ಮೈಸೂರು

ಕೋಮುವಾದಿಗಳನ್ನು ದೂರವಿಡಲು ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಿವೆ
ಮೈಸೂರು

ಕೋಮುವಾದಿಗಳನ್ನು ದೂರವಿಡಲು ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಿವೆ

March 25, 2019

ಮೈಸೂರು: ಕೋಮುವಾದಿಗಳನ್ನು ದೂರ ವಿಡಲು ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಿವೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಇಂದಿಲ್ಲಿ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸಿದ ನಂತರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ಹಾಗೂ ಕೋಮುವಾದಿಗಳ ಪರವಾಗಿರುವ ಬಿಜೆಪಿಯನ್ನು ದೂರವಿಡುವ ಸಲುವಾಗಿ ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಈ ಚುನಾವಣೆಯಲ್ಲಿ ಒಂದಾಗಿವೆ ಎಂದರು. ರಾಜ್ಯದಲ್ಲಿ ಶೇಕಡ 48 ರಷ್ಟು ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರಿದ್ದರೂ ಬಿಜೆಪಿ ಚುನಾವಣೆಯಲ್ಲಿ ಒಂದೇ ಅಭ್ಯರ್ಥಿ ಪ್ರಾತಿನಿಧ್ಯ ನೀಡಿರುವುದೇ ಅದಕ್ಕೆ…

ನಾಗರಹೊಳೆ ಅಭಯಾರಣ್ಯದಲ್ಲಿ  ಹೆಣ್ಣು ಹುಲಿ ಕಳೇಬರ ಪತ್ತೆ
ಮೈಸೂರು

ನಾಗರಹೊಳೆ ಅಭಯಾರಣ್ಯದಲ್ಲಿ ಹೆಣ್ಣು ಹುಲಿ ಕಳೇಬರ ಪತ್ತೆ

March 25, 2019

ಮೈಸೂರು: ನಾಗರಹೊಳೆ ಅಭಯಾರಣ್ಯದಲ್ಲಿ ಹೆಣ್ಣು ಹುಲಿ ಕಳೇಬರ ಪತ್ತೆಯಾಗಿದೆ. ನಾಗರ ಹೊಳೆ ಕುಂತೂರು ಬೀಟ್‍ನಲ್ಲಿ ಸುಮಾರು 9 ವರ್ಷದ ಹೆಣ್ಣು ಹುಲಿ ದೇಹವಿರುವ ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡು ಇದು ಸತ್ತಿರಬಹುದು ಎಂದು ಶಂಕಿಸಲಾಗಿದೆ. ಇದರ ಕತ್ತಿನ ಮೂಳೆ ಮುರಿದಿದೆ. ತಲೆ ಬುರುಡೆ ಬಿರುಕು ಬಿಟ್ಟಿದ್ದು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ. ಮರ ಣೋತ್ತರ ಪರೀಕ್ಷೆ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು. ಹುಲಿ ಸಂತತಿ ಹೆಚ್ಚಳ: ನಾಗರಹೊಳೆ…

ಆಟ್ರ್ಜ್ ಗ್ಯಾಲರಿಯಲ್ಲಿ ವೈವಿಧ್ಯತೆಯಿಂದ  ಕೂಡಿದ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ
ಮೈಸೂರು

ಆಟ್ರ್ಜ್ ಗ್ಯಾಲರಿಯಲ್ಲಿ ವೈವಿಧ್ಯತೆಯಿಂದ ಕೂಡಿದ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ

