ಮೈಸೂರು ದಸರಾ

ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ದಸರಾ ಮಹೋತ್ಸವಕ್ಕೆ ಚಾಲನೆ
ಮೈಸೂರು, ಮೈಸೂರು ದಸರಾ

ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ದಸರಾ ಮಹೋತ್ಸವಕ್ಕೆ ಚಾಲನೆ

October 11, 2018

ಮೈಸೊರು: ವಿಶ್ವೆ ಖ್ಯಾತಿಯ ಮೈಸೊರು ದಸರಾ ಮಹೋತ್ಸವಕ್ಕೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥರೂ ಆದ ಹಸೆರಾಂತ ಲೇಖಕಿ ಡಾ.ಸುಧಾಮೂರ್ತಿ ಅವರು ಇಂದು ವಿಧ್ಯುಕ್ತ ಚಾಲನೆ ನೀಡಿದರು. ಚಾಮುಂಡೀಶ್ವೆರಿ ಸನ್ನಿಧಿಯಲ್ಲಿ ಅಲಂಕೃತ ಬೆಳ್ಳಿ ರಥದಲ್ಲಿ ವಸ್ತ್ರಾಭರಣಗಳಿಂದ ಅಲಂಕೃತಳಾಗಿದ್ದ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೀಶ್ವೆರಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಶುಭ ತುಲಾ ಲಗ್ನದಲ್ಲಿಇಂದು ಬೆಳಿಗ್ಗೆ 7.30 ಗಂಟೆಗೆ ಶ್ರೀಮತಿ ಸುಧಾಮೂರ್ತಿ ಅವರು 2018ರ ನವರಾತ್ರಿ ಉತ್ಸವವನ್ನು ಉದ್ಘಾಟಿಸಿದರು ಆ ಮೂಲಕ 408 ವರ್ಷಗಳ ಇತಿಹಾಸ ಹೊಂದಿರುವ…

ಖಾಸಗಿ ದರ್ಬಾರ್ ಆರಂಭ
ಮೈಸೂರು, ಮೈಸೂರು ದಸರಾ

ಖಾಸಗಿ ದರ್ಬಾರ್ ಆರಂಭ

October 11, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯುವುದರೊಂದಿಗೆ ಅರಮನೆಯಲ್ಲಿ ಖಾಸಗಿ ದರ್ಬಾರ್ ಸಹ ಬುಧವಾರದಿಂದ ಆರಂಭವಾಯಿತು. ನವರಾತ್ರಿಯ ಮೊದಲ ದಿನವಾದ ಇಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನ ಖಚಿತ ಸಿಂಹಾಸನಾರೂಢರಾಗಿ ಸಂಪ್ರದಾಯದಂತೆ ಕೆಲ ವಿಧಿ-ವಿಧಾನಗಳನ್ನು ಪೂರೈಸಿ, ಗಮನ ಸೆಳೆದರು. ಅರಮನೆಯ ದರ್ಬಾರ್ ಹಾಲ್‍ನಲ್ಲಿ ಇಂದು ಬೆಳಗಿನಿಂದ ಮಧ್ಯಾಹ್ನ ದವರೆಗೆ ವಿವಿಧ ಪೂಜಾ ಕೈಂಕರ್ಯ ಗಳಲ್ಲಿ ರಾಜ ವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾಕುಮಾರಿ ಒಡೆಯರ್ ಪಾಲ್ಗೊಂಡು, ಖಾಸಗಿ ದರ್ಬಾರ್‌ಗೆ…

ಮೈಸೂರು ಅರಮನೆ ಅಂಗಳದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭ
ಮೈಸೂರು, ಮೈಸೂರು ದಸರಾ

ಮೈಸೂರು ಅರಮನೆ ಅಂಗಳದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭ

October 11, 2018

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮೈಸೂರು ವಿಶ್ವವಿದ್ಯಾನಿಲಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡುವ ಸಂಬಂಧ ಸದ್ಯದಲ್ಲೇ ತೀರ್ಮಾನಿಸುವುದಾಗಿ ತಿಳಿಸಿದರು. ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದ ಅಂಬಾವಿಲಾಸ ಅರಮನೆ ಮುಂಭಾಗದ ಭವ್ಯ ವೇದಿಕೆಯಲ್ಲಿ ಮೊಳಗಿದ ವಿಜಯದ ಸಂಕೇತವಾದ ಕಹಳೆ ಸದ್ದಿನ ನಡುವೆ, ದೀಪ ಬೆಳಗಿಸಿ, ನಗಾರಿ ಬಾರಿಸುವ ಮೂಲಕ ನವರಾತ್ರಿ ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು. ಮೈಸೂರು ರಾಜಮಹಾರಾಜರು ನಾಡಿಗೆ ನೀಡಿರುವ…

