ಕುವೆಂಪು ಸಾಹಿತ್ಯದಲ್ಲಿ ವೈಜ್ಞಾನಿಕ ಪ್ರಜ್ಞೆ ಅಡಗಿದೆ: ಜಿಪಂ ಸಿಇಓ
ಮಂಡ್ಯ

ಕುವೆಂಪು ಸಾಹಿತ್ಯದಲ್ಲಿ ವೈಜ್ಞಾನಿಕ ಪ್ರಜ್ಞೆ ಅಡಗಿದೆ: ಜಿಪಂ ಸಿಇಓ

December 31, 2019

ಮಂಡ್ಯ,ಡಿ.30(ನಾಗಯ್ಯ)- ಕುವೆಂಪು ರಚಿಸಿರುವ ಪದ್ಯ, ಗದ್ಯ, ಕಾವ್ಯ, ನಾಟಕ ಗಳಲ್ಲಿ ವೈಜ್ಞಾನಿಕ ಪ್ರಜ್ಞೆ ಅಡಗಿದೆ ಎಂದು ಜಿಪಂ ಸಿಇಓ ಕೆ.ಯಾಲಕ್ಕಿಗೌಡ ತಿಳಿಸಿದರು.

ನಗರದ ಕರ್ನಾಟಕ ಸಂಘದ ಆವರಣ ದಲ್ಲಿ ನಡೆದ ಕುವೆಂಪು ಜಯಂತೋತ್ಸವದಲ್ಲಿ ಡಾ. ರಾ.ಗೌ ರವರ ಕುವೆಂಪು ವಿಚಾರ ಜಾಗೃತಿ ಪುಸ್ತಕ ಬಿಡುಗಡೆಗೊಳಿಸಿ ಮಾತ ನಾಡಿದ ಅವರು, ಕುವೆಂಪು ವಿಶ್ವಮಾನವ ಸಂದೇಶವನ್ನು ಸಾರಿದಂತಹ ಸಾಂಸ್ಕøತಿಕ ರಾಯಭಾರಿಯಾಗಿದ್ದು ಅವರಲ್ಲಿದ್ದ ದೇಶ ಹಾಗೂ ನಾಡಿನ ಪ್ರೇಮ ಅನನ್ಯ ಎಂದರು.

ರಾಷ್ಟಕವಿ ಕುವೆಂಪು ಸಾಹಿತ್ಯ ಲೋಕದ ದೈತ್ಯ ಪ್ರತಿಭೆ, ಕುವೆಂಪು ಕುರಿತು ದಶಕಗಳ ಕಾಲ ಅಧ್ಯಯನ, ವಿಮರ್ಶೆ ನಡೆದಿದ್ದು ಪ್ರತಿ ಬಾರಿಯೂ ಹೊಸದನ್ನು ಕಾಣುತ್ತಿ ದ್ದೇವೆ ಎಂದರು.

ಕನ್ನಡ ನಾಡು ನುಡಿ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು. ಕರ್ನಾಟಕ ಏಕೀ ಕರಣದ ವೇಳೆ ಅವರು ಬಾರಿಸು ಕನ್ನಡ ಡಿಂಡಿಮವ ರಚಿಸಿ ಕನ್ನಡಿಗರಲ್ಲಿ ಒಗ್ಗಟ್ಟಿನ ಪ್ರಜ್ಞೆ ಮೂಡಿಸಿದ್ದರು. ಅವರೊಬ್ಬ ಶ್ರೇಷ್ಠ ಕವಿ. ಅವರ ವೈಚಾರಿಕ ಮನೋ ಭಾವ ಎಲ್ಲರಲ್ಲೂ ಇರಬೇಕು. ವಿಶ್ವಮಾನವ ಸಂದೇಶ ಪಾಲಿಸಿ ಜೀವನ ಮಾಡಿದರೆ ಸೌಹಾರ್ದದ ಬದುಕು ಕಾಣಬಹುದು ಎಂದರು. ಕಾರ್ಯಕ್ರಮದಲ್ಲಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮನಂದನಾಥ ಸ್ವಾಮಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯ ಪ್ರಕಾಶ್‍ಗೌಡ, ಮಾಜಿ ಶಾಸಕ ಹೆಚ್.ಹೊನ್ನಪ್ಪ, ಎಂ.ಕೆ.ಹರೀಶ್ ಕುಮಾರ್, ಪ್ರೊ. ಮಾ.ರಾಮಕೃಷ್ಣ, ಕೆ. ಜಯರಾಂ ಇತರರಿದ್ದರು.

Translate »