ತ್ಯಾಜ್ಯ ವಿಲೇವಾರಿ ಸಂಬಂಧ ನಾಗ್ಪುರದಲ್ಲಿ ಮೈಸೂರು ಪಾಲಿಕೆ ತಂಡ ಅಧ್ಯಯನ
ಮೈಸೂರು

ತ್ಯಾಜ್ಯ ವಿಲೇವಾರಿ ಸಂಬಂಧ ನಾಗ್ಪುರದಲ್ಲಿ ಮೈಸೂರು ಪಾಲಿಕೆ ತಂಡ ಅಧ್ಯಯನ

December 31, 2019

ಮೈಸೂರು,ಡಿ.30(ಎಂಕೆ)-ಸ್ವಚ್ಛ ಸರ್ವೇಕ್ಷಣಾ ಅಂಗವಾಗಿ ಜಿಲ್ಲಾಧಿಕಾರಿ ಗಳ ನೇತೃತ್ವದಲ್ಲಿ ನಾಗ್ಪುರಕ್ಕೆ ತೆರಳಿರುವ ಮೈಸೂರು ಮಹಾನಗರಪಾಲಿಕೆ ತಂಡ, ಅಲ್ಲಿ ಅತ್ಯಾಧುನಿಕ ರೀತಿ ಕಸ ವಿಲೇ ವಾರಿಯ ಕುರಿತು ಅಧ್ಯಯನ ನಡೆಸಿದೆ.

ಸೋಮವಾರ ಜಿಲ್ಲಾಧಿಕಾರಿಗಳ ನೇತೃತ್ವ ದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಷಫಿ ಅಹಮದ್, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಆರೋಗ್ಯಾಧಿಕಾರಿ ನಾಗರಾಜು, ಪಾಲಿಕೆ ಆರೋಗ್ಯಾಧಿಕಾರಿ ಎಂ.ಎಸ್.ಜಯಂತ್ ಹಾಗೂ ಹಣಕಾಸು ಸಮಿತಿ ಅಧ್ಯಕ್ಷೆ ಶೋಭ ಒಳಗೊಂಡ ತಂಡ ನಾಗ್ಪುರಕ್ಕೆ ತೆರಳಿದೆ.

ನಾಗ್ಪುರದ ಪಾಲಿಕೆ ಕಚೇರಿ, ವಿಲೇ ವಾರಿ ಘಟಕಕ್ಕೆ ತೆರಳಿ ತ್ಯಾಜ್ಯ ನಿರ್ವವಣೆ, ಕಸ ವಿಂಗಡಣೆ, ಗೊಬ್ಬರ ತಯಾರಿಕೆ ಕುರಿತು ನಾಗ್ಪುರ ಪಾಲಿಕೆ ಅಧಿಕಾರಿ ಗಳಿಂದ ಮಾಹಿತಿ ಪಡೆದುಕೊಂಡಿದೆ.

ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿ ಯಲ್ಲಿ ದಿನಕ್ಕೆ 400 ರಿಂದ 450 ಟನ್ ತ್ಯಾಜ್ಯ ಸಂಗ್ರಹವಾದರೆ, ನಾಗ್ಪುರದಲ್ಲಿ ದಿನವೊಂದಕ್ಕೆ 1200 ರಿಂದ 1400 ಟನ್ ಕಸ ಸಂಗ್ರಹವಾಗುತ್ತದೆ.

ಮೈಸೂರಿಗಿಂತ ಮೂರು ಪಟ್ಟು ಹೆಚ್ಚಿನ ತ್ಯಾಜ್ಯವನ್ನು ನಾಗ್ಪುರದಲ್ಲಿ ಯಶಸ್ವಿಯಾಗಿ ನಿರ್ವಹಣೆ ಮಾಡಲಾಗುತ್ತಿದ್ದು, ಅದೇ ಮಾದರಿಯಲ್ಲಿ ಮೈಸೂರಿನ ತ್ಯಾಜ್ಯ ನಿರ್ವಹಣೆ ಮಾಡಲು ಯೋಜನೆ ರೂಪಿಸಲಾಗಿದೆ.

ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ನಗರಪಾಲಿಕೆ ಆರೋಗ್ಯಾ ಧಿಕಾರಿ ಡಾ.ಎಂ.ಎಸ್.ಜಯಂತ್, ನಾಗ್ಪು ರದಲ್ಲಿನ ಕಸ ವಿಲೇವಾರಿ ಮಾದರಿಯನ್ನು ಮೈಸೂರಿನಲ್ಲಿಯೂ ಅಳವಡಿಸಲಾಗು ವುದು. ನಗರದಲ್ಲಿರುವ ಕಸ ವಿಲೇವಾರಿ ಸಮಸ್ಯೆಯನ್ನು ಸಂಪೂರ್ಣ ಬಗೆಹರಿ ಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳ ಲಾಗುವುದು ಎಂದರು.ನಾಗ್ಪುರ ಪಾಲಿಕೆಯಲ್ಲಿ ಕಸ ವಿಲೇ ವಾರಿ, ಗೊಬ್ಬರ ತಯಾರಿಕೆ ಕುರಿತಂತೆ ಮಾಹಿತಿ ಸಂಗ್ರಹಿಸಲಾಗಿದೆ.

ಇದೇ ಮಾದರಿಯಲ್ಲಿ ಮೈಸೂರು ಸೂಯೇಜ್ ಫಾರಂನಲ್ಲಿ ರಾಶಿ ರಾಶಿ ಬಿದ್ದಿರುವ ಕಸವನ್ನು 14 ರಿಂದ 18 ತಿಂಗಳೊಳಗೆ ವ್ಯವಸ್ಥಿತವಾಗಿ ವಿಲೇವಾರಿ ಮಾಡಿ, ಮೈಸೂರು ಸ್ವಚ್ಛತೆಯಿಂದ ಕಾಣುವಂತೆ ಮಾಡಲು ಪ್ರಯತ್ನಿಸಲಾ ಗುವುದು ಎಂದರು.

Translate »