ಮೈಸೂರು ದಸರಾ

ಈ ಬಾರಿ ದಸರಾ ವಸ್ತುಪ್ರದರ್ಶನದ ವಿಶೇಷ ಆಕರ್ಷಣೆ ಲ್ಯಾಂಟನ್ ಪಾರ್ಕ್
ಮೈಸೂರು, ಮೈಸೂರು ದಸರಾ

ಈ ಬಾರಿ ದಸರಾ ವಸ್ತುಪ್ರದರ್ಶನದ ವಿಶೇಷ ಆಕರ್ಷಣೆ ಲ್ಯಾಂಟನ್ ಪಾರ್ಕ್

October 9, 2018

ಮೈಸೂರು:  ದಸರಾ ಹಿನ್ನೆಲೆಯಲ್ಲಿ 90 ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನದಲ್ಲಿ ಈ ಬಾರಿ ಚೀನಾ ಮಾದರಿಯ ಲ್ಯಾಂಟನ್ ಪಾರ್ಕ್ ಸಿದ್ಧಪಡಿಸಲಾಗುತ್ತಿದೆ. ಮೈಸೂರು ಪ್ರಾಂತ್ಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ ಕೊಡುಗೆ ಸೇರಿದಂತೆ ನಾಡಿನ ಪರಂಪರೆಯನ್ನು ತ್ರಿಡಿ ಶೋನಲ್ಲಿ ಬಿಂಬಿಸುವುದರೊಂದಿಗೆ 5 ಸಾವಿರ ಎಲ್‍ಇಡಿ ಲೈಟ್‍ಗಳುಳ್ಳ ರೋಜ್ ಗಾರ್ಡನ್ ಮುದ ನೀಡಲಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಲ್ಯಾಂಟನ್ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಮೈಸೂರಿನ ಡ್ರೀಮ್ ಪೆಟಲ್ಸ್ ಸಂಸ್ಥೆ ಲ್ಯಾಂಟನ್ ಪಾರ್ಕ್ ಸ್ಥಾಪಿಸುವ ಜವಾಬ್ದಾರಿ ಹೊತ್ತಿದೆ. ಈಗಾಗಲೇ ಚೀನಾದ ಸಂಸ್ಥೆ…

ದಸರಾ ವೇಳೆ ಪುರಭವನ ಆವರಣದಲ್ಲಿ ಸಾವಿರ ವಾಹನ ನಿಲುಗಡೆ
ಮೈಸೂರು, ಮೈಸೂರು ದಸರಾ

ದಸರಾ ವೇಳೆ ಪುರಭವನ ಆವರಣದಲ್ಲಿ ಸಾವಿರ ವಾಹನ ನಿಲುಗಡೆ

October 9, 2018

ಮೈಸೂರು:  ಕಳೆದ ಬಾರಿಯಂತೆ ಈ ವರ್ಷವೂ ದಸರಾ ಮಹೋತ್ಸವದ ವೇಳೆ ಮೈಸೂರಿನ ಪುರಭವನದ ಆವರಣದಲ್ಲಿರುವ ಮಲ್ಟಿ ಲೆವೆಲ್ ಪಾರ್ಕಿಂಗ್ ಲಾಟ್‍ನಲ್ಲಿ 1000 ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ನಗರಪಾಲಿಕೆ ಕಮೀಷನರ್ ಕೆ.ಹೆಚ್.ಜಗದೀಶ್, ಸೂಪರಿಂಟೆಂಡೆಂಟ್ ಇಂಜಿನಿಯರ್ ಸುರೇಶ್ ಹಾಗೂ ಸಿಬ್ಬಂದಿಗಳೊಂದಿಗೆ ಇಂದು ರಾಜಮಾರ್ಗದ ಸಿವಿಲ್ ಕಾಮಗಾರಿ ಹಾಗೂ ಟೌನ್ ಹಾಲ್‍ನ ಪಾರ್ಕಿಂಗ್ ಮತ್ತು ಸ್ವಚ್ಛತಾ ಕೆಲಸಗಳನ್ನು ಪರಿಶೀಲಿಸಿದರು. ಹಾರ್ಡಿಂಜ್ ಸರ್ಕಲ್ ಮತ್ತು ಅರ ಮನೆ ಸುತ್ತಲಿನ ಕಲ್ಲಿನ ಬ್ಯಾರಿಕೇಡ್ ರಿಪೇರಿ ಹಾಗೂ…