March 25, 2019

ಮೈಸೂರು: ಮೈಸೂರಿನ ಗೋಕುಲಂ 3ನೇ ಹಂತದಲ್ಲಿ ರುವ ಆಟ್ರ್ಜ್ ಗ್ಯಾಲರಿಯಲ್ಲಿ ವೈವಿಧ್ಯ ಮಯ ಕಲಾಕೃತಿಗಳ ಅನಾವರಣವಾಗಿದೆ. ಕಲಾವಿದರು ಹಾಗೂ ಕಲಾಸಕ್ತರನ್ನು ಒಗ್ಗೂಡಿಸುವುದರೊಂದಿಗೆ ಕಲೆಯನ್ನು ಪೋಷಿಸುವ ಮಹತ್ವದ ಉದ್ದೇಶದಿಂದ ಏರ್ಪಡಿಸಲಾಗಿರುವ `ಮಾರ್ಚ್ ಕಲಾ ಪ್ರದರ್ಶನ’ದಲ್ಲಿ ವಿವಿಧ ಸೃಜನಾತ್ಮಕ ಕಲಾವಿದರ ಮನಮೋಹಕ ಚಿತ್ರಕತೆ, ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಇಂದಿನಿಂದ ಏ.13ರವರೆಗೆ ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ಕಲಾ ಸೊಬ ಗನ್ನು ಕಣ್ತುಂಬಿಕೊಳ್ಳಬಹುದಾಗಿದ್ದು, ಉಚಿತ ಪ್ರವೇಶ ಕಲ್ಪಿಸಲಾಗಿದೆ. ಕಲಾವಿದರ ಮನದಾಳ: ಕಣ್ಣಿಗೆ ಕಂಡದ್ದು, ಎಲ್ಲೋ ಕೇಳಿದ್ದು, ಮನದಲ್ಲಿ ಮೂಡಿ ದ್ದನ್ನು ಸಾಹಿತಿಗಳು ಅಕ್ಷರದಲ್ಲಿ…

ಮೈಸೂರು ವಿವಿಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನಾಚರಣೆ
ಮೈಸೂರು

ಮೈಸೂರು ವಿವಿಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನಾಚರಣೆ

March 25, 2019

ಮೈಸೂರು: ಮೈಸೂರು ವಿವಿಯಲ್ಲಿ ಶಿಕ್ಷಣ ಪಡೆದ ವಿದೇಶಿ ವಿದ್ಯಾರ್ಥಿಗಳು ತಮ್ಮ ದೇಶಗಳಿಗೆ ಮರಳಿದ ಬಳಿಕ ಮಾದರಿ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅಭಿವ್ಯಕ್ತಪಡಿಸಿದರು. ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮೈಸೂರು ವಿವಿ ಅಂತರ ರಾಷ್ಟ್ರೀಯ ಕೇಂದ್ರ ಮತ್ತು ಅಂತರ ರಾಷ್ಟ್ರೀಯ ವಿದ್ಯಾರ್ಥಿಗಳ ಸಂಘದ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾ ಡಿದ ಅವರು, ಮೈಸೂರು ವಿವಿಯಲ್ಲಿ 58ಕ್ಕೂ ಹೆಚ್ಚು ದೇಶಗಳ 700 ವಿದ್ಯಾರ್ಥಿ ಗಳು ವಿವಿಧ ವಿಷಯಗಳಲ್ಲಿ…

ಜಾಗತಿಕ ವಿದ್ಯಮಾನಗಳನ್ನಾಧರಿಸಿ  ಭಾರತ ತನ್ನ ಪ್ರಭಾವ ವೃದ್ಧಿಸಿಕೊಳ್ಳಬೇಕಿದೆ
ಮೈಸೂರು

ಜಾಗತಿಕ ವಿದ್ಯಮಾನಗಳನ್ನಾಧರಿಸಿ ಭಾರತ ತನ್ನ ಪ್ರಭಾವ ವೃದ್ಧಿಸಿಕೊಳ್ಳಬೇಕಿದೆ

March 25, 2019

ಮೈಸೂರು: ಪ್ರಸ್ತುತ ಜಾಗತಿಕ ವಿದ್ಯಮಾನಗಳನ್ನು ಅವಲೋ ಕಿಸಿ ವಿಶ್ವ ಮಟ್ಟದಲ್ಲಿ ಭಾರತ ತನ್ನ ಪ್ರಭಾವ ವೃದ್ಧಿಸಿಕೊಳ್ಳಲು ಒತ್ತು ನೀಡಬೇಕಿದೆ ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾನಿಲಯದ (ಜೆಎನ್‍ಯು) ಪಶ್ಚಿಮ ಏಷ್ಯಾ ಅಧ್ಯಯನ ಕೇಂದ್ರದ ಮಾಜಿ ಅಧ್ಯಕ್ಷ ಪ್ರೊ. ಎ.ಕೆ.ಪಾಷ ಅಭಿಪ್ರಾಯಪಟ್ಟರು. ಮೈಸೂರಿನ ಮಹಾರಾಜ ಕಾಲೇಜಿನ ಸ್ನಾತಕೋತ್ತರ ಪದವಿಯ ಅಂತಾರಾಷ್ಟ್ರೀಯ ಸಂಬಂಧಗಳು ವಿಭಾಗ, ವಿದ್ಯಾವರ್ಧಕ ಕಾನೂನು ಕಾಲೇಜು, ಆಡಳಿತ ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ `ಭಾರತೀಯ ವಿದೇಶಾಂಗ ನೀತಿ: 21ನೇ ಶತ ಮಾನದಲ್ಲಿ…

