ಸಿಐಐಎಲ್‍ನಿಂದ ಶೀಘ್ರವೇ ಸಿದ್ಧಿ, ಹಕ್ಕಿಪಿಕ್ಕಿ, ಸೋಲಿಗ ಸಮುದಾಯ ಭಾಷೆಗಳ ಶಬ್ದಕೋಶ-ವ್ಯಾಕರಣ ಪ್ರಕಟಣೆ
ಮೈಸೂರು

ಸಿಐಐಎಲ್‍ನಿಂದ ಶೀಘ್ರವೇ ಸಿದ್ಧಿ, ಹಕ್ಕಿಪಿಕ್ಕಿ, ಸೋಲಿಗ ಸಮುದಾಯ ಭಾಷೆಗಳ ಶಬ್ದಕೋಶ-ವ್ಯಾಕರಣ ಪ್ರಕಟಣೆ

December 31, 2019

ಮೈಸೂರು, ಡಿ.30(ಪಿಎಂ)- ಅಳಿವಿ ನಂಚಿನಲ್ಲಿರುವ ಸಿದ್ಧಿ, ಹಕ್ಕಿಪಿಕ್ಕಿ ಹಾಗೂ ಸೋಲಿಗ ಸಮುದಾಯ ಭಾಷೆಗಳ ಕುರಿ ತಂತೆ ಶಬ್ದಕೋಶ ಹಾಗೂ ವ್ಯಾಕರಣ ಇತ್ಯಾದಿಗಳನ್ನು ಭಾರತೀಯ ಭಾಷಾ ಸಂಸ್ಥಾನ ಶೀಘ್ರದಲ್ಲಿ ಪ್ರಕಟಿಸಲಿದೆ ಎಂದು ಸಂಸ್ಥಾನದ ನಿರ್ದೇಶಕ ಪ್ರೊ. ಡಿ.ಜಿ. ರಾವ್ ಇಂದಿಲ್ಲಿ ಮಾಹಿತಿ ನೀಡಿದರು.

ಮೈಸೂರಿನ ಮಾನಸಗಂಗೋತ್ರಿಯ ಮೈಸೂರು ವಿವಿಯ ವಿಜ್ಞಾನ ಭವನದಲ್ಲಿ ವಿವಿಯ ಕಂಪ್ಯೂಟರ್ ಸೈನ್ಸ್ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಭಾಷಾಶಾಸ್ತ್ರ ಅಧ್ಯಯನ ವಿಭಾಗ, ಅಖಿಲ ಭಾರತ ಸಂಶೋಧಕರ ಸಂಘ (ಎಐಆರ್‍ಎ), ಭಾರತೀಯ ಭಾಷಾ ಸಂಸ್ಥಾನದ (ಸಿಐ ಐಎಲ್) ಸಂಯುಕ್ತಾಶ್ರಯದಲ್ಲಿ `ಸ್ಥಳೀಯ ಭಾಷೆಗಳು, ಸಂಸ್ಕøತಿ ಮತ್ತು ಸಮಾಜದ ಬಹುಶಿಸ್ತೀಯ ದೃಷ್ಟಿಕೋನ’ ಕುರಿತಂತೆ ಹಮ್ಮಿಕೊಂಡಿರುವ 3 ದಿನಗಳ ರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದೇಶದ ವಿವಿಧ ಸಂಸ್ಥೆ ಹಾಗೂ ವಿವಿಗಳ ಸಹಯೋಗದೊಂದಿಗೆ ಸಿಐಐಎಲ್ 70ಕ್ಕೂ ಹೆಚ್ಚು ಭಾಷೆಗಳ ಕುರಿತು ಅಧ್ಯ ಯನ ನಡೆಸುತ್ತಿದೆ. ಬೆಟ್ಟದ ಕುರುಬ ಭಾಷೆ ದಾಖಲೀಕರಣ ಸಂಬಂಧ ಆ ಸಮುದಾಯ ದವರನ್ನು ಸಂದರ್ಶನಕ್ಕೆ ಒಳಪಡಿಸಿದ ಸಂದರ್ಭದಲ್ಲಿ ಪ್ರತ್ಯೇಕ ಲಿಪಿ ಬೇಕೆಂಬ ಆಗ್ರಹ ಕೇಳಿಬಂದಿತು. ಆದರೆ ಈ ಸಮು ದಾಯ ಕರ್ನಾಟಕ ಮಾತ್ರವಲ್ಲದೆ, ತಮಿಳು ನಾಡು ಹಾಗೂ ಕೇರಳದಲ್ಲೂ ಚದುರಿದ್ದು, ಹೀಗಾಗಿ ಒಂದೇ ತರಹದ ಲಿಪಿ ಕಷ್ಟ ಸಾಧ್ಯ ಎಂದು ತಿಳಿಸಿದರು.

