ಮೈಸೂರು: ಕೆಎಸ್‍ಟಿಡಿಸಿ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿ ಆಶ್ರಯ ದಲ್ಲಿ ಈ ಬಾರಿಯ ದಸರಾಕ್ಕೆ ಅ.10ರಿಂದ 20ರವರೆಗೆ ಮೈಸೂರು-ಬೆಂಗಳೂರು ನಡುವೆ ವಿಶೇಷ ವಿಮಾನಯಾನದ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್‍ಟಿಡಿಸಿ ವ್ಯವ ಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಹೇಳಿದರು.
ಏರ್ ಇಂಡಿಯಾ ಅಂಗ ಸಂಸ್ಥೆಯಾದ ಅಲಯನ್ಸ್ ಏರ್ ಸಂಸ್ಥೆಯ 72 ಆಸನ ವ್ಯವಸ್ಥೆಯ ವಿಮಾನಗಳು ಪ್ರಯಾಣ ಸೇವೆ ನೀಡಲಿವೆ. ಟಿಕೆಟ್ ದರಗಳು 999 ರೂ.ಗಳಿಂದ ಆರಂಭವಾಗಲಿವೆ.
ಪ್ರತಿ ದಿನ ಮಧ್ಯಾಹ್ನ 2.10ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹೊರಡಲಿದ್ದು, ಅದೇ ಮಧ್ಯಾಹ್ನ 3ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಬರಲಿರುವ ವಿಮಾನವು ಬಳಿಕ 3.30ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಸಂಜೆ 4.20ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪಲಿದೆ ಎಂದರು.