ದಸರಾ ಉದ್ಘಾಟನೆ ವೇದಿಕೆಯಲ್ಲಿ ಅಪರಿಚಿತ ಮಹಿಳೆ ಪ್ರತ್ಯಕ್ಷ!
ಮೈಸೂರು, ಮೈಸೂರು ದಸರಾ

ದಸರಾ ಉದ್ಘಾಟನೆ ವೇದಿಕೆಯಲ್ಲಿ ಅಪರಿಚಿತ ಮಹಿಳೆ ಪ್ರತ್ಯಕ್ಷ!

October 11, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಹಾಗೂ ಇನ್ನಿತರ ಸಚಿವರು, ಗಣ್ಯರು ಪಾಲ್ಗೊಂಡಿದ್ದ ದಸರಾ ಉದ್ಘಾಟನಾ ಸಮಾರಂಭದಲ್ಲಿ ಆಹ್ವಾನಿತರಲ್ಲದ ಅಪರಿಚಿತ ಮಹಿಳೆ ಯೊಬ್ಬರು ಗಣ್ಯರ ಸಾಲಿನಲ್ಲೇ ಆಸೀನರಾಗಿ ಅಚ್ಚರಿ ಮೂಡಿಸಿದ ಪ್ರಸಂಗ ಇಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆಯಿತು. ಮುಖ್ಯಮಂತ್ರಿಗಳೊಂದಿಗೆ ಚಾಮುಂಡೇಶ್ವರಿ ದರ್ಶನ ಮಾಡಿ ಕೊಂಡು ಹಿಂದಿರುಗುತ್ತಿದ್ದ ಸುಧಾಮೂರ್ತಿ ಅವರಿಗೆ ಎದುರಾದ ಮಹಿಳೆ, ನಗೆ ಬೀರಿದರು. ನಂತರ ಆ ಮಹಿಳೆ ಡಾ.ಸುಧಾ ಮೂರ್ತಿ ಹಾಗೂ ಮುಖ್ಯಮಂತ್ರಿಗಳೊಂದಿಗೆ ವೇದಿಕೆಯನ್ನೇರಿ ನೇರವಾಗಿ ಪಕ್ಕದಲ್ಲೇ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿದ್ದ…

ದಸರಾ ನಾಡಕುಸ್ತಿ ಪಂದ್ಯಾವಳಿಗೆ ಚಾಲನೆ
ಮೈಸೂರು, ಮೈಸೂರು ದಸರಾ

ದಸರಾ ನಾಡಕುಸ್ತಿ ಪಂದ್ಯಾವಳಿಗೆ ಚಾಲನೆ

October 11, 2018

ಮೈಸೂರು: ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆರಂಭ ವಾಗಿರುವ ದಸರಾ ನಾಡಕುಸ್ತಿ ಪಂದ್ಯಾವಳಿಗೆ ಬುಧವಾರ ಚಾಲನೆ ನೀಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಹಾಗೂ ಕರ್ನಾಟಕ ರೆಸ್ಲಿಂಗ್ ಅಸೋಸಿಯೇಷನ್ ಸಹಯೋಗದೊಂದಿಗೆ ಅ.10ರಿಂದ 15ರವರೆಗೆ ನಡೆಯುವ ದಸರಾ ನಾಡಕುಸ್ತಿ ಪಂದ್ಯಾವಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪೈಲ್ವಾನರನ್ನು ಅಖಾಡಕ್ಕೆ ಬಿಡುವ ಮೂಲಕ ಕುಸ್ತಿಗೆ ಚಾಲನೆ ನೀಡಿದರು. ನಂತರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ,…