ಯುಜಿಸಿ ದೇಶದ ವಿವಿಧ ಭಾಗಗಳಲ್ಲಿ ಅಳಿವಿನಂಚಿನ ಭಾಷೆಗಳ ಅಧ್ಯಯನ ಕೇಂದ್ರ ಗಳನ್ನು ಆರಂಭಿಸಿದೆ. ಆದರೂ ಅಳಿವಿ ನಂಚಿನ ಭಾಷೆಗಳ ದಾಖಲೀಕರಣ ಸರಿ ಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ. ಭಾಷೆಗಳ ಅಧ್ಯಯನಕ್ಕೆ ಮಾನವಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಸಮಾಜಶಾಸ್ತ್ರ, ಭಾಷಾಶಾಸ್ತ್ರ ಸೇರಿ ದಂತೆ ಅನೇಕ ವಿಭಾಗಗಳು ಸಹಯೋಗ ದೊಂದಿಗೆ ಕಾರ್ಯ ಚಟುವಟಿಕೆ ನಡೆಸು ವುದು ಅಗತ್ಯ. ಆಗ ಮಾತ್ರ ನಿಖರ ಫಲಿ ತಾಂಶ ದೊರೆಯಲಿದೆ. ಆದರೆ ಆ ರೀತಿಯ ಸಮನ್ವಯದ ಅಧ್ಯಯನಗಳು ತೀರಾ ಕಡಿಮೆ. ಕಳೆದ ವರ್ಷ ಹೈದರಾಬಾದ್ ವಿಶ್ವವಿದ್ಯಾ ನಿಲಯದಲ್ಲಿ ಇದೇ ರೀತಿ ಭಾಷಾ ವಿಚಾರ ವಾಗಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಆದರೆ ಇಲ್ಲಿನಂತೆ ಅಲ್ಲಿಯೂ ಒಂದೊಂದು ವಿಭಾಗದ ನಡುವೆ ಅಂತರಶಾಸ್ತ್ರೀಯ ಅಧ್ಯ ಯನದ ಕೊರತೆ ಕಂಡುಬಂದಿತು. ಇಂತಹ ಬೆಳವಣಿಗೆಯಿಂದ ಭಾಷಾ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಲಭ್ಯವಾಗದು ಎಂದು ಪ್ರತಿಪಾದಿಸಿದರು.