ಪ್ರಬಂಧ ಮಂಡನೆ, ಸಂವಾದ
ಮೈಸೂರು

ಪ್ರಬಂಧ ಮಂಡನೆ, ಸಂವಾದ

March 25, 2019

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಭಾಷಾ ಪ್ರಯೋಗಾಲಯದಲ್ಲಿ ಸೋಮವಾರ ನಡೆದ ಪ್ರಬಂಧ ಮಂಡನೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಎರಡು ವಿಷಯಗಳನ್ನು ಕುರಿತಂತೆ ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು. `ಕಟ್ಟುತ್ತೇವ ನಾವು ಕಟ್ಟುತೇವ’ ಕವಿತೆ ಕುರಿತು ಪ್ರಬಂಧ ಮಂಡಿಸಿದ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ಟಿ.ಎನ್.ಪುಟ್ಟರಾಜು, ಬಾಬರಿ ಮಸೀದಿ ಧ್ವಂಸಗೊಳಿಸಿದ ಘಟನೆ ವೇಳೆ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ನಡುವೆ ಸಂಘರ್ಷ ಉಂಟಾಗಿತ್ತು. ಆಗ ಒಡೆದ ಮನಸ್ಸುಗಳನ್ನು ಕಟ್ಟುವ ಆಶಯದೊಂದಿಗೆ ಸತೀಶ್ ಕುಲಕರ್ಣಿ ಅವರಿಂದ `ಕಟ್ಟುತ್ತೇವ…

ಬೆಂಗಳೂರು ದಕ್ಷಿಣದಿಂದ ಮೋದಿ,  ವೈನಾಡ್‍ನಿಂದ ರಾಹುಲ್ ಗಾಂಧಿ?
ಮೈಸೂರು

ಬೆಂಗಳೂರು ದಕ್ಷಿಣದಿಂದ ಮೋದಿ, ವೈನಾಡ್‍ನಿಂದ ರಾಹುಲ್ ಗಾಂಧಿ?

March 25, 2019

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಉತ್ತರ ಭಾರತದ ಜೊತೆಗೆ ದಕ್ಷಿಣ ಭಾರತದಲ್ಲೂ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ರಾಜ ಕೀಯ ವಲಯದಲ್ಲಿ ಕೇಳಿಬರುತ್ತಿದೆ. ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಕೇಂದ್ರ ಸಚಿವ ದಿವಂಗತ ಅನಂತ ಕುಮಾರ್ ಅವರು ಪ್ರತಿನಿಧಿಸಿದ್ದ ಬೆಂಗ ಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ. ಮೋದಿ ಅವರು ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಬಿಜೆಪಿ ಕೇಂದ್ರ…

