ಮೈಸೂರು: ಬೆಳಕಿನ ವೈಭವದಲ್ಲಿ ಮೂಡಿ ಬಂದ ಹಸಿರು ಚಪ್ಪರ… ವಿದ್ಯುತ್ ದೀಪಗಳ ಅಲಂಕಾರದಲ್ಲಿ ಮುಳುಗಿದ ಮೈಸೂರು… ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಬುಧವಾರ ನಡೆದ ದಸರಾ ದೀಪಾಲಂಕಾರ ಉದ್ಘಾಟನೆಯ ವೇಳೆ ಈ ಬಗೆಯ ಬೆಳಕಿನ ವೈಭವತೆಯ ನೋಟ ಕಂಡುಬಂದಿತು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಿಮೋಟ್ ಕೀ ಒತ್ತುವ ಮೂಲಕ ‘ದಸರಾ ದೀಪಾಲಂಕಾರ-2018’ಕ್ಕೆ ಚಾಲನೆ ನೀಡಿದರು. ಸಯ್ಯಾಜಿರಾವ್ ರಸ್ತೆಯಲ್ಲಿ ನಿರ್ಮಿಸಿರುವ ಹಸಿರು ಚಪ್ಪರ ಎಲ್ಲರನ್ನು ಕೈ ಬೀಸಿ ಕರೆಯುತ್ತಿದೆ. ತಂತ್ರಜ್ಞಾನದ ಬಳಕೆಯಿಂದ ರಿಮೋಟ್ ಕೀ ಒತ್ತುತ್ತಿದಂತೆ ರಸ್ತೆಯಲ್ಲಿ ಹಸಿರು ದೀಪದ ಚಪ್ಪರ ತನ್ನ ಹಸಿರು ಬೆಳಕನ್ನು ಎಲ್ಲೆಡೆ ಚೆಲ್ಲಿತು. ನಾನಾ ಬಗೆಯಲ್ಲಿ ಬೆಳಕು ಸೂಸುವ ವಿವಿಧ ಬಗೆಯ ವಿನ್ಯಾಸದ ಮನಮೋಹಕ ಬೆಳಕಿನ ವೈಭವ ನೋಡುಗರ ಕಣ್ಣುಗಳಲ್ಲಿ ಹಬ್ಬದ ಸಡಗರ ತಂದಿದೆ.
ದಸರಾ ದೀಪಾಲಂಕಾರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಈ ಬಾರಿಯ ದಸರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಹಲವಾರು ಇಲಾಖೆಗಳು ಅಪಾರ ಕೊಡುಗೆಯನ್ನು ನೀಡಿವೆ. ನಾಡಹಬ್ಬದ ಪ್ರಮುಖ ಆಕ ರ್ಷಣೆ ದೀಪಾಲಂಕಾರವಾಗಿದ್ದು, ಈ ಬಾರಿ ಹೆಚ್ಚು ಒತ್ತು ನೀಡ ಲಾಗಿದೆ. ಕಡಿಮೆ ವಿದ್ಯುತ್‍ನಿಂದ 50 ಕಿಲೋ ಮೀಟರ್ ರಸ್ತೆ, ವೃತ್ತಗಳು, ಪ್ರತಿಕೃತಿಗಳನ್ನು ಅಲಂಕರಿಸಲಾಗಿದೆ. ಮೈಸೂರಿನ ಜನತೆ ಎಲ್ಲಾ ರೀತಿಯ ಸಹಕಾರವನ್ನು ನನಗೆ ನೀಡಿದ್ದಾರೆ. ಎಲ್ಲರಿಗೂ ಶುಭವಾಗಲಿ ಎಂದು ಸಿಎಂ ಕುಮಾರಸ್ವಾಮಿ ಹಾರೈಸಿದರು.
ಇದೇ ಸಂದರ್ಭದಲ್ಲಿ ಚೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎನ್.ಗೋಪಾಲಕೃಷ್ಣ ಅವರನ್ನು ಅಭಿನಂದಿಸಲಾಯಿತು.
ತಾಂತ್ರಿಕ ನಿರ್ದೇಶಕ ಎನ್. ನರಸಿಂಹೇಗೌಡ, ಅಧೀಕ್ಷಕ ಇಂಜಿನಿ ಯರ್ ಕೆ.ಎಂ.ಮುನಿಗೋಪಾಲರಾಜು ಮುಖ್ಯ ಇಂಜಿನಿಯರ್ ಅಸ್ತಬಾ ಅಹಮದ್, ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಎಸ್. ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.