ಭಾರತದಲ್ಲಿ 197 ಭಾಷೆಗಳು ಅಳಿವಿ ನಂಚಿನಲ್ಲಿ ಇರುವುದಾಗಿ ಯುನೆಸ್ಕೊ ಘೋಷಣೆ ಮಾಡಿದೆ. ಕರ್ನಾಟಕದಲ್ಲಿ `ಕನ್ನಡ’ ಅಧಿ ಕೃತ ಭಾಷೆಯಾಗಿದ್ದು, ಇದರೊಂದಿಗೆ ಕೊಡವ, ಕೊಂಕಣಿ, ತುಳು ಮೊದಲಾ ದವು ಸ್ಥಳೀಯ ಭಾಷೆಗಳಾಗಿವೆ. ಜೊತೆಗೆ ರಾಜ್ಯದಲ್ಲಿ ಸುಮಾರು 50 ಬುಡಕಟ್ಟು ಸಮು ದಾಯಗಳನ್ನು ಗುರುತಿಸಲಾಗಿದೆ. ಈ ಪೈಕಿ ಬೆಟ್ಟದ ಕುರುಬ, ಹಕ್ಕಿಪಿಕ್ಕಿ ಹಾಗೂ ಸೋಲಿಗ ಸಮುದಾಯದ ಭಾಷೆಗಳು ಅಳಿದು ಹೋಗುವ ಸನ್ನಿವೇಶದಲ್ಲಿವೆ. ಒಂದು ಭಾಷೆ ನಶಿಸಿ ಹೋದರೆ ಕೇವಲ ಭಾಷೆಯಷ್ಟೆ ಅಲ್ಲದೆ, ಅದರ ಸಂಸ್ಕøತಿ, ಪರಂಪರೆ ಹಾಗೂ ಆ ಸಮುದಾಯದ ಜ್ಞಾನವೂ ಮರೆಯಾಗಲಿದೆ ಎಂದರು.

ಕಾರ್ಯಾಗಾರ ಉದ್ಘಾಟಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಅಳಿವಿನಂಚಿನ ಭಾಷೆಗಳ ಉಳಿವಿಗಾಗಿ ಅಧ್ಯಯನ ನಡೆ ಸುವುದು ಕೇವಲ ಒಂದೇ ವಿಭಾಗದ ಜವಾಬ್ದಾರಿಯಲ್ಲ. ಭಾಷಾಶಾಸ್ತ್ರ, ಸಮಾಜ ಶಾಸ್ತ್ರ ಸೇರಿದಂತೆ ಸಂಬಂಧಿಸಿದ ಎಲ್ಲಾ ವಿಭಾಗಗಳ ಹೊಣೆಯಾಗಿದೆ. ಆ ಎಲ್ಲಾ ವಿಭಾಗಗಳು ಸಹಯೋಗ ಹಾಗೂ ಸಮನ್ವಯ ದಿಂದ ಕೆಲಸ ಮಾಡಬೇಕು. ನಶಿಸುವ ಹಂತ ದಲ್ಲಿರುವ ಬುಡಕಟ್ಟು ಭಾಷೆಗಳ ದಾಖ ಲೀಕರಣಗೊಳಿಸಿ ಅವುಗಳನ್ನು ಮುಖ್ಯ ವಾಹಿನಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ಇಂದಿನ ಕಾರ್ಯಾಗಾರ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.

90ಕ್ಕೂ ಹೆಚ್ಚು ಮಂದಿ ಕಾರ್ಯಾಗಾರ ದಲ್ಲಿ ಪಾಲ್ಗೊಂಡಿದ್ದು, 10ಕ್ಕೂ ಹೆಚ್ಚು ಮಂದಿ ಸಂಪನ್ಮೂಲ ವ್ಯಕ್ತಿಗಳು ಭಾಷೆಗಳಿಗೆ ಸಂಬಂ ಧಿಸಿದಂತೆ ನಾನಾ ವಿಷಯಗಳ ಮೇಲೆ ಉಪನ್ಯಾಸ ನೀಡಲಿದ್ದಾರೆ.

ಸಿಐಐಎಲ್‍ನ ಪ್ರೊ.ಉಮಾರಾಣಿ ಪಪ್ಪು ಸ್ವಾಮಿ, ಮೈಸೂರು ವಿವಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಸುರೇಶ, ಎಐ ಆರ್‍ಎ ಮೈಸೂರು ಘಟಕದ ಅಧ್ಯಕ್ಷ ಡಾ. ಕುಶಾಲ್ ಬರಗೂರು ಮತ್ತಿತರರು ಹಾಜರಿದ್ದರು.

Translate »