ನೋಟಿಸ್‍ಗೂ ಜಗ್ಗದ ವಾಹನ ಸವಾರರಿಂದ 1.73 ಲಕ್ಷ ರೂ. ದಂಡ ವಸೂಲಿ
ಮೈಸೂರು

ನೋಟಿಸ್‍ಗೂ ಜಗ್ಗದ ವಾಹನ ಸವಾರರಿಂದ 1.73 ಲಕ್ಷ ರೂ. ದಂಡ ವಸೂಲಿ

December 31, 2019

ಮೈಸೂರು,ಡಿ.30(ಎಸ್‍ಪಿಎನ್)-ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಅಂಚೆ ಮೂಲಕ ನೋಟಿಸ್ ನೀಡಿದ್ದರೂ ದಂಡ ಪಾವತಿಸದೇ ಇದ್ದ 1,109 ವಾಹನ ಸವಾರರ ವಿರುದ್ಧ ವಿಶೇಷ ತಪಾಸಣೆ ನಡೆಸಿರುವ ಸಂಚಾರ ಪೊಲೀಸರು 1.73 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.

ಡಿ.30ರಂದು ಬೆಳಿಗ್ಗೆಯಿಂದ ಸಂಜೆಯ ವರೆಗೆ ವಿವಿ ಪುರಂ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂ ಘಿಸಿದ ವಾಹನ ಸವಾರರಿಗೆ ಅಂಚೆ ಮೂಲಕ ನೋಟಿಸ್ ನೀಡಿದ್ದರೂ ದಂಡ ಪಾವತಿ ಮಾಡಿರದವರ ಬಗ್ಗೆ ವಿಶೇಷ ತಪಾಸಣೆಯಡಿ ಮನೆಗೆ ಭೇಟಿ ನೀಡಿರುವ ಸಂಚಾರ ಪೊಲೀಸರು, ದಂಡ ಕಟ್ಟದೇ ಉಳಿಸಿಕೊಂಡಿದ್ದ ಸವಾರರಿಂದ 1.73 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

Translate »