ನಿರಂತರ ರಂಗ ಉತ್ಸವಕ್ಕೆ ತೆರೆ
ಮೈಸೂರು

ನಿರಂತರ ರಂಗ ಉತ್ಸವಕ್ಕೆ ತೆರೆ

January 1, 2020

ಮೈಸೂರು, ಡಿ.31(ಎಸ್‍ಪಿಎನ್)- ನಿರಂತರ ಸಾಂಸ್ಕøತಿಕ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವ ಅನೇಕ `ಯುವ ಪ್ರತಿಭೆ’ಗಳಿಗೆ ಕಲಾ ಬದುಕು ರೂಪಿಸುವ ಜೊತೆಗೆ `ಉತ್ತಮ ಕಲಾವಿದ’ರನ್ನು ರೂಪಿಸುವ ದೊಡ್ಡ ಜವಾಬ್ದಾರಿಯನ್ನೇ ವಹಿಸಿಕೊಂಡಿರುವುದು ಅಭಿನಂದನಾರ್ಹ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ ಅಭಿಪ್ರಾಯಪಟ್ಟರು.

ಮೈಸೂರು ಕಲಾಮಂದಿರ ಆವರಣ ದಲ್ಲಿ ನಿರಂತರ ರಂಗ ಉತ್ಸವದ ಮುಕ್ತಾಯ ಸಮಾರಂಭದಲ್ಲಿ ಅಧ್ಯಕ್ಷ ವಹಿಸಿ ಮಾತ ನಾಡಿದ ಅವರು, ನಮ್ಮನಾಳುವ ಪ್ರಭುತ್ವ ಸಾಮಾಜಿಕ ವ್ಯವಸ್ಥೆಯನ್ನು ಕೆಡವಲು ಪ್ರಯತ್ನಿಸುತ್ತದೆ. ಸಾಂಸ್ಕøತಿಕ ಜಗತ್ತು ಕೆಡವಿದ್ದನ್ನು ಕಟ್ಟಲು ಪ್ರಯತ್ನಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ನಿರಂತರ ರಂಗತಂಡ ವಿದ್ಯಾರ್ಥಿ ಗಳಾದ ಸಂಗೀತ ನಿರ್ದೇಶಕ ಪೂರ್ಣ ಚಂದ್ರ ತೇಜಸ್ವಿ, ಡ್ರಾಮಾ ಜೂನಿಯರ್ಸ್ ನಿರ್ದೇಶಕ ಟಿ.ಶರಣಯ್ಯ, ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ನಿರ್ದೇ ಶಕ ಜೆ.ಅನಿಲ್‍ಕುಮಾರ್ ಇವರ ಸಾಧನೆ ಯನ್ನು ಗಮನಿಸಿದರೆ, ನಿರಂತರ ಸಂಸ್ಥೆ, ಕೇವಲ ನಾಟಕ, ನೃತ್ಯ, ಬೇರೆ ಕಲೆಗಳನ್ನು ಪ್ರದರ್ಶನ ನೀಡುತ್ತಿಲ್ಲ. ಬದಲಾಗಿ, ರಂಗ ಭೂಮಿಗೆ ಬರುವ ಯುವ ಕಲಾ ವಿದರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡು ತ್ತಿರುವುದು ಉತ್ತಮ ಕೆಲಸ ಎಂದರು.

ಮೈಸೂರಿನ ಇತರೆ ಸಾಂಸ್ಕøತಿಕ ಸಂಸ್ಥೆಗಳು ಕಲಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಆದರೆ, ನಿರಂತರ ಸಾಂಸ್ಕøತಿಕ ಸಂಸ್ಥೆ ತನ್ನ ವಿದ್ಯಾರ್ಥಿಗಳನ್ನೇ ಗಣ್ಯ ಕಲಾವಿದರನ್ನಾಗಿ ಬೆಳೆಸುವ ಸಾಹಸ ಮಾಡುತ್ತಿರುವುದು ಉತ್ತಮ ಕಾರ್ಯ. ಇಂದಿನ ಯುವಕರಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಆದರೆ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಅತ್ಯವಶ್ಯಕ. ಆದ್ದರಿಂದ ನಿರಂತರ ಸಂಸ್ಥೆಯ ಎಂ.ಎಂ.ಸುಗುಣ, ಪ್ರಸಾದ್ ಸೇರಿದಂತೆ ಇತರೆ ಪದಾಧಿಕಾರಿಗಳ ಕಾರ್ಯ ಎಲ್ಲರೂ ಮೆಚ್ಚುವಂತಹದು ಎಂದು ಅಭಿಪ್ರಾಯಪಟ್ಟರು.

ನಿರಂತರ ಸಾಂಸ್ಕøತಿಕ ಸಂಸ್ಥೆಯ ನಿರ್ದೇಶಕ ಎಂ.ಎಂ.ಸುಗುಣ ಮಾತನಾಡಿ, ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ನಂಬಿಕೆಯೆಂಬುದು ಕುಸಿಯುತ್ತಿದೆ. ಇದನ್ನು ಕಟ್ಟುವ ಕೆಲಸವನ್ನು ಸಾಂಸ್ಕøತಿಕ ಕ್ಷೇತ್ರ ಮಾಡಬೇಕಾಗಿದೆ. ಈಗಿನ ಪರಿಸ್ಥಿತಿ ಯಲ್ಲಿ ಅದು ಸಾಧ್ಯವೇ ಎಂಬು ನನ್ನನ್ನು ಕಾಡುತ್ತಿರುವ ಯಕ್ಷಪ್ರಶ್ನೆ ಎಂದರು. ವೇದಿಕೆ ಕಾರ್ಯಕ್ರಮದ ನಂತರ ಹಿರಿಯ ಕಲಾವಿದ ಶ್ರೀನಿವಾಸ್ ಭಟ್(ಚೀನಿ) ಅವರ ಸಾರಥ್ಯದಲ್ಲಿ ಮೂಡಿಬಂದ `ಮೊದಲೇ ನೆನೆದೇವು’… ಕಾರ್ಯಕ್ರಮ ಕಲಾರಸಿಕರನ್ನು ಸೂಜಿಗಲ್ಲಿನಂತೆ ಸೆಳೆಯಿತು. ಈ ಕಾರ್ಯಕ್ರಮದೊಂದಿಗೆ ನಿರಂತರ ರಂಗ ಉತ್ಸವ-2019 ಸಂಪನ್ನಗೊಂಡಿತು.

Translate »