ಅ.13ರಂದು ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಈ  ಬಾರಿಯ `ಓಪನ್ ಸ್ಟ್ರೀಟ್ ಫೆಸ್ಟಿವಲ್’
ಮೈಸೂರು, ಮೈಸೂರು ದಸರಾ

ಅ.13ರಂದು ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಈ  ಬಾರಿಯ `ಓಪನ್ ಸ್ಟ್ರೀಟ್ ಫೆಸ್ಟಿವಲ್’

October 9, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ನಡುವೆ `ಓಪನ್ ಸ್ಟ್ರೀಟ್ ಫೆಸ್ಟಿವಲ್’ ಕಾರ್ಯಕ್ರಮವನ್ನು ಅ.13ರಂದು ಬೆಳಿಗ್ಗೆ 8 ರಿಂದ ರಾತ್ರಿ 9.30ರವರೆಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಮೈಸೂರು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲು ಮುಂದಾಗಿದೆ. ಚಾಮರಾಜಪುರಂನ ಕೃಷ್ಣರಾಜ ಬುಲೇವಾರ್ಡ್ ರಸ್ತೆ(ಮೈಸೂರು ನ್ಯಾಯಾಲಯ)ಯಲ್ಲಿ  `ಓಪನ್ ಸ್ಟ್ರೀಟ್ ಫೆಸ್ಟಿವಲ್’ ಆಯೋಜಿಸಲಾಗಿದೆ. ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಹೊರ ರಾಜ್ಯದ ಪ್ರವಾಸಿಗರು ಮತ್ತು ಯುವ ಸಮೂಹವನ್ನು ಸೆಳೆಯುವ ದೃಷ್ಟಿಯಿಂದ `ಓಪನ್ ಸ್ಟ್ರೀಟ್ ಫೆಸ್ಟಿವಲ್’ ಅನ್ನು ಈ ಬಾರಿಯೂ ಹಮ್ಮಿಕೊಳ್ಳಲಾಗುತ್ತಿದ್ದು, ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ…

ಜಂಬೂ ಸವಾರಿಯಲ್ಲಿ ಸಾಗಲಿವೆ 40ಕ್ಕೂ ಅಧಿಕ ಸ್ತಬ್ಧಚಿತ್ರಗಳು
ಮೈಸೂರು, ಮೈಸೂರು ದಸರಾ

ಜಂಬೂ ಸವಾರಿಯಲ್ಲಿ ಸಾಗಲಿವೆ 40ಕ್ಕೂ ಅಧಿಕ ಸ್ತಬ್ಧಚಿತ್ರಗಳು

October 9, 2018

ಮೈಸೂರು:  ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ, ನಾಡಿನ ಪರಂಪರೆ, ಸಂಸ್ಕೃತಿ, ಗತ ವೈಭವದ ಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸುವ ಸ್ತಬ್ಧ ಚಿತ್ರಗಳು ಸಜ್ಜುಗೊಳ್ಳುತ್ತಿವೆ. ನಾಡಿನ ಕಲೆ, ವಾಸ್ತು ಶಿಲ್ಪ, ಸಂಸ್ಕೃತಿ, ಪ್ರವಾಸೋದ್ಯಮ, ಜಾನಪದ ಹಿನ್ನೆಲೆ, ಹಬ್ಬಗಳ ಆಚರಣೆ, ಸಾಧಕರ ಯಶೋಗಾಥೆಯಂತಹ ಧಾರ್ಮಿಕ ಹಾಗೂ ಐತಿ ಹಾಸಿಕ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವು ದರ ಜೊತೆಗೆ, ಅಂತರ್ಜಲ ರಕ್ಷಣೆ, ಮತದಾನ ಜಾಗೃತಿ, ಕಾನೂನು ಅರಿವು, ಸರ್ಕಾರಗಳ ಕಾರ್ಯಕ್ರಮಗಳ ಬಗ್ಗೆಯೂ ಜಾಗೃತಿ ಮೂಡಿಸುವ 40ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು…

