ಕೋಮುವಾದಿಗಳನ್ನು ದೂರವಿಡಲು ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಿವೆ
ಮೈಸೂರು

ಕೋಮುವಾದಿಗಳನ್ನು ದೂರವಿಡಲು ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಿವೆ

March 25, 2019

ಮೈಸೂರು: ಕೋಮುವಾದಿಗಳನ್ನು ದೂರ ವಿಡಲು ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಿವೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಇಂದಿಲ್ಲಿ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ನಂತರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ಹಾಗೂ ಕೋಮುವಾದಿಗಳ ಪರವಾಗಿರುವ ಬಿಜೆಪಿಯನ್ನು ದೂರವಿಡುವ ಸಲುವಾಗಿ ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಈ ಚುನಾವಣೆಯಲ್ಲಿ ಒಂದಾಗಿವೆ ಎಂದರು. ರಾಜ್ಯದಲ್ಲಿ ಶೇಕಡ 48 ರಷ್ಟು ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರಿದ್ದರೂ ಬಿಜೆಪಿ ಚುನಾವಣೆಯಲ್ಲಿ ಒಂದೇ ಅಭ್ಯರ್ಥಿ ಪ್ರಾತಿನಿಧ್ಯ ನೀಡಿರುವುದೇ ಅದಕ್ಕೆ ಸಾಕ್ಷಿ ಎಂದ ಅವರು, ಸಾಮಾಜಿಕ ನ್ಯಾಯದ ಪ್ರಬಲ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ಕರ್ನಾಟಕದಲ್ಲಿ ನಿಶ್ಚಿತವಾಗಿ 28ಕ್ಕೆ 20 ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿದ್ದು, ಮೈಸೂರು-ಕೊಡಗು ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ನನ್ನನ್ನು ಕಣಕ್ಕಿಳಿಸಿರುವುದು ನನ್ನ ಸೌಭಾಗ್ಯ. ಎರಡೂ ಪ್ರಬಲ ಪಕ್ಷಗಳ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಿ ಜನರ ಬೆಂಬಲ ಪಡೆದು ಗೆಲ್ಲಿಸುತ್ತಾರೆಂಬ ವಿಶ್ವಾಸ ನನಗಿದೆ ಎಂದು ವಿಜಯಶಂಕರ್ ಇದೇ ವೇಳೆ ನುಡಿದರು. ಸಣ್ಣಪುಟ್ಟ ಭಿನ್ನಾಭಿ ಪ್ರಾಯಗಳನ್ನು ಸರಿಪಡಿಸಿ ಮೈತ್ರಿ ಧರ್ಮ ಪಾಲಿಸಿ ಕೆಲಸ ಮಾಡುತ್ತಾರೆ. ಎರಡೂ ಪಕ್ಷಗಳ ಮುಖಂಡರು ಒಂದಾಗಿ ಕೋಮುವಾದಿ ಬಿಜೆಪಿ ವಿರುದ್ಧ ಪ್ರಚಾರ ಮಾಡಿ ಚುನಾವಣೆಯಲ್ಲಿ ತಮ್ಮನ್ನು ನಿಶ್ಚಿತವಾಗಿ ಗೆಲ್ಲಿಸುತ್ತಾರೆ ಎಂದ ವಿಜಯಶಂಕರ್, ರಾಜ್ಯ ಸರ್ಕಾರ ಇನ್ನೂ ನಾಲ್ಕು ವರ್ಷ ಸುಭದ್ರವಾಗಿರುತ್ತದೆ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಕಾಂಗ್ರೆಸ್, ಜೆಡಿಎಸ್ ಒಟ್ಟಿಗೆ ಪ್ರಚಾರದಲ್ಲಿ ಭಾಗವಹಿಸಲಿವೆ
ಮೈಸೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಸಮನ್ವಯದ ಕೊರತೆ ಏನಿಲ್ಲ. ಎರಡೂ ಪಕ್ಷದ ನಡುವೆ ಹೊಂದಾಣಿಕೆ ಆಗಿರುವುದರಿಂದ ಇಬ್ಬ ರಿಗೂ ಹೊಣೆಗಾರಿಕೆ ಇದೆ. ಇಬ್ಬರೂ ಒಟ್ಟಾಗಿಯೇ ಹೋಗುತ್ತೇವೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಇಂದಿಲ್ಲಿ ಹೇಳಿದರು. ನಾಮಪತ್ರ ಸಲ್ಲಿಸುವ ಮುನ್ನ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲು ಆಗಮಿಸಿದ್ದ ಅವರು, ಬಳಿಕ ಮಾಧ್ಯಮಗ ಳೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಸಮನ್ವ ಯದ ಕೊರತೆ ಎದ್ದು ಕಾಣುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ಭಾಗದಲ್ಲಿ ಪ್ರಬಲ ಪಕ್ಷಗಳಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಸದಾ ಒಬ್ಬರನ್ನೊಬ್ಬರು ವಿರೋಧಿಸು ತ್ತಲೇ ಬಂದಿದ್ದರಿಂದ ಇದು ಸಹಜ. ಆದರೆ ಭಿನ್ನಾಭಿಪ್ರಾಯವಿಲ್ಲ. ಮುಂದಿನ ದಿನಗಳಲ್ಲಿ ಇದು ಸರಿ ಹೋಗಲಿದ್ದು, ಇಬ್ಬರೂ ಒಟ್ಟಿಗೆ ಪ್ರಚಾರದಲ್ಲಿ ಪಾಲ್ಗೊಂಡು ತಂತ್ರ ರೂಪಿಸಿ ಚುನಾವಣಾ ಹೋರಾಟದಲ್ಲಿ ಖಂಡಿತ ಯಶಸ್ವಿಯಾಗಲಿದ್ದೇವೆ ಎಂದರು.

ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯವೇ ಇಲ್ಲ: ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯವೇ ಇಲ್ಲ. ಹೀಗಾಗಿ ತಾವು ಬಿಜೆಪಿ ಬಿಟ್ಟಿದ್ದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಾಮಾಜಿಕ ನ್ಯಾಯದ ಪರ ವಾಗಿದ್ದೇವೆ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳುವ ಬಿಜೆಪಿಯವರು ಹಿಂದುಳಿದ ವರ್ಗಗಳಿಗೆ ಯಾವುದೇ ಕ್ಷೇತ್ರದಲ್ಲಿ ಟಿಕೆಟ್ ನೀಡಿಲ್ಲ ಎಂದು ದೂರಿದರು. ರಾಜ್ಯದಲ್ಲಿ ಮೋದಿ ಅಲೆ ಇದೆ ಎಂಬುದನ್ನ ತಾವು ಒಪ್ಪುವುದಿಲ್ಲ. ಯಾವ್ಯಾವ ಕ್ಷೇತ್ರದಲ್ಲಿ ಯಾವ್ಯಾವ ಅಭ್ಯರ್ಥಿUಳ ಪರವಾಗಿ ಜÀನರು ಮತ ಹಾಕುತ್ತಾರೋ ಅವರೇ ಹುಲಿಗಳಾಗುತ್ತಾರೆ ಎಂದರು.

Translate »