ಕಾವೇರಿ ತೀರದಲ್ಲಿ ಹೊಸ ವರ್ಷಾಚರಣೆ ಮೋಜು-ಮಸ್ತಿಗೆ ಬ್ರೇಕ್…!
ಮಂಡ್ಯ

ಕಾವೇರಿ ತೀರದಲ್ಲಿ ಹೊಸ ವರ್ಷಾಚರಣೆ ಮೋಜು-ಮಸ್ತಿಗೆ ಬ್ರೇಕ್…!

December 31, 2019

2 ದಿನ 144 ಸೆಕ್ಷನ್ ಜಾರಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್
ಚೂಡಹಳ್ಳಿ ಚೆಕ್‍ಪೋಸ್ಟ್ ಬಂದ್, ಎಡಮುರಿ-ಬಲಮುರಿ, ಮುತ್ತತ್ತಿ ಪ್ರವೇಶಕ್ಕೂ ನಿಷೇಧ
ಮಂಡ್ಯ, ಡಿ.30(ನಾಗಯ್ಯ)- ಕಾವೇರಿ ತೀರದಲ್ಲಿ ಹೊಸ ವರ್ಷಾಚರಣೆಗೆ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಬ್ರೇಕ್ ಹಾಕಿವೆ.

ಹೊಸ ವರ್ಷ ಸಂಭ್ರಮಾಚರಣೆ ನೆಪದಲ್ಲಿ ನಡೆಯುವ ಅಕ್ರಮ, ಅಸಭ್ಯ ವರ್ತನೆ, ಅಹಿತಕರ ಘಟನೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಕಾವೇರಿ ನದಿ ತೀರದ ಹಲವು ಪ್ರಮುಖ ಪ್ರವಾಸಿ ತಾಣಗಳಲ್ಲಿ 2 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಗೊಳಿಸಲಾಗಿದೆ ಎಂದು ಜಿಲ್ಲಾ ಎಸ್‍ಪಿ ಪರಶುರಾಮ್ ತಿಳಿಸಿದ್ದಾರೆ.

ಶ್ರೀರಂಗಪಟ್ಟಣ ವ್ಯಾಪ್ತಿಯ ಬಲಮುರಿ, ಎಡ ಮುರಿ, ಸಂಗಮ, ಕರಿಘಟ್ಟ ಸೇರಿದಂತೆ ಇನ್ನಿತರ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಹಾಗೂ ಮಳವಳ್ಳಿ ತಾಲೂಕಿನ ಮುತ್ತತ್ತಿ ಸೇರಿದಂತೆ ವಿವಿ ಧೆಡೆಗಳಲ್ಲಿ ಡಿ.31 ಮತ್ತು ಜ.1ರಂದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಪ್ರಮುಖವಾಗಿ ಕಾವೇರಿ ತೀರದಲ್ಲಿ ನಿಷೇಧಾಜ್ಞೆ: ಮಂಡ್ಯ ಜಿಲ್ಲೆ ಎಂದರೆ ಕಾವೇರಿ ನದಿ ತೀರದ ಜಿಲ್ಲೆ ಎಂದು ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಕಾವೇರಿ ತೀರದಲ್ಲಿ ಹಲವು ರಮಣೀಯ ಪ್ರವಾಸಿ ಸ್ಥಳಗಳಿವೆ. ಈ ನಿಟ್ಟಿನಲ್ಲಿ ಪ್ರತಿನಿತ್ಯ ಈ ಭಾಗಕ್ಕೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಪ್ರವಾಸಿ ಗರು ಆಗಮಿಸುತ್ತಾರೆ. ಅದರಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಅಪಾರ ಜನರು ಬಂದು ಮೋಜು ಮಸ್ತಿ ಮಾಡುತ್ತಾರೆ. ಅಲ್ಲೆ ಮಾಂಸಾ ಹಾರ ತಯಾರಿಸಿ ಮದ್ಯಪಾನ ಸೇವನೆ ಮಾಡಿ ಕೊಂಡು ಫುಲ್ ಎಂಜಾಯ್ ಮಾಡುತ್ತಾರೆ. ಈ ವೇಳೆ ಈ ಭಾಗದಲ್ಲಿ ಸಾಕಷ್ಟು ಅವಘಡಗಳು ಸಹ ನಡೆದಿವೆ. 2013 ರಿಂದ 2019ನೇ ಸಾಲಿನ ವರೆಗೆ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸುಮಾರು 60ಕ್ಕೂ ಹೆಚ್ಚು ಮಂದಿ ಇಲ್ಲಿ ಸಾವನ್ನಪ್ಪಿ ದ್ದಾರೆ. ಇಂತಹ ಅವಘಡಗಳನ್ನು ತಪ್ಪಿಸುವ ನಿಟ್ಟಿ ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ತಿಳಿಸಿದ್ದಾರೆ.

ಅಸಭ್ಯ ವರ್ತನೆ ತಡೆಯುವ ಉದ್ದೇಶ: ಇತ್ತೀ ಚೆಗೆ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲೇ ಯುವಕ ಯುವತಿಯರು ಅಸಭ್ಯವಾಗಿ ವರ್ತನೆ ಮಾಡುವಂ ತಹ ಘಟನೆಗಳು ಬೆಳಕಿಗೆ ಬರುತ್ತಿವೆ. ಅದೇ ರೀತಿ ಕಾವೇರಿ ನದಿ ತೀರದ ಪ್ರದೇಶ ಗಳಲ್ಲೂ ಸಹ ಯುವಕ ಯುವತಿಯರು ಅಸಭ್ಯವಾಗಿ ವರ್ತನೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ಘಟನೆಗಳನ್ನು ತಡೆಯುವುದೇ ಪೆÇಲೀಸ್ ಇಲಾಖೆಯ ಉದ್ದೇಶ ಎಂದರು.

