ಬೆಂಗಳೂರು: ಹೊಸ ವರ್ಷದ ಮೂರನೇ ದಿನವೇ ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನಾಚರಣೆ. ಇಂತಹ ದಿನವನ್ನು ಶಿಕ್ಷಕಿಯರ ದಿನಾಚರಣೆಯಾಗಿ ಆಚರಿಸುವಂತೆ ಸುತ್ತೋಲೆ ಮೂಲಕ ಎಲ್ಲಾ ಶಾಲೆಗಳಿಗೂ ಸೂಚಿಸುವಂತೆ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
1831 ಜನವರಿ 3ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕುಗ್ರಾಮ ದಲ್ಲಿ ಜನಿಸಿದ ಸಾವಿತ್ರಿ ಬಾಯಿ ಫುಲೆ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟವರು. ಮನೆಯಲ್ಲೇ ಶಾಲೆ ತೆರೆದು ಅಕ್ಷರ ಕ್ರಾಂತಿ ಕಹಳೆ ಊದಿದರು. ಬ್ರಿಟಿಷರಿಂ ದಲೇ ಅತ್ಯುತ್ತಮ ಶಿಕ್ಷಕಿ ಎಂದು ಬಿರುದು ಪಡೆದರು. ಅಲ್ಲದೆ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಎಂದು ಬಿರುದು ಪಡೆದ ಸಾಧಕಿ ಮಾತೆ ಸಾವಿತ್ರಿಬಾಯಿ ಫುಲೆ. ಇಂತಹ ಮಹಾನ್ ಸಾಧಕಿಯ ಜನ್ಮದಿನ ಜನವರಿ 3. ಈ ದಿನವನ್ನು ಶಿಕ್ಷಕಿಯರ ದಿನಾಚರಣೆಯಾಗಿ ಆಚರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
ಅನುದಾನ ರಹಿತ ಖಾಸಗಿ ಶಾಲೆಗಳಿಂದಲೇ ಸಮವಸ್ತ್ರ, ಪಠ್ಯಪುಸ್ತಕ ಖರೀದಿ ಕಡ್ಡಾಯವಲ್ಲ
ಬೆಂಗಳೂರು: ಕೆಲವು ಅನುದಾನ ರಹಿತ ಖಾಸಗಿ ಶಾಲೆಗಳು ಮಕ್ಕಳ ಪ್ರವೇಶದ ಸಮಯದಲ್ಲಿ ಶಾಲೆ ಯಿಂದಲೇ ಸಮವಸ್ತ್ರ, ಪಠ್ಯಪುಸ್ತಕಗಳನ್ನು ಖರೀ ದಿಸಬೇಕು ಎಂದು ಒತ್ತಡ ಹೇರುತ್ತಿದ್ದವು. ಅನೇಕ ಮಂದಿ ಇದರಿಂದ ಬೇಸತ್ತು ಹೋಗಿದ್ದರು. ಸಮವಸ್ತ್ರ, ಪಠ್ಯ ಪುಸ್ತಕ ಗಳನ್ನು ನೀಡುವ ವೇಳೆಯಲ್ಲಿ ದುಪಟ್ಟು ಹಣವನ್ನು ವಸೂಲಿ ಮಾಡುತ್ತಿವೆ ಎನ್ನುವ ಆರೋಪವನ್ನು ಪೆÇೀಷಕರು ಮಾಡು ತ್ತಿದ್ದರು. ಈ ನಡುವೆ ಪಠ್ಯ ಪುಸ್ತಕ, ಸಮ ವಸ್ತ್ರ, ಶೂ, ಸಾಕ್ಸ್ ಮತ್ತಿತರ ವಸ್ತುಗಳ ಖರೀದಿ ವಿಚಾರದಲ್ಲಿ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದ್ದು, ಶಾಲೆಯಿಂದ ಅಥವಾ ನಿರ್ದಿಷ್ಟ ಮಾರಾಟಗಾರರಿಂದ ಅಗತ್ಯ ವಸ್ತುಗಳನ್ನು ಖರೀದಿಸುವಂತೆ ಶಾಲೆಗಳು ಪೆÇೀಷಕರಿಗೆ ಒತ್ತಾಯ ಹೇರ ದಂತೆ ಆದೇಶ ಹೊರಡಿಸಿದೆ.
ಒಂದು ವೇಳೆ ಸುತ್ತೋಲೆಯನ್ನು ಮೀರಿ ಶಾಲೆಗಳು ಪೆÇೀಷಕರನ್ನು ಒತ್ತಾಡ ಮಾಡಿದರೆ ಡಿಡಿಪಿಐ, ಬಿಇಓ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.