ಬೆಳಕಿನ ಚಿತ್ತಾರ ಹಸಿರು ಚಪ್ಪರ ದಸರಾ ದೀಪಾಲಂಕಾರ-2018
ಮೈಸೂರು, ಮೈಸೂರು ದಸರಾ

ಬೆಳಕಿನ ಚಿತ್ತಾರ ಹಸಿರು ಚಪ್ಪರ ದಸರಾ ದೀಪಾಲಂಕಾರ-2018

October 11, 2018

ಮೈಸೂರು: ಬೆಳಕಿನ ವೈಭವದಲ್ಲಿ ಮೂಡಿ ಬಂದ ಹಸಿರು ಚಪ್ಪರ… ವಿದ್ಯುತ್ ದೀಪಗಳ ಅಲಂಕಾರದಲ್ಲಿ ಮುಳುಗಿದ ಮೈಸೂರು… ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಬುಧವಾರ ನಡೆದ ದಸರಾ ದೀಪಾಲಂಕಾರ ಉದ್ಘಾಟನೆಯ ವೇಳೆ ಈ ಬಗೆಯ ಬೆಳಕಿನ ವೈಭವತೆಯ ನೋಟ ಕಂಡುಬಂದಿತು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಿಮೋಟ್ ಕೀ ಒತ್ತುವ ಮೂಲಕ ‘ದಸರಾ ದೀಪಾಲಂಕಾರ-2018’ಕ್ಕೆ ಚಾಲನೆ ನೀಡಿದರು. ಸಯ್ಯಾಜಿರಾವ್ ರಸ್ತೆಯಲ್ಲಿ ನಿರ್ಮಿಸಿರುವ ಹಸಿರು ಚಪ್ಪರ ಎಲ್ಲರನ್ನು ಕೈ ಬೀಸಿ ಕರೆಯುತ್ತಿದೆ. ತಂತ್ರಜ್ಞಾನದ ಬಳಕೆಯಿಂದ ರಿಮೋಟ್ ಕೀ ಒತ್ತುತ್ತಿದಂತೆ ರಸ್ತೆಯಲ್ಲಿ ಹಸಿರು ದೀಪದ…

ದಸರಾ ವಿಶೇಷ ಬಸ್‍ಗಳಿಗೆ ಸಿಎಂ ಹಸಿರು ನಿಶಾನೆ
ಮೈಸೂರು, ಮೈಸೂರು ದಸರಾ

ದಸರಾ ವಿಶೇಷ ಬಸ್‍ಗಳಿಗೆ ಸಿಎಂ ಹಸಿರು ನಿಶಾನೆ

October 11, 2018

ಮೈಸೂರು: ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ಪ್ರವಾಸಿಗರ ಅನುಕೂಲತೆ ದೃಷ್ಟಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮೈಸೂರಿನಿಂದ ಹೆಚ್ಚುವರಿ 50 ವಿಶೇಷ ಬಸ್‍ಗಳನ್ನು ರಸ್ತೆಗಿಳಿಸಿದೆ. ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಬಸ್‍ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಕೆಎಸ್ ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್, ವಿಭಾಗೀಯ ನಿಯಂತ್ರಣಾಧಿಕಾರಿ…

ದಸರಾ ಚಲನ ಚಿತ್ರೋತ್ಸವಕ್ಕೆ ಸಿಎಂ ಕುಮಾರಸ್ವಾಮಿ ಚಾಲನೆ
ಮೈಸೂರು, ಮೈಸೂರು ದಸರಾ

ದಸರಾ ಚಲನ ಚಿತ್ರೋತ್ಸವಕ್ಕೆ ಸಿಎಂ ಕುಮಾರಸ್ವಾಮಿ ಚಾಲನೆ

October 11, 2018

ಮೈಸೂರು: ಚಿತ್ರರಂಗ ಸಮಾಜ ಪರಿವರ್ತನೆಗೆ ಪರಿಣಾಮಕಾರಿ ಮಾಧ್ಯಮ. ಹೀಗಾಗಿ ಸಮಾಜವನ್ನು ತಪ್ಪು ದಾರಿಗೆ ಎಳೆಯದಂತೆ ಸಿನಿಮಾ ಮಾಧ್ಯಮ ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಮೈಸೂರಿನ ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವ ಉಪಸಮಿತಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮೈಸೂರು ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದ ಉನ್ನತ ಬದಲಾವಣೆಗೆ ಸಿನಿಮಾ ಮಾಧ್ಯಮ ಪರಿಣಾಮಕಾರಿ. ಹೀಗಾಗಿ ಸಿನಿಮಾಗಳಲ್ಲಿ ಮಚ್ಚು, ಲಾಂಗುಗಳೆಂಬ ಹಿಂಸೆಯ ಸನ್ನಿವೇಶಗಳನ್ನು ಕಡಿಮೆ ಮಾಡುವ ಅಗತ್ಯವಿದೆ. ಸಮಾಜದಲ್ಲಿ ಶಾಂತಿ ಸುವ್ಯ ವಸ್ಥೆ ನೆಲೆಸುವಂತೆ ಸಿನಿಮಾ…