ಶ್ರೀರಂಗಪಟ್ಟಣ ತಾಲೂಕು ತಹಶೀಲ್ದಾರ್ ರೂಪ ಅವರು ಡಿ.31ರ ಬೆಳಿಗ್ಗೆ 6 ರಿಂದ 2020ರ ಜನವರಿ 1ರ ಸಂಜೆ 6 ಗಂಟೆವರೆಗೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಬಲಮುರಿ, ಎಡಮುರಿ, ಗಂಜಾಂ, ಸಂಗಮ, ಘೋಸಾಯಿ ಘಾಟ್, ಮಂಡ್ಯ ಕೊಪ್ಪಲು, ಮಹದೇವಪುರ, ಕಾವೇರಿ ಬೋರೆ ದೇವಸ್ಥಾನ, ರಾಜಪರಮೇಶ್ವರಿ ನಾಲೆ ಹಾಗೂ ರಾಮಸ್ವಾಮಿ ನಾಲೆ ಸೇರಿದಂತೆ ಕಾವೇರಿ ತೀರದ ಸುತ್ತಮುತ್ತಲ ಪ್ರದೇಶಗಳಲ್ಲಿ ಸಿಆರ್‍ಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಮಳವಳ್ಳಿ ತಾಲೂಕಿನ ಪ್ರಮುಖ ಪ್ರವಾಸಿ ತಾಣ ಮುತ್ತತ್ತಿ ಹಾಗೂ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂ ದಾಗಿ ಡಿ.31ರ ಬೆಳಿಗ್ಗೆ 6 ಗಂಟೆಯಿಂದ ಜ.2ರ ಬೆಳಿಗ್ಗೆ 6 ಗಂಟೆವರೆಗೆ ಸಿಆರ್‍ಪಿಸಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಕೆ.ಚಂದ್ರಮೌಳಿ ಆದೇಶ ಹೊರಡಿಸಿದ್ದಾರೆ.

ಚೂಡಹಳ್ಳಿ ಚೆಕ್‍ಪೋಸ್ಟ್: ಮುತ್ತತ್ತಿ ಸುತ್ತಮುತ್ತ ನಿಷೇಧಾಜ್ಞೆ ಇರುವುದರಿಂದಾಗಿ ಕನಕಪುರ ತಾಲೂ ಕಿನ ಸಾತನೂರು ವ್ಯಾಪ್ತಿಯ ಚೂಡಹಳ್ಳಿ ಚೆಕ್ ಪೋಸ್ಟ್‍ನ್ನೂ ಡಿ.31ರಿಂದ ಬಂದ್ ಮಾಡಲಾಗುತ್ತಿದೆ.

ಮುತ್ತತ್ತಿಗೆ ಹೊಸ ವರ್ಷಾಚರಣೆ ಮಾಡಲು ಪ್ರವಾಸಿಗರು ಅಧಿಕಾರಿಗಳ ಕಣ್ತಪ್ಪಿಸಿ ಚೂಡಹಳ್ಳಿ ಚೆಕ್‍ಪೋಸ್ಟ್ ಮೂಲಕ ಹೋಗುತ್ತಿದ್ದರು. ಆದರೆ ಈಗ ಈ ಪ್ರದೇಶ ಕಾವೇರಿ ವನ್ಯ ಜೀವಿ ಧಾಮ ವಾಗಿರುವುದರಿಂದ ವನ್ಯಜೀವಿ ಕಾನೂನು ಪ್ರಕಾರ ರಾತ್ರಿ ವೇಳೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ. ಹೊಸ ವರ್ಷಾಚರಣೆ ವೇಳೆ ಮೀನು ಹಿಡಿಯು ವುದು ಮತ್ತು ಕಾಡಿನೊಳಗೆ ಅತಿಕ್ರಮ ಪ್ರವೇಶ ನಿಬರ್ಂಧಿಸಲಾಗಿದೆ. ಕಾಡಾನೆ ಹಾಗೂ ಕಾಡು ಮೃಗಗಳಿಂದ ತೊಂದರೆಯಾಗಬಹುದೆಂಬ ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾ ಗಿದೆ. ಪ್ರವಾಸಿಗರು ಎಲ್ಲೆಂದರಲ್ಲಿ ಮದ್ಯಪಾನ ಮಾಡು ವುದು, ಮೋಜು-ಮಸ್ತಿಯಲ್ಲಿ ತೊಡಗು ವುದು, ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವು ದನ್ನು ಸಹ ನಿಷೇಧಿಸಲಾಗಿದೆ. ಪ್ರವಾಸಿ ಗರು ಸಹಕರಿಸಬೇಕೆಂದು ಅರಣ್ಯಾಧಿಕಾರಿ ಗಳು ಮನವಿ ಮಾಡಿದ್ದಾರೆ.

ವನ್ಯಜೀವಿ ಕಾಯ್ದೆಯಡಿ ಸಂಜೆ 5 ಗಂಟೆ ನಂತರ ಕಾವೇರಿ ವನ್ಯಜೀವಿ ಧಾಮದೊಳಗೆ ಯಾವ ಪ್ರವಾಸಿಗರನ್ನೂ ಬಿಡುವುದಿಲ್ಲ. ಹೊಸ ವರ್ಷಾಚರಣೆಯ 3 ದಿನಗಳ ಕಾಲ ಪ್ರವಾಸಿ ಗರನ್ನು ನಿಷೇಧಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಮಾಧ್ಯಮ ಗಳಿಗೆ ತಿಳಿಸಿದ್ದಾರೆ.

Translate »