ಸಿಎಂ ಕುಮಾರಸ್ವಾಮಿ, ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮರಿಂದ ದಸರಾ ಕ್ರೀಡಾಕೂಟಕ್ಕೆ ಚಾಲನೆ
ಮೈಸೂರು, ಮೈಸೂರು ದಸರಾ

ಸಿಎಂ ಕುಮಾರಸ್ವಾಮಿ, ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮರಿಂದ ದಸರಾ ಕ್ರೀಡಾಕೂಟಕ್ಕೆ ಚಾಲನೆ

October 11, 2018

ಕ್ರೀಡಾಪಟುಗಳಿಗೆ ಸರ್ಕಾರದಿಂದ ಅಗತ್ಯ ನೆರವು: ಸಿಎಂ ಭರವಸೆ
ಮೈಸೂರು:  ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋ ಜಿಸಿರುವ ದಸರಾ ಕ್ರೀಡಾಕೂಟಕ್ಕೆ ಬುಧ ವಾರ ಚಾಲನೆ ನೀಡಲಾಯಿತು.

ದಸರಾ ಕ್ರೀಡಾ ಉಪಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆ ಸಹ ಯೋಗದಲ್ಲಿ ಇಂದಿನಿಂದ ಆಯೋಜಿ ಸಿರುವ ದಸರಾ ಕ್ರೀಡಾಕೂಟಕ್ಕೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಅಂತಾರಾಷ್ಟ್ರೀಯ ಅಥ್ಲೀಟ್ ಎಂ.ಆರ್. ಪೂವಮ್ಮ ಚಾಲನೆ ನೀಡಿದರು.

ಪಥಸಂಚಲನ: ಕ್ರೀಡಾ ಸಮವಸ್ತ್ರ ಧರಿಸಿದ್ದ ವೇಟ್ ಲಿಫ್ಟಿಂಗ್, ವಾಲಿಬಾಲ್, ಟೆಕ್ವಾಂಡೋ, ಖೋಖೋ, ಕಬಡ್ಡಿ, ಹ್ಯಾಂಡ್ ಬಾಲ್, ಜಿಮ್ನಾಸ್ಟಿಕ್, ಫುಟ್‍ಬಾಲ್ ಮತ್ತು ಫೆನ್ಸಿಂಗ್ ತಂಡಗಳ ಕ್ರೀಡಾಪಟುಗಳು ಪಥ ಸಂಚಲನ ನಡೆಸಿ ಮುಖ್ಯಮಂತ್ರಿಗಳಿಗೆ ಗೌರವ ಸಲ್ಲಿಸಿದರು.

ಚಾಮುಂಡಿಬೆಟ್ಟದ ಶ್ರೀ ಚಾಮುಂಡೇ ಶ್ವರಿ ದೇವಸ್ಥಾನದಲ್ಲಿ ಉದ್ಘಾಟನೆಗೊಂಡ ಕ್ರೀಡಾ ಜ್ಯೋತಿಯು ಚಾಮುಂಡಿಬೆಟ್ಟದಿಂದ ನಗರದ ವಿವಿಧ ಬಡಾವಣೆಗಳ ಮೂಲಕ 4 ಗಂಟೆ ವೇಳೆಗೆ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಆಗಮಿಸಿತು.

ಕ್ರೀಡಾಜ್ಯೋತಿ ಸಂಚಾಲಕ ಡಾ.ಎಂ.ಪಿ. ವರ್ಷ ಹಾಗೂ ತಂಡದವರು ಕ್ರೀಡಾಜ್ಯೋತಿ ಯನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿ ದರು. ಕ್ರೀಡಾಕೂಟ ಉದ್ಘಾಟಿಸಿದ್ದೇನೆ ಎಂದು ಮುಖ್ಯಮಂತ್ರಿಯವರು ಘೋಷಿಸಿದ ಬಳಿಕ ಬಲೂನ್‍ಗಳನ್ನು ಹಾರಿ ಬಿಡಲಾಯಿತು.

