ದೇಶದಲ್ಲಿ ಹಿಂಸೆ, ಪ್ರತೀಕಾರಕ್ಕೆ ಜಾಗವಿಲ್ಲ: ಯುಪಿ ಸಿಎಂಗೆ ಪ್ರಿಯಾಂಕಾ ತಿರುಗೇಟು
ಮೈಸೂರು

ದೇಶದಲ್ಲಿ ಹಿಂಸೆ, ಪ್ರತೀಕಾರಕ್ಕೆ ಜಾಗವಿಲ್ಲ: ಯುಪಿ ಸಿಎಂಗೆ ಪ್ರಿಯಾಂಕಾ ತಿರುಗೇಟು

December 31, 2019

ನವದೆಹಲಿ: ದೇಶದಲ್ಲಿ ಹಿಂಸಾಚಾರ ಅಥವಾ ಸೇಡಿಗೆ ಜಾಗವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರಿಗೆ ಸೋಮವಾರ ತಿರುಗೇಟು ನೀಡಿದ್ದಾರೆ.

ಸಾರ್ವಜನಿಕ ಆಸ್ತಿ ಹಾನಿ ಮಾಡುವವರ ಆಸ್ತಿ ಜಪ್ತಿ ಮಾಡಲಾಗುವುದು ಎಂದು ಯೋಗಿ ಆದಿತ್ಯನಾಥ್ ಅವರು ಎಚ್ಚರಿ ಸಿದ ಬೆನ್ನಲ್ಲೇ, ಕೇಸರಿ ಪಕ್ಷದ ಹಿಂದೂತ್ವ ಅಥವಾ ಧರ್ಮ ಹಿಂಸಾಚಾರ ಮಾಡು ವಂತೆ, ಸೇಡು ತೀರಿಸಿಕೊಳ್ಳುವಂತೆ ಹೇಳುವು ದಿಲ್ಲ ಎಂದು ಕಾಂಗ್ರೆಸ್ ನಾಯಕಿ ಹೇಳಿ ದ್ದಾರೆ. ತಮ್ಮ 4 ದಿನಗಳ ಲಖನೌ ಭೇಟಿಯ ಕೊನೆಯ ದಿನವಾದ ಇಂದು ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಪ್ರಿಯಾಂಕಾ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಉತ್ತರ ಪ್ರದೇಶದಲ್ಲಿ ನಡೆದ ಪ್ರತಿ ಭಟನೆ ವೇಳೆ ಪೆÇಲೀಸರು ಜನರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಮೇಲೆ ಉತ್ತರ ಪ್ರದೇಶ ಪೆÇಲೀ ಸರು ಹಲ್ಲೆ ಮಾಡಿದ್ದಾರೆಂದು ಎರಡು ದಿನಗಳ ಹಿಂದೆ ಗಂಭೀರ ಆರೋಪ ಮಾಡಿದ್ದ ಪ್ರಿಯಾಂಕಾ, ಈ ದೇಶದಲ್ಲಿ ವೈರತ್ವ, ಹಿಂಸೆ ಮತ್ತು ಸೇಡಿಗೆ ಜಾಗವಿಲ್ಲ ಎಂದಿದ್ದಾರೆ.

ಉತ್ತರ ಪ್ರದೇಶ ಪೆÇಲೀಸರ ಕ್ರಮವನ್ನು ಖಂಡಿಸಿರುವ ಪ್ರಿಯಾಂಕಾ, ನನ್ನ ಸುರಕ್ಷತೆ ಮುಖ್ಯ ಸಮಸ್ಯೆ ಅಲ್ಲ. ನಾವು ಸಾಮಾನ್ಯ ನಾಗ ರಿಕರ ಸುರಕ್ಷತೆ ಬಗ್ಗೆ ಮಾತನಾಡುತ್ತಿದ್ದೇವೆ. ನಮಗೆ ತಿಳಿದಿರುವ ಹಾಗೆ 5500 ಜನರನ್ನು ಬಂಧಿಸಲಾಗಿದೆ. ಹಲವರನ್ನು ಜೈಲಿಗೆ ತಳ್ಳಿ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ. ಉತ್ತರ ಪ್ರದೇಶ ಪೆÇಲೀಸರು ಮತ್ತು ಅಲ್ಲಿನ ಆಡ ಳಿತ ತಪ್ಪು ಕಾರ್ಯಗಳಲ್ಲಿ ನಿರತವಾಗಿದೆ ಎಂದು ವಾಗ್ದಾಳಿ ನಡೆಸಿದರು.

Translate »