ಪಾಂಡವಪುರ ಟಿಎಪಿಸಿಎಂಎಸ್‍ಗೆ ದೇವೇಗೌಡ ಅಧ್ಯಕ್ಷ
ಮೈಸೂರು

ಪಾಂಡವಪುರ ಟಿಎಪಿಸಿಎಂಎಸ್‍ಗೆ ದೇವೇಗೌಡ ಅಧ್ಯಕ್ಷ

December 31, 2019

ಪಾಂಡವಪುರ, ಡಿ.30- ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ನೂತನ ಅಧ್ಯಕ್ಷರಾಗಿ ಎನ್.ಡಿ.ದೇವೇಗೌಡ (ಸುಂದ್ರಣ್ಣ) ಸೋಮವಾರ ಅವಿರೋಧ ವಾಗಿ ಆಯ್ಕೆಯಾದರು.

ಒಟ್ಟು 10 ಮಂದಿ ನಿರ್ದೇಶಕರ ಬಲದ ಟಿಎಪಿಸಿಎಂಎಸ್‍ನ ಹಿಂದಿನ ಅಧ್ಯಕ್ಷ ಪ್ರಕಾಶ್  ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎನ್.ಡಿ. ದೇವೇಗೌಡ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ಚುನಾ ವಣಾಧಿಕಾರಿಯೂ ಆದ ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ಎನ್.ಡಿ.ದೇವೇಗೌಡ ಆಯ್ಕೆಯಾಗುತ್ತಿದ್ದಂ ತೆಯೇ ಬೆಂಬಲಿಗರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಬಳಿಕ ಮಾತನಾಡಿದ ಅವರು, ನಮ್ಮ ನಾಯಕ ಸಚಿವ ಸಿ.ಎಸ್.ಪುಟ್ಟರಾಜು ಅವರ ಆಶೀರ್ವಾದ ಹಾಗೂ ಸಂಘದ ಎಲ್ಲಾ ನಿರ್ದೇಶಕರ ಸಹಕಾರದಿಂದ ನೂತನ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ರೈತರ ಸಂಸ್ಥೆಯಾಗಿರುವ ಟಿಎಪಿಸಿಎಂ ಎಸ್‍ನ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಉಪಾಧ್ಯಕ್ಷೆ ಎಂ.ಬಿ.ಶೀಲಾ, ನಿರ್ದೇಶಕರಾದ ಸತೀಶ್, ಗುರುಸ್ವಾಮಿ, ಎಚ್.ಎಲ್.ನಂಜೇಗೌಡ, ಡಿ.ರಾಜಪ್ಪ, ಪ್ರಕಾಶ್, ಜೆ.ಅಂದಾನಯ್ಯ, ಸಿ.ಎಸ್. ಪುಷ್ಪ, ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಜೆಡಿಎಸ್ ಅಧ್ಯಕ್ಷ ಧರ್ಮರಾಜು, ಚನ್ನಕೃಷ್ಣ ಸೇರಿದಂತೆ ಹಲವರಿದ್ದರು.

 

 

 

Translate »