ನಂತರ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ಕ್ರೀಡೆಯ ಬಗ್ಗೆ ಯುವಕರಲ್ಲಿ ಹೆಚ್ಚು ಆಸಕ್ತಿ ಬೆಳೆಸಲು ಈ ಬಾರಿ ದಸರಾ ಕ್ರೀಡಾಕೂಟವನ್ನು `ಮುಖ್ಯ ಮಂತ್ರಿ ಕಪ್’ ಕ್ರೀಡಾಕೂಟವಾಗಿ ನಡೆಸ ಲಾಗುತ್ತಿದ್ದು, 4,500 ಕ್ರೀಡಾಪಟುಗಳು ಭಾಗವಹಿಸಿದ್ದಾರೆ ಎಂದು ಹೇಳಿದರು.

ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕಾದರೆ ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ರಾಜ್ಯದಲ್ಲಿ ಕ್ರೀಡೆಯನ್ನು ಉತ್ತೇಜಿಸಲು 7 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕ್ರೀಡಾ ಕೂಟದಲ್ಲಿ ಜಯಗಳಿಸಿದವರಿಗೆ ನಗದು ಬಹುಮಾನ ಮತ್ತು ಪಾಲ್ಗೊಂಡಿದ್ದ ಎಲ್ಲರಿಗೂ ಶೂ, ಸಮವಸ್ತ್ರ ನೀಡಲು 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು. ಈ ವೇಳೆ ಕ್ರೀಡಾಪಟುಗಳು ಶೂ ಕೊಟ್ಟಿಲ್ಲ ಎಂದಿದ್ದಕ್ಕೆ ಮುಖ್ಯಮಂತ್ರಿ ಗಳು ಪ್ರತಿಕ್ರಿಯಿಸಿ, ಈಗ ಕೊಟ್ಟಿದ್ದಾರೆ ಎಂದಿಲ್ಲ. ಮುಂದಿನ ದಿನಗಳಲ್ಲಿ ಕೊಡ ಲಾಗುವುದು ಎಂದು ಹೇಳಿದರು.

ಕ್ರೀಡಾ ವಸತಿ ಗೃಹಗಳ ಸ್ಥಾಪನೆ ಮತ್ತು ಗ್ರಾಮೀಣ ಪ್ರದೇಶದಿಂದ ಬರುವ ಕ್ರೀಡಾ ಪಟುಗಳಿಗೆ ವಿಶೇಷ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗು ವುದು ಎಂದ ಅವರು, ಮುಂದಿನ ವರ್ಷ ದಿಂದ ಬಜೆಟ್‍ನಲ್ಲಿ ಹೆಚ್ಚಿನ ಹಣವನ್ನು ಮೀಸಲಿಟ್ಟು ಕ್ರೀಡೆಗೆ ಹೆಚ್ಚಿನ ಪೆÇ್ರೀತ್ಸಾಹ ನೀಡಲಾಗುವುದು ಎಂದು ಹೇಳಿದರು.

ಅಂತಾರಾಷ್ಟ್ರೀಯ ಅಥ್ಲೀಟ್ ಎಂ.ಆರ್. ಪೂವಮ್ಮ ಮಾತನಾಡಿ, ನಾನು ಒಮ್ಮೆಯೂ ದಸರಾದಲ್ಲಿ ಪಾಲ್ಗೊಂಡಿರಲಿಲ್ಲ. ಇಂದು ದಸರಾ ಕ್ರೀಡಾಕೂಟ ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ಈ ಕ್ರೀಡಾಕೂಟವು ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯಾಗಿದೆ. ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು ತಿಳಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವರಾದ ಸಾ.ರಾ. ಮಹೇಶ್, ಎನ್.ಮಹೇಶ್, ಶಾಸಕ ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಕೆ.ಗೋವಿಂದರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್, ಕರ್ನಾಟಕ ಒಲಂಪಿಕ್ ಸಂಸ್ಥೆಯ ಅನಂತರಾಜು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಸಿಇಒ ಕೆ.ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

Translate »