ಸಿಎಂ ಕುಮಾರಸ್ವಾಮಿ, ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮರಿಂದ ದಸರಾ ಕ್ರೀಡಾಕೂಟಕ್ಕೆ ಚಾಲನೆ
ಮೈಸೂರು, ಮೈಸೂರು ದಸರಾ

ಸಿಎಂ ಕುಮಾರಸ್ವಾಮಿ, ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮರಿಂದ ದಸರಾ ಕ್ರೀಡಾಕೂಟಕ್ಕೆ ಚಾಲನೆ

October 11, 2018

ಕ್ರೀಡಾಪಟುಗಳಿಗೆ ಸರ್ಕಾರದಿಂದ ಅಗತ್ಯ ನೆರವು: ಸಿಎಂ ಭರವಸೆ ಮೈಸೂರು:  ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋ ಜಿಸಿರುವ ದಸರಾ ಕ್ರೀಡಾಕೂಟಕ್ಕೆ ಬುಧ ವಾರ ಚಾಲನೆ ನೀಡಲಾಯಿತು. ದಸರಾ ಕ್ರೀಡಾ ಉಪಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆ ಸಹ ಯೋಗದಲ್ಲಿ ಇಂದಿನಿಂದ ಆಯೋಜಿ ಸಿರುವ ದಸರಾ ಕ್ರೀಡಾಕೂಟಕ್ಕೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಅಂತಾರಾಷ್ಟ್ರೀಯ ಅಥ್ಲೀಟ್ ಎಂ.ಆರ್. ಪೂವಮ್ಮ ಚಾಲನೆ ನೀಡಿದರು. ಪಥಸಂಚಲನ: ಕ್ರೀಡಾ ಸಮವಸ್ತ್ರ ಧರಿಸಿದ್ದ ವೇಟ್ ಲಿಫ್ಟಿಂಗ್, ವಾಲಿಬಾಲ್,…

ದಸರಾ ಆಹಾರ ಮೇಳಕ್ಕೆ ಚಾಲನೆ ಕಾದು ಕುಳಿತಿದ್ದ ಭೋಜನ ಪ್ರಿಯರಿಗೆ ಸುಗ್ಗಿ
ಮೈಸೂರು, ಮೈಸೂರು ದಸರಾ

ದಸರಾ ಆಹಾರ ಮೇಳಕ್ಕೆ ಚಾಲನೆ ಕಾದು ಕುಳಿತಿದ್ದ ಭೋಜನ ಪ್ರಿಯರಿಗೆ ಸುಗ್ಗಿ

October 11, 2018

ಮೈಸೂರು,: ದಸರಾ ಮಹೋತ್ಸವದಲ್ಲಿ ಆಹಾರ ಪ್ರಿಯರ ಆಕರ್ಷಕ ತಾಣವಾಗುವ ಆಹಾರ ಮೇಳ ಬುಧವಾರ ಚಾಲನೆ ಪಡೆದುಕೊಂಡಿತು. ರಾಜ್ಯದ ನಾನಾ ಭಾಗ ಹಾಗೂ ವಿವಿಧ ರಾಜ್ಯಗಳ ವೈವಿಧ್ಯಮಯ ಆಹಾರಗಳ ಜೊತೆಗೆ ಈ ಬಾರಿ ವಿದೇಶಗಳ ಆಹಾರ ಶೈಲಿಯೂ ಘಮಘಮಿಸಲಿದೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಮೀಪದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಹೆಲಿಪ್ಯಾಡ್‍ನ ಮುಡಾ ಮೈದಾನದಲ್ಲಿ ಇಂದಿನಿಂದ ಆಹಾರ ಮೇಳ ಚಾಲನೆ ಪಡೆದುಕೊಂಡಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಅ.18ರವರೆಗೆ ಹಾಗೂ ಲಲಿತ ಮಹಲ್ ಹೆಲಿಪ್ಯಾಡ್‍ನ…

1 5 6 7 8 9
Translate »