ಹೊಸ ವರ್ಷಾಚರಣೆಗೆ ಮೈಸೂರು ನಗರ ಸಜ್ಜು:  ಇಂದು ರಾತ್ರಿ 9 ಗಂಟೆಯಿಂದ ತಾವರೆಕಟ್ಟೆ ಮಾರ್ಗದಿಂದ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ವಾಹನ ಪ್ರವೇಶ ನಿಷಿದ್ಧ
ಮೈಸೂರು

ಹೊಸ ವರ್ಷಾಚರಣೆಗೆ ಮೈಸೂರು ನಗರ ಸಜ್ಜು:  ಇಂದು ರಾತ್ರಿ 9 ಗಂಟೆಯಿಂದ ತಾವರೆಕಟ್ಟೆ ಮಾರ್ಗದಿಂದ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ವಾಹನ ಪ್ರವೇಶ ನಿಷಿದ್ಧ

December 31, 2019

ಮೈಸೂರು,ಡಿ.30(ಆರ್‍ಕೆ)-2019ನೇ ವರ್ಷಕ್ಕೆ ವಿದಾಯ ಹೇಳಿ 2020ರ ಹೊಸ ವರ್ಷ ಸ್ವಾಗತಕ್ಕೆ ಮೈಸೂರು ನಗರ ಸರ್ವ ರೀತಿಯಲ್ಲೂ ಸಜ್ಜುಗೊಂಡಿದೆ.

ಹೋಟೆಲ್‍ಗಳು, ರೆಸಾರ್ಟ್‍ಗಳು, ರಿಕ್ರಿಯೇಷನ್ ಕ್ಲಬ್‍ಗಳು, ವಿವಿಧ ಸಂಘ -ಸಂಸ್ಥೆಗಳ ಆವರಣದಲ್ಲಿ ಹೊಸ ವರ್ಷಾಚರಣೆಗಾಗಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಔತಣ ಕೂಟ, ದೇಶಿಯ, ಪಾಶ್ಚಿಮಾತ್ಯ ಸಂಗೀತ ಹಾಗೂ ಇನ್ನಿತರೆ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿದೆ.

ಮೈಸೂರಿನ ಪ್ರಮುಖ ಹೋಟೆಲ್ ಗಳಾದ ರ್ಯಾಡಿಸನ್ ಬ್ಲೂ, ಲಲಿತಮಹಲ್ ಪ್ಯಾಲೇಸ್, ಸಂದೇಶ್ ದಿ ಪ್ರಿನ್ಸ್, ರಿಯೋ ಮೆರಿಡಿಯನ್, ಕೋರಂ, ಯಂಗ್ ಐಲ್ಯಾಂಡ್ ರೆಸಾರ್ಟ್, ಲೋಬೋಸ್ ಕೋರ್ಟ್ ಯಾರ್ಡ್, ಹೈಪಾಕ್, ಹೋಟೆಲ್ ಏಡ್ ಲೈನ್, ಪ್ರೆಸಿಡೆಂಟ್, ಕುಮಾರ್ಸ್ ದಿ ವೈಟ್ ಹೌಸ್ ಹೋಟೆಲ್, ಎಂಬಸಿ, ರಾಯಲ್ ಸೇರಿದಂತೆ ಹಲವೆಡೆ ಹೊಸ ವರ್ಷಾಚರಣೆ ಪಾರ್ಟಿಗಳನ್ನು ಏರ್ಪಡಿಸಲಾಗಿದೆ.

ಯುವಕ-ಯುವತಿಯರು, ನವ ದಂಪತಿ, ಐಟಿ-ಬಿಟಿ ಕಂಪನಿಗಳ ನೌಕರರು ಹೊಸ ವರ್ಷ ಸ್ವಾಗತಕ್ಕೆ ಮೈಸೂರಿನ ಹೋಟೆಲ್, ರೆಸಾರ್ಟ್, ಕ್ಲಬ್‍ಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದಾರೆ.