ಮೈನವಿರೇಳಿಸಿದ ದಸರಾ `ಗ್ರಾವೆಲ್ ಫೆಸ್ಟ್’
ಮೈಸೂರು, ಮೈಸೂರು ದಸರಾ

ಮೈನವಿರೇಳಿಸಿದ ದಸರಾ `ಗ್ರಾವೆಲ್ ಫೆಸ್ಟ್’

October 8, 2018

ಮೈಸೂರು: ಅಪಾರ ಸಂಖ್ಯೆಯ ವೀಕ್ಷಕರ ಮುಗಿಲು ಮುಟ್ಟಿದ ಕೇಕೆಯ ನಡುವೆ ದಸರಾ ಮಹೋ ತ್ಸವದ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ `ಗ್ರಾವೆಲ್ ಫೆಸ್ಟ್’ನಲ್ಲಿ ವಿವಿಧ ಬಗೆಯ ರೇಸ್ ಕಾರುಗಳು ಧೂಳೆಬ್ಬಿಸಿ ಅಬ್ಬರಿಸಿ ಗಮನ ಸೆಳೆದವು. ಮೈಸೂರು ಜಿಲ್ಲಾ ಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಅಸ್ಕಾಮ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಬಳಿ ಆಯೋಜಿಸಿದ್ದ `ದಸರಾ ಗ್ರಾವೆಲ್ ಫೆಸ್ಟ್’ನಲ್ಲಿ ವಿವಿಧ ರಾಜ್ಯಗಳೂ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 178 ರೇಸ್ ಕಾರುಗಳು ಧೂಳೆಬ್ಬಿಸಿ, ನೋಡುಗರ ಎದೆ…

ದಸರಾ ಅಂಗವಾಗಿ ‘ಓಪನ್ ಬಸ್’ ಸೇವೆಗೆ ಚಾಲನೆ
ಮೈಸೂರು, ಮೈಸೂರು ದಸರಾ

ದಸರಾ ಅಂಗವಾಗಿ ‘ಓಪನ್ ಬಸ್’ ಸೇವೆಗೆ ಚಾಲನೆ

October 8, 2018

ಮೈಸೂರು:  ಈ ಬಾರಿಯ ದಸರಾ ಮಹೋತ್ಸವದಲ್ಲಿ ತೆರೆದ ಬಸ್‍ನಲ್ಲಿ ಸಂಚರಿಸಿ ಮೈಸೂರು ನಗರದ ಅಂದ-ಚೆಂದವನ್ನು ಕಣ್ತುಂಬಿ ಕೊಳ್ಳಬಹುದು. ಜೊತೆಗೆ 10 ಐಷಾರಾಮಿ ಬಸ್‍ಗಳು ನಗರದ ನಾನಾ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರಯಾಣ ಬೆಳೆಸಲಿದ್ದು, ಇದರಿಂದ ಪ್ರವಾಸಿಗರು ಹಾಗೂ ಸ್ಥಳೀಯರು ತಮ್ಮ ವಾಹನಗಳ ಪಾರ್ಕಿಂಗ್ ಕಿರಿಕಿರಿ ಇಲ್ಲದೆ ಮೈಸೂರಿನ ರಸ್ತೆಗಳಲ್ಲಿ ಸುತ್ತಾಡುವ ಜೊತೆಗೆ ರಮಣೀಯ ತಾಣಗಳಲ್ಲಿ ವಿಹರಿಸಬಹುದಾಗಿದೆ. ದಸರಾ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‍ಟಿಡಿಸಿ), ಪ್ರವಾಸೋದ್ಯಮ ಇಲಾಖೆ ವತಿ ಯಿಂದ ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ…

