್, ಗೌರವ ಸಲಹೆಗಾರ ಶೇಖರ್‍ಗೌಡ, ಕರವೇ ಯುವ ಘಟಕದ ಅಧ್ಯಕ್ಷ ಆನಂದ್, ಮಂಜುನಾಥ್, ಪದಾಧಿಕಾರಿಗಳಾದ ಬಸವೇಗೌಡ, ಸುನೀಲ್, ಗೋಪಿ, ಈಶ್ವರ್, ಮೋಹನ್, ಅಶ್ವಥ್, ಜಯಮ್ಮ ಮತ್ತಿತರರಿದ್ದರು.

Translate »