ವಾಹನ ಸಂಚಾರ ಬಂದ್: ಕಾನೂನು -ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ತಾವರೆಕಟ್ಟೆ ಮಾರ್ಗದಲ್ಲಿ ಚಾಮುಂಡಿ ಬೆಟ್ಟಕ್ಕೆ ನಾಳೆ (ಡಿ. 31) ರಾತ್ರಿ 9ರಿಂದ ಮರುದಿನ ಬೆಳಿಗ್ಗೆ 6 ಗಂಟೆವರೆಗೆ ಚಾಮುಂಡಿ ಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ ಎಲ್ಲಾ ಬಗೆಯ ಸಾರ್ವಜನಿಕ ವಾಹನ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಮಂಗಳವಾರ ಸಂಜೆ 7 ರಿಂದ ಬುಧ ವಾರ ಬೆಳಿಗ್ಗೆ 6 ಗಂಟೆವರೆಗೆ ಚಾಮುಂಡಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಉತ್ತನಹಳ್ಳಿ ಗೇಟ್, ದೈವೀವನ ಗೇಟ್, ಲಲಿತಮಹಲ್ ಗೇಟ್ ಹಾಗೂ ಚಾಮುಂಡಿಬೆಟ್ಟದ ಪಾದದ ಬಳಿಯ ಗೇಟ್‍ಗಳ ಮೂಲಕ ಎಲ್ಲಾ ಬಗೆಯ ವಾಹನ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಭದ್ರತೆ: ಮಂಗಳವಾರ ರಾತ್ರಿ 12 ಗಂಟೆ ವೇಳೆಗೆ ಎಲ್ಲಾ ಹೋಟೆಲ್ ಗಳು, ರೆಸಾರ್ಟ್, ಬಾರ್ ಅಂಡ್ ರೆಸ್ಟೋ ರೆಂಟ್, ಪಬ್, ಕ್ಲಬ್‍ಗಳನ್ನು ಬಂದ್ ಮಾಡ ಬೇಕೆಂದು ಆದೇಶಿಸಿರುವ ಪೊಲೀಸ್ ಆಯು ಕ್ತರು, ಕಾನೂನು ಉಲ್ಲಂಘಿಸಿ ಸಾರ್ವಜನಿಕರಿಗೆ ತೊಂದರೆ ಕೊಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಮೈಸೂರು ನಗರದಾದ್ಯಂತ ಪೊಲೀಸ್ ಸಿಬ್ಬಂದಿ ಗಳನ್ನು ನಿಯೋಜಿಸಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಹೊಸ ವರ್ಷಾಚರಣೆಯಲ್ಲಿ ಮೈಮರೆತರೆ ಪೊಲೀಸರ ಕಾನೂನು ಕ್ರಮ ಖರೆ!
ಹೊಸ ವರ್ಷಾಚರಣೆ ವೇಳೆ ದ್ವಿಚಕ್ರ ವಾಹನದಲ್ಲಿ ಜಾಲಿ ರೈಡ್ ಹೋಗುವ ಯೋಜನೆಯಿದ್ದರೆ, ಪೊಲೀಸರು ನೀಡಿರುವ ಈ ಸೂಚನೆಗಳನ್ನು ಗಮನವಿಟ್ಟು ಗಮನಿಸಿ.

ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಹಲವು ಬಗೆಯ ಯೋಜನೆ ಮಾಡಿಕೊಳ್ಳುತ್ತಾರೆ. ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂಸ್ಟೇಗಳಲ್ಲಿ ಪಾರ್ಟಿಯಲ್ಲಿ ಪಾಲ್ಗೊಳ್ಳುವುದು ಒಂದೆಡೆಯಾದರೆ ಕೆಲ ಯುವಕರು ಬೈಕ್‍ನಲ್ಲಿ ಜಾಲಿ ರೈಡ್ ಮಾಡಿ, ಸಂಭ್ರಮಿಸುತ್ತಾರೆ. ಹಾಗಾಗಿ ಡಿ.31ರ ರಾತ್ರಿ ವಾಹನ ಸಂಚಾರ ಹೆಚ್ಚಾಗಿ ರುತ್ತದೆ. ಈ ವೇಳೆ ಸುರಕ್ಷತೆ ದೃಷ್ಟಿ ಯಿಂದ ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅಲ್ಲದೆ, ದ್ವಿಚಕ್ರ ವಾಹನ ಚಾಲಿಸುವವರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವೇಗದ ಮಿತಿ ಮೀರ ದಂತೆ ವಾಹನ ಚಾಲಿಸಬೇಕು. ಜಿóಗ್‍ಜಾóಗ್ ಮಾದರಿ ವಾಹನ ಚಾಲಿಸ ಬಾರದು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಇತರೆ ವಾಹನಗಳ ಸಂಚಾರಕ್ಕೆ ಅಡಚಣೆ ಮಾಡ ಬಾರದು. ರಸ್ತೆಯಲ್ಲಿ ಎದುರಾದವರಿಗೆ ಶುಭಕೋರುವ ನೆಪದಲ್ಲಿ ವಾಹನಗಳನ್ನು ಅಪಾಯಕಾರಿ ರೀತಿ ಓಡಿಸಬಾರದು. ನಗರದೆಲ್ಲೆಡೆ ಸಂಚಾರಿ ಪೊಲೀಸರು ಗಸ್ತಿ ನಲ್ಲಿರುತ್ತಾರೆ. ಜೊತೆಗೆ ಸಿಸಿಟಿವಿ ಮೂಲಕ ವಾಹನ ಸಂಚಾರದ ಮೇಲೆ ನಿಗಾ ವಹಿಸ ಲಾಗುತ್ತದೆ. ವೀಲಿಂಗ್ ಮತ್ತು ಡ್ರಾಗ್ ರೇಸ್ ಹಾಗೂ ಕರ್ಕಶ ಶಬ್ಧ ಮಾಡು ವುದನ್ನು ತಡೆಗಟ್ಟಲು ಸಂಚಾರ ಪೊಲೀ ಸರು ಮತ್ತು ತಜ್ಞರನ್ನು ಒಳಗೊಂಡ 5 ಕ್ಷಿಪ್ರ ಕಾರ್ಯಪಡೆಗಳನ್ನು ರಚಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವ ವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀ ಸರು ಎಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷಾಚರಣೆ ಸಂಭ್ರಮದ ನಡುವೆ ಸುರಕ್ಷತೆಯನ್ನು ಮರೆಯ ಬೇಡಿ. ಕ್ಷಣಕಾಲ ಎಚ್ಚರ ತಪ್ಪಿದರೂ ಅಪಾಯ ಎದುರಾಗುತ್ತದೆ. ಸಂಚಾರ ನಿಯಮಗಳಿರುವುದು ಸಾರ್ವಜನಿಕರ ಸುರಕ್ಷತೆಗಾಗಿ. ಸಂಚಾರ ನಿಯಮ ಪಾಲಿಸುವುದರೊಂದಿಗೆ ಜಾಗರೂಕತೆ ಯಿಂದ ವಾಹನ ಚಾಲಿಸಿ. ಸಣ್ಣ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸ ಬಹುದು. ಅತೀ ವೇಗವಾಗಿ, ಅಡ್ಡಾದಿಡ್ಡಿ ವಾಹನ ಚಾಲಿಸುವ ಮುನ್ನ ತಮ್ಮ ಕುಟುಂಬ ವನ್ನು ನೆನಪಿಸಿಕೊಳ್ಳಿ. ಹೊಸ ವಷಾಚರಣೆಯನ್ನು ಯಾರಿಗೂ ತೊದರೆಯಾಗದಂತೆ ಸಂಭ್ರಮಿಸಿ, ಸಂಚಕಾರ ತಂದುಕೊಳ್ಳಬೇಡಿ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಮನವಿ ಮಾಡಿದ್ದಾರೆ.

Translate »