ಅ.10ರಿಂದ ದಸರಾ ವಿಶೇಷ ವಿಮಾನಯಾನ
ಮೈಸೂರು, ಮೈಸೂರು ದಸರಾ

ಅ.10ರಿಂದ ದಸರಾ ವಿಶೇಷ ವಿಮಾನಯಾನ

October 8, 2018

ಮೈಸೂರು: ಕೆಎಸ್‍ಟಿಡಿಸಿ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿ ಆಶ್ರಯ ದಲ್ಲಿ ಈ ಬಾರಿಯ ದಸರಾಕ್ಕೆ ಅ.10ರಿಂದ 20ರವರೆಗೆ ಮೈಸೂರು-ಬೆಂಗಳೂರು ನಡುವೆ ವಿಶೇಷ ವಿಮಾನಯಾನದ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್‍ಟಿಡಿಸಿ ವ್ಯವ ಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಹೇಳಿದರು. ಏರ್ ಇಂಡಿಯಾ ಅಂಗ ಸಂಸ್ಥೆಯಾದ ಅಲಯನ್ಸ್ ಏರ್ ಸಂಸ್ಥೆಯ 72 ಆಸನ ವ್ಯವಸ್ಥೆಯ ವಿಮಾನಗಳು ಪ್ರಯಾಣ ಸೇವೆ ನೀಡಲಿವೆ. ಟಿಕೆಟ್ ದರಗಳು 999 ರೂ.ಗಳಿಂದ ಆರಂಭವಾಗಲಿವೆ. ಪ್ರತಿ ದಿನ ಮಧ್ಯಾಹ್ನ 2.10ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ…

ದಸರಾ ಗಜ, ಅಶ್ವಪಡೆಗೆ ಪೂರ್ಣ ಪ್ರಮಾಣದ ಸಿಡಿಮದ್ದು ತಾಲೀಮು ಯಶಸ್ವಿ
ಮೈಸೂರು, ಮೈಸೂರು ದಸರಾ

ದಸರಾ ಗಜ, ಅಶ್ವಪಡೆಗೆ ಪೂರ್ಣ ಪ್ರಮಾಣದ ಸಿಡಿಮದ್ದು ತಾಲೀಮು ಯಶಸ್ವಿ

October 8, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜ, ಅಶ್ವಪಡೆಗೆ ಭಾನುವಾರ ಅರಮನೆಯ ವರಾಹ ಗೇಟ್ ಬಳಿಯಿರುವ ವಾಹನ ನಿಲುಗಡೆ ಸ್ಥಳದಲ್ಲಿ ಅಂತಿಮ ಹಂತದಲ್ಲಿ ಪೂರ್ಣ ಪ್ರಮಾಣದ ಸಿಡಿಮದ್ದು ಸಿಡಿಸುವ ತಾಲೀಮನ್ನು ಯಶಸ್ವಿಯಾಗಿ ನಡೆಸಲಾಯಿತು. ಜಂಬೂಸವಾರಿ ಹಾಗೂ ಬನ್ನಿಮಂಟ ಪದ ಪಂಜಿನ ಕವಾಯತು ವೇಳೆ ವಿಜಯದ ಸಂಕೇತವಾಗಿ 21 ಸುತ್ತು ಕುಶಾಲತೋಪು ಸಿಡಿಸುವ ಪರಂಪರೆಯಿದ್ದು, ಈ ಹಿನ್ನೆಲೆ ಯಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಜನಸಂದಣಿಯ ನಡುವೆ ಸಾಗಲಿರುವ ಆನೆ ಹಾಗೂ ಕುದುರೆಗಳು ಕುಶಾಲ ತೋಪಿನ ಶಬ್ದಕ್ಕೆ ಹೆದರದಂತೆ ತರಬೇತಿ ನೀಡುವು…

1 7 8 9
Translate »