ಸುಮಲತಾ ಅಂಬರೀಶ್ ಪರವಾಗಿ ನಿಂತಿರುವ 6 ಯುವ ಕಾಂಗ್ರೆಸ್ ಪದಾಧಿಕಾರಿಗಳ ಉಚ್ಚಾಟನೆ
ಮೈಸೂರು

ಸುಮಲತಾ ಅಂಬರೀಶ್ ಪರವಾಗಿ ನಿಂತಿರುವ 6 ಯುವ ಕಾಂಗ್ರೆಸ್ ಪದಾಧಿಕಾರಿಗಳ ಉಚ್ಚಾಟನೆ

March 25, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಆಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ನಿಂತಿರುವ ಯುವ ಕಾಂಗ್ರೆಸ್ ಪದಾಧಿಕಾರಿಗಳ ಉಚ್ಛಾಟನೆ ಪರ್ವ ಮುಂದುವರೆದಿದೆ.ನಿನ್ನೆ ಇಂಡುವಾಳು ಸಚ್ಚಿದಾನಂದ, ಹನಕೆರೆ ಶಶಿಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದ ಕಾಂಗ್ರೆಸ್, ಇಂದು ಕೂಡ ಯುವ ಕಾಂಗ್ರೆಸ್‍ನ 6 ಪದಾಧಿಕಾರಿಗಳನ್ನು ಉಚ್ಚಾಟನೆ ಮಾಡಿ ಯುವ ಕಾಂಗ್ರೆಸ್ಸಿನ ರಾಜ್ಯ ಕಾರ್ಯದರ್ಶಿ ಗೀತಾ ರಾಜಣ್ಣ ಆದೇಶ ಹೊರಡಿಸಿದ್ದಾರೆ. ಯುವ ಕಾಂಗ್ರೆಸ್‍ನ ಜಿಲ್ಲಾ ಉಪಾಧ್ಯಕ್ಷ ಅರವಿಂದ್ ಕುಮಾರ್, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ್, ನಾಗಮಂಗಲ ವಿಧಾನಸಭಾ ಕ್ಷೇತ್ರದ…

ಇಂದು ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ
ಮೈಸೂರು

ಇಂದು ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ

March 25, 2019

ಮೈಸೂರು: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ನಾಳೆ (ಸೋಮವಾರ) ಪ್ರಮುಖ ಪಕ್ಷಗಳ ಘಟಾನು ಘಟಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಂಸದ ರಾದ ಆರ್.ಧ್ರುವನಾರಾಯಣ್, ಪ್ರತಾಪ್ ಸಿಂಹ, ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್, ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವ ಎ.ಮಂಜು ಸೇರಿ ದಂತೆ ಅನೇಕ ಮುಖಂಡರು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಪ್ರತಾಪ್ ಸಿಂಹ: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು…

ಲೋಕಸಭಾ ಚುನಾವಣಾ ಕರ್ತವ್ಯದಿಂದ  ನುಣುಚಿಕೊಳ್ಳುವವರ ವಿರುದ್ಧ ಕಠಿಣ ಕ್ರಮ
ಮೈಸೂರು

ಲೋಕಸಭಾ ಚುನಾವಣಾ ಕರ್ತವ್ಯದಿಂದ ನುಣುಚಿಕೊಳ್ಳುವವರ ವಿರುದ್ಧ ಕಠಿಣ ಕ್ರಮ

March 25, 2019

ಮೈಸೂರು: ಸಾರ್ವತ್ರಿಕ ಚುನಾವಣೆಯ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಸಿಬ್ಬಂದಿಗಳಿಗೆ ಬಿಸಿ ಮುಟ್ಟಿಸಲು ಚುನಾವಣಾ ಆಯೋಗ ಮುಂದಾಗಿದ್ದು, ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳ ಮಾಹಿತಿ ಪಡೆದು ಟ್ರೈಸ್ ಸಾಫ್ಟ್‍ವೇರ್‍ನಲ್ಲಿ ಸಂಗ್ರಹಿಸಿಟ್ಟಿದೆ. ಆ ಮೂಲಕ ಸುಳ್ಳು ನೆಪ ಹೇಳಿ ಕರ್ತವ್ಯದಿಂದ ಮುಕ್ತಿ ಪಡೆಯಲು ಬರುವವರಿಗೆ ಬಿಸಿ ಮುಟ್ಟಿಸಲು ಸಜ್ಜಾಗಿದೆ. ವಿಧಾನಸಭಾ, ಲೋಕಸಭಾ ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಕರ್ತವ್ಯಕ್ಕೆ ನಿಯೋ ಜನೆಗೊಂಡ ಸಿಬ್ಬಂದಿಗಳಲ್ಲಿ ಹಲವರು ವಿವಿಧ ಕಾರಣ ನೀಡಿ ಕರ್ತವ್ಯದಿಂದ ಮುಕ್ತಿ ನೀಡುವಂತೆ ದುಂಬಾಲು ಬೀಳುತ್ತಿದ್ದದ್ದು ಸಾಮಾನ್ಯವಾಗಿತ್ತು. ಮತ…

1 1,065 1,066 1,067 1,068 1,069